ಕೈಕಂಬ:ವಾಮಂಜೂರಿನ ಪವನ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಂಗಳವಾರ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿದೆ. ಪವನ್ ತಂದೆ ವಾಮಂಜೂರು ರೋಹಿ 8 ವರ್ಷದ ಹಿಂದೆ ವಾಮಂಜೂರಿನಲ್ಲಿ ಹಾಡುಹಾಗಲೇ ಕೊಲೆಯಾಗಿದ್ದ. ಪವನ್ ಕೂಡ 3 ಪ್ರಕರಣದಲ್ಲಿ ಇದ್ದು ಅರೋಪಿಯಾಗಿದ್ದ ಇತ್ತೀಚೆಗೆ ಜೈಲಿನಿಂದ ಜಾಮೀನು ಮುಖಾಂತರ ಹೊರ ಬಂದಿದ್ದ. ಈತನ ಕೊಲೆಗೆ 2 ವರ್ಷಗಳಿಂದ ದುಷ್ಕರ್ಮಿಗಳು ಸಂಚು ನಡೆಸುತ್ತಿದ್ದರು. ಸೋಮವಾರ ರಾತ್ರಿ ವಾಮಂಜೂರಿನ ಕುಟ್ಟಿಪಲಿಕೆ ಎಂಬಲ್ಲಿ ತಲವಾರಿನಿಂದ ಕೊಚ್ಚಿ ಕೊಲೆಮಾಡುವಲ್ಲಿ ದುಷ್ಕರ್ಮಿಗಳು ಯಾಶಸ್ವಿಯಾಗಿದ್ದಾರೆ. ಪೋಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

