ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ತರಬೇಕು ತಾನು ತನ್ನದು ಎಂದು ಬದುಕುವವರ ಮುಂದೆ ಪರರ ಸೇವೆಗಾಗಿ ಬದುಕನ್ನು ಮೀಸಲಿಡಬೇಕು ಎನ್ನುವ ದೃಡ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮೃತಸಂಜೀವಿನಿ ಎನ್ನುವ ಸೇವಾ ಸಂಸ್ಥೆ ಗುರು ವಜ್ರದೇಹಿ ಅವರ ಮಾರ್ಗದರ್ಶನದೊಂದಿಗೆ ಇಂದು ಅನೇಕ ಯುವ ಜನತೆಯನ್ನು ಸೇವಾ ಕಾರ್ಯದ ಜೊತೆ ಜೋಡಿಸಿಕೊಂಡು ಇಂದಿಗೆ 63 ಕುಟುಂಬಕ್ಕೆ ಹೆಗಲಾಗಿದೆ .ಅಮೃತಸಂಜೀವಿನಿ ತನ್ನ 23 ನೇ ಸೇವಾ ಯೋಜನೆಯ ಸಹಾಯವನ್ನು ಬೆಂಜನಪದವಿನ ಅನಾರೋಗ್ಯದ ದೃಷ್ಟಿಯಿಂದ ಜನಾರ್ದನ ಎನ್ನುವರಿಗೆ ನೀಡಲಾಯಿತು .
ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬ ಊರಿನಲ್ಲಿ ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳಿರುವ ಒಂದು ಕುಟುಂಬ. ಮನೆಯ ಯಜಮಾನ ಜನಾರ್ದನ ಶೆಟ್ಟಿಗಾರ್ ಸಂಸಾರ ನಿರ್ವಹಣೆಗಾಗಿ ಮಂಗಳೂರಿನಲ್ಲಿ ಟೈಲರಿಂಗ್ ವೃತ್ತಿ ಮಾಡುತಿದ್ದರು. ಒಂದು ದಿನ ರಾತ್ರಿ ಹತ್ತಿರದ ಮನೆಯ ಗೃಹ ಪ್ರವೇಶಕ್ಕೆ ಹೋಗಿ ಬರುವಾಗ ಶೌಚಾಲಯಕ್ಕಾಗಿ ತೆಗೆದಿದ್ದ ಬೃಹತ್ ಹೊಂಡಕ್ಕೆ ಇವರು ಬಿದ್ದ ಪರಿಣಾಮ ಸೊಂಟದ ಕೆಳಗೆ ಸ್ವಾಧೀನವನ್ನೇ ಕಳಕೊಳ್ಳಬೇಕಾಯಿತು. ಒಂದು ಶಸ್ತ್ರಚಿಕಿತ್ಸೆ ನಡೆದಿದ್ದರೂ ಫಲಕಾರಿ ಆಗಲಿಲ್ಲ. ಆದರಿಂದ ಇವರ ಹೆಂಡತಿ ಬೀಡಿ ಕಟ್ಟಿ ಜೀವನಕ್ಕೆ ಆಧಾರವಾಗ ಬೇಕಾದ ಪರಿಸ್ಥಿತಿ ಈ ಕುಟುಂಬಕ್ಕೆ ಬಂದಿತ್ತು. 3 ಹಾಗೂ 9ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಇಬ್ಬರು ಮಕ್ಕಳು ಹಾಗೂ ಮಲಗಿದಲ್ಲಿಯೇ ಇರುವ ಮನೆಯ ಯಜಮಾನ. ಒಂದು ಕಡೆ ಮಕ್ಕಳ ಶಾಲಾ ಖರ್ಚು ಮತ್ತೊಂದೆಡೆ ಗಂಡನ ಚಿಕಿತ್ಸಾ ಖರ್ಚು ಅದರ ಮದ್ಯೆ ಗಂಡನ ಸೇವೆ ಇವೆಲ್ಲವುದರ ಮದ್ಯೆ ಮನೆಯನ್ನು ನಡೆಸುವುದೇ ಕಷ್ಟವಾಗಿತ್ತು.
