ಬಂಟ್ವಾಳ : ತಾಲೂಕಿನ ಬಿ ಸಿ ರೋಡು ಸಮೀಪದ ಕೈಕುಂಜೆ ನಿವಾಸಿ, ಟೆಂಪೋ ರಿಕ್ಷಾ ಚಾಲಕ ಮುಹಮ್ಮದ್ (52) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಬಿ ಸಿ ರೋಡಿನಲ್ಲಿ ಹಲವು ವರ್ಷಗಳಿಂದ ಟೆಂಪೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು ಕೆಲ ಅಲ್ಪ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಈ ಪ್ರಯುಕ್ತ ಬಿ ಸಿ ರೋಡಿನ ಪಾಕರ್ಿನ ಟೆಂಪೋ ರಿಕ್ಷಾ ಚಾಲಕರು ಕಪ್ಪು ಬಾವುಟ ಪ್ರದಶರ್ಿಸಿ ಶೋಕ ವ್ಯಕ್ತಪಡಿಸಿದರು.
ಮೃತರು ಪತ್ನಿ, ಮೂವರು ಪುತ್ರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

