ಸುದ್ದಿ9ಕೈಕಂಬ: ಕಾವ್ಯವು ಕಾಲಾತೀತ, ಅಥರ್ಾತೀತ, ಶಬ್ದಾತೀತ. ರಸಾತ್ಮಕವಾದ ವಾಕ್ಯವೇ ಕಾವ್ಯ, ಹಿತಮಿತ ಮೃದು ವಚನವೇ ಕಾವ್ಯ. ಎಂದು ಹಿರಿಯ ಕವಿಗಳಾದ ಜಿಎಸ್ ಉಬರಡ್ಕ ಹೇಳಿದರು. ಅವರು ವಿದ್ಯಾಥರ್ಿ ಕವಿಗೋಷ್ಠಿಯ ಸಂದರ್ಭ ಕಾವ್ಯದ ಬಗ್ಗೆ ಸುಧೀರ್ಘ ಉಪನ್ಯಾಸ ಮಾಲೆ ಸಲ್ಲಿಸಿದರು.
ಮಾತು ಹಾಗೂ ಮೌನ ಇದರ ಅರ್ಥವ್ಯತ್ಯಾಸವನ್ನು ಕವಿಯಾದವನು ಗುರುತಿಸಿ ಅದರ ರಸಸ್ವಾದವನ್ನು ಕಾವ್ಯದ ಮೂಲಕ ಚಿತ್ರಿಸುತ್ತಾನೆ. ಮಾತು, ಮೌನ ಕಾವ್ಯದಲ್ಲಿ ಮುಖ್ಯ ಎಂಬ ಬಗ್ಗೆ ಸೋದಾರಣವಾಗಿ ವಿವರಿಸಿದರು.
ಒಂದು ಶಬ್ದವೇ ಅನೇಕ ಗೂಢತೆಗಳನ್ನು, ನಿಗೂಢತೆಗಳನ್ನು ತಿಳಿಸುತ್ತದೆ. ಉತ್ಪ್ರೇಕ್ಷೆಗೊಳಿಸಿದ ಸುಂದರ ವಾಕ್ಯವೊಂದು ಕಾವ್ಯವಾಗುತ್ತದೆ.
`ಯಾರಿಗಾಗಿ ಧುಮ್ಮುಕ್ಕುವೆ ಎಡೆಬಿಡದೆ
ನಿರಂತರ ನೀರೆ’
ಎಂಬ ವಾಕ್ಯದಲ್ಲಿ ನೀರು ಹಾಗೂ ಸ್ತ್ರೀ ಬಗ್ಗೆ ಉಲ್ಲೇಖಗೊಂಡಿದೆ. ಈ ಎರಡೇ ವಾಕ್ಯದಲ್ಲಿ ಎಷ್ಟೊಂದು ಅರ್ಥಗಳಿವೆ ಎಂಬುವುದನ್ನು ಅಥರ್ೈಸಿದರೆ ಕಾವ್ಯ ತಿಳಿಸುತ್ತದೆ.
ಆಕಾಶ, ಜಾರು
ಸೌಂದರ್ಯ ಸೋರುತ್ತಿದೆ
ನೀನು ಯಾರಿಗಾಗಿ?
ಸಲಿಲ ಸೌಂದರ್ಯದ
ಬೆಳ್ಳಿಯಂಚಿನ ಮಡಿ
ಭಗೀರಥ ಸುರಿಸಿದ ಗಂಗೆ
ಬೀಳುವುದರಲ್ಲಿ ಇರುವುದಿದು
ಇನಿಯನೊಂದಿಗೆ.
ಎಂಬ ಕವನವನ್ನು ವಾಚಿಸಿ ಅದರ ಬಗ್ಗೆ ವ್ಯಾಖ್ಯಾನ ಸಲ್ಲಿಸಿದರು.
ಕಾವ್ಯದಲ್ಲಿ ಆಧ್ಯಾತ್ಮ,. ಮೌನ, ಎಲ್ಲವನ್ನೂ ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಕಾವ್ಯದ ಅರ್ಥ ಸುದೆಯನ್ನು ಅಥರ್ೈಸಿದರೆ ಮಾತ್ರ ಕಾವ್ಯ ಪರಿಪೂರ್ಣ. ಕಾವ್ಯವನ್ನು ಅನುಭವಿಸಬೇಕು, ಅದರ ಅರ್ಥವ್ಯತ್ಯಾಸಗಳನ್ನು ಅರಿಯಬೇಕು ಎಂದು ಕಾವ್ಯದ ಬಗ್ಗೆ ದೃಷ್ಟಾಂತದೊಂದಿಗೆ ನುಡಿದರು.
ಗೋಷ್ಠಿಯಲ್ಲಿ ವಿದ್ಯಾಥರ್ಿಗಳಾದ ಜಯಶ್ರೀ ಇಡ್ಕಿದು, ಶಬೀನಾ ಬಾನು ವೈ ಕೆ ಬಬ್ಬುಕಟ್ಟೆ, ದೇವಿಕಾ ಮೂಡಬಿದ್ರೆ, ದುಗರ್ಾಪ್ರಸಾದ್ ದಿವಾಣ ಮೂಲ್ಕಿ, ಪ್ಲವೀಯಾ ಜ್ಯೋತಿ ಡಿಸೋಜಾ, ಎನ್ ಕೆ. ನೇರಳಕಟ್ಟೆ, ಶ್ರೀದೇವಿ ಭಟ್ ಕಲ್ಲಡ್ಕ, ವಿದ್ವತ್ ಕೃಷ್ಣ ಎಸ್ ಕವನವನ್ನು ವಾಚಿಸಿದರು. ಅಲ್ಲದೆ ಕವಿಗಳನ್ನು ಸನ್ಮಾನಿಸಲಾಯಿತು. ಭಾಸ್ಕರ ಆಡ್ವಳ ಉಪಸ್ಥಿತರಿದ್ದರು.