ಇವರ ಈ ನೋವಿನ ಮಾತು ಸಂಜೀವಿನಿಗಳ ತಂಡ ಕೇಳಿ ಅವರ ಕುಟುಂಬಕ್ಕೆ ಸಮಾಜದ ಸಹಕಾರದೊಂದಿಗೆ 70,000 ಧನ ಸೇವೆಯನ್ನು ಮಾಡಲಾಯಿತು.
ಇದರ ಜೊತೆಗೆ ಸಮಾಜಕ್ಕಾಗಿಯೇ ಸಂಸ್ಕಾರಯತನಾಗಿ, ಇಡೀ ಊರಿಗೆ ಒಬ್ಬ ಮಾದರಿ ವ್ಯಕ್ತಿಯಾಗಿ ಬದುಕಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಶರತ್ ಮಡಿವಾಳ ಅವರ ಸಮಾಜಕ್ಕರ್ಪಿತವಾದ ಜೀವನಕ್ಕೆ ಗೌರವರ್ಪಣೆಯಾಗಿ ಕುಟುಂಬಕ್ಕೆ 37,051 ರೂ ಅನ್ನು ಸಾಂತ್ವನ ನಿಧಿಯೆಂದು ಕೊಡಲಾಯಿತು. ಹಾಗೂ 38ನೇ ತುರ್ತು ಸೇವಾ ಯೋಜನೆಯಡಿ ಅಪಘಾತಕ್ಕೀಡಾಗಿದ್ದ ಪ್ರಸನ್ನ ಎಂಬವರಿಗೆ 5,000₹ ಮತ್ತು 39ನೇ ತುರ್ತು ಸೇವಾಯೋಜನೆಯಾಗಿ ಅನಾರೋಗ್ಯದ ನಿಮಿತ್ತ ಜಯಪ್ರಸಾದ್ ಎಂಬವರಿಗೆ 5,000 ಗಳ ಸಹಾಯ ಹಸ್ತ ನೀಡಿತು.
ಒಟ್ಟಾರೆಯಾಗಿ ಅಮೃತಸಂಜೀವಿನಿಲ ಮಂಗಳೂರು ತನ್ನ 23 ತಿಂಗಳ ಹಾದಿಯಲ್ಲಿ 23 ಮಾಸಿಕ ಯೋಜನೆ ಹಾಗೂ 40 ತುರ್ತು ಸೇವಾ ಯೋಜನೆಯ ಮೂಲಕ ಒಟ್ಟು 63 ಕುಟುಂಬಗಳಿಗೆ ಸಮಾಜದಿಂದ ಸಂಗ್ರಹಿಸಿದ 17,47,550 ಗಳನ್ನು ಸಮರ್ಪಕವಾಗಿ ಸಮಾಜಕ್ಕೆ ಅರ್ಪಿಸಿದೆ ಎಂಬ ಹೆಮ್ಮೆ ಸಂಜೀವಿನಿಗಳದ್ದು.
23ನೇ ಸೇವಾ ಯೋಜನೆಗೆ ಸಹಕರಿಸಿದ ಎಲ್ಲಾ ಪ್ರೀತಿಯ ಸಹೃದಯಿ ಸಂಜೀವಿನಿಗಳಿಗೆ ಕೃತಜ್ಞತೆ ಹೇಳುತ್ತಾ ಅಮೃತಸಂಜೀವಿನಿಲ ತನ್ನ 24ನೇ ಸೇವಾ ಯೋಜನೆಗೆ ಮುಂದಡಿ ಇಡುತ್ತಿದೆ. ನಿಮ್ಮೆಲ್ಲರ ಸಹಕಾರ ಮುಂದಿನ ದಿನಗಳಲ್ಲಿಯೂ ಹೀಗೇ ಇರಲಿ ಎಂದು ಕೃತಜ್ಞರಾಗಿ ವಿನಂತಿಸುತ್ತಿದ್ದೆ.
