ಸುದ್ದಿ9 ಕೈಕಂಬ: ಕಾವ್ಯ ಕೇವಲ ಸಂವಹನವಲ್ಲ, ಕಾವ್ಯ ಅರ್ಥ ಗ್ರಹಿಸದೆ ತಟ್ಟುವುದಿಲ್ಲ. ಕಾವ್ಯವನ್ನು ಅತರ್ೈಸಿದವನಿಗೆ ಮಾತ್ರ ಕಾವ್ಯದ ಶಕ್ತಿ ಏನೆಂದು ತಿಳಿಯುತ್ತದೆ ಎಂದು ಉದಯವಣಿ ಪತ್ರಿಕೆಯ ಪತ್ರಕರ್ತ ಮನೋಹರ್ ಪ್ರಸಾದ್ ಅವರು `ಶತಮಾನದ ನಮನ’ ಎಂಬ ವಿಶೇಷ ಉಪನ್ಯಾಸದಲ್ಲಿ ಹೇಳಿದ್ದಾರೆ.

ನವೋದಯದ ಕವಿ ಮುದ್ದಣ, ನವ್ಯ ಕವನದ ಪಿತಾಮಹ ಗೋಪಾಲಕೃಷ್ಣ ಅಡಿಗ ಕಾವ್ಯಕ್ಕೆ ಹೊಸ ಭಾಷ್ಯ ಬರೆದರು. ನವ್ಯ ಕವನವನ್ನು ಬರೆದ ಅಡಿಗರು ಭಾವಗೀತೆಗಳನ್ನು ಭಾವಗೀತೆಗಳನ್ನು ಬರೆದರು. ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಇರುವುದೆಲ್ಲವ ಬಿಟ್ಟು ಇರದಿದೆಡೆಗೆ ಸಾಗುವುದೇ ಜೀವನ…’ ಎಂದು ಅಡಿಗರು ಹೇಳಿದಂತೆ ಕಾವ್ಯದ ಅರ್ಥ.
ಕಾವ್ಯದ ಅರ್ಥ ತಿಳಿಯದೆ ಕಾವ್ಯ ಓದುವುದು ವ್ಯರ್ಥ. ಕಾವ್ಯದ ಆಸಕ್ತಿ ಹುಟ್ಟುವುದು ಅದನ್ನು ಅಥರ್ೈಸಿದಾಗ.
ಆದರೆ ಇಂದು ಕಾವ್ಯವನ್ನು ಕಟ್ಟುವ ಕೆಲಸ ಕಡಿಮೆಯಾಗುತ್ತಿದೆ. ಆಧುನೀಕತೆಯ ಭರಾಟೆಯಲ್ಲಿ ಕಾವ್ಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಮಜ್ಜಿಯೊಳಗಿನ ಬೆಣ್ಣೆಯಂತೆ, ಅಂಬಿಗಾ ನಾ ನಿನ್ನ ಅಂಬಿಗಾ ಎಂಬ ಭಜನೆಯ ಸಾಲಿನೊಂದಿಗೆ ಕಾವ್ಯದ ಅರ್ಥವನ್ನು ಮನೋಹರ ಪ್ರಸಾದ್ ತಿಳಿಸಿದರು.
ಅಲ್ಲದೆ ಭೈರಪ್ಪ ಅವರ `ಯಾನ; ಕೃತಿ 15 ಸಾವಿರ ಪ್ರತಿಗಳು ದಾಖಲೆಯೊ<ದಿಗೆ ಮಾರಾಟವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಯ್ಯಾಋರ ಬದುಕು ಮತ್ತು ಬರಹದ ಬಗ್ಗೆ ಮಂಗಳೂರು ಆಕಾಶವಣಿಯ ನಿಲಯ ನಿದರ್ೇಶಕರಾದ ಸದಾನಂದ ಪೆರ್ಲ, ಪೇಜಾವರ ಸದಾಶಿವ ರಾಯರ ಹೊಸಹಾದಿ ಕುರಿತು ಸಾಹಿತಿ ಚಂದ್ರಕಲಾ ನಂದಾವರ ಉಪನ್ಯಾಸ ನೀಡಿದರು. ಶಾರದಾ ಕಾಲೇಜಿನ ಪ್ರಾಂಶುಪಾಲೆ ಲೀಲಾ ಉಪಧ್ಯಾಯ ಗೌರವ ಉಪಸ್ಥಿತರಿದ್ದರು.

