ಕೈಕಂಬ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಗಸ್ಟ್ 2 ಹಾಗೂ 3ರಂದು ನಡೆಯಲಿದ್ದು, ಸಿದ್ಧತೆಗಳು ಒಂದು ಹಂತಕ್ಕೆ ಬಂದು ಮುಟ್ಟಿದೆ. ಆಧ್ಯಾತ್ಮಕ ಶಕ್ತಿಕೇಂದ್ರವಾಗಿ ಗುರುತಿಸಿಕೊಂಡಿದ್ದ ಪ್ರಾಚೀನ ಕಾಲದಲ್ಲಿ ಸುರತ ಮಹರಾಜನಿಂದ ಕಟ್ಟಿಸಲ್ಪಟ್ಟ ಪುಲಿನಾಪುರ ಇಂದು ಪೊಳಲಿಯಾಗಿ ಮಾರ್ಪಟ್ಟಿದೆ. ತುಳುವಲ್ಲಿ ಪುರಲ್ ಎಂದು ಕರೆಯಲ್ಪಡುವ ರಾಜರಾಜೇಶ್ವರಿ ದೇಗುಲದ ಅಂಗಳ ಕನ್ನಡದ ನಾಡುನುಡಿಯನ್ನು ಬೆಳಗಲು ಸರ್ವಸನ್ನದ್ಧವಾಗಿ ನಿಂತುಬಿಟ್ಟಿದೆ.
ನಾನಾ ರೀತಿಯ ಕಾರ್ಯಕ್ರಮಗಳು ನಾನಾ ಭಾಗದಲ್ಲಿ ನಡೆಯಲಿರುವುದು ಇಲ್ಲಿನ ವಿಶೇಷ. ಪೊಳಲಿ ಶೀನಪ್ಪ ಹೆಗ್ಗಡೆ ಸಭಾಂಗಣ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ವೇದಿಕೆ, ಬಡಕಬೈಲು ಪರಮೇಶ್ವರಯ್ಯ ಆವರಣ, ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರಾಂಗಣ ಬಂಟ್ವಾಳ ತಾಲೂಕು ಪೊಳಲಿ ಇಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ನಡೆಯಲಿವೆ. ನಾಡೋಜ ಪ್ರೊ.ಕೆ.ಪಿ.ರಾವ್(ಕಿನ್ನಿಕಂಬಳ ಪದ್ಮನಾಭ ರಾವ್) ಸಮ್ಮೇಳನಾದ ಅಧ್ಯಕ್ಷತೆ ವಹಿಸಲಿದ್ದಾರೆ.
ಆ.3ರ ಶನಿವಾರ ಪೂವಾಹ್ನ8.15 , ಪೊಳಲಿ ಪಲ್ಘುಣಿ ಸೇತುವೆಯಿಂದ ಕನ್ನಡ ಭುವನೇಶ್ವರಿ ದಿಬ್ಬಣ ಹೊರಡಲಿದೆ. ಬಳಿಕ ಸಮ್ಮೇಳನದ ಉದ್ಘಾಟನೆಯನ್ನು ತರಂಗ ಪತ್ರಿಕೆಯ ವ್ಯವಸ್ಥಾಪಕರಾದ ಸಂಧ್ಯಾ ಎಸ್.ಪೈ ಮಾಡಲಿದ್ದು, ಅರಣ್ಯ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ವಿದ್ವಾಂಸರಾದ ಕೊಡಿಮಜಲು ಅನಂತ ಉಪಾಧ್ಯಾಯ, ಹಿರಿಯ ಕಾನೂನು ತಜ್ಞರು ಶ್ರೀನಿವಾಸ ರಾವ್ ನೂಯಿ, ಹಿರಿಯ ರಂಗ ತಜ್ಞರು ಸದಾನಂದ ಸುವರ್ಣ, ಯಕ್ಷಗಾನ ವಿದ್ವಾಂಸರು ಡಾ.ಎಂ ಪ್ರಭಾಕರ ಜೋಷಿ, ಹಿರಿಯ ಭಾಗವತರು ಅಗರಿ ರಘುರಾಮ, ಹಿರಿಯ ಸಂಶೋಧಕರು ಪ್ರೊ.ಎ.ವಿ.ನಾವಡ, ಹಿರಿಯ ಜಾನಪದ ತಜ್ಞರು ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಪೊಳಲಿ ನಿತ್ಯಾನಂದ ಇವರನ್ನು ಸನ್ಮಾನಿಸಲಿದೆ.
ಅಂದು ಮಧ್ಯಾಹ್ನ ಪಾರಂಪರಿಕ ಕೃಷಿ-ಬದುಕು ಎಂಬ ಬಗ್ಗೆ ಗೋಷ್ಠಿ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಡಾ.ಜೀವಂಧರ ಬಲ್ಲಾಳ್ ವಹಿಸಲಿದ್ದಾರೆ. ನಂತರ `ಹಾಸ್ಯ-ಬದುಕಿನಲ್ಲಿ’ ಸಾಂಸ್ಕ್ರತಿ ರಂಗದಲ್ಲಿ- ಎಂಬ ಬಗ್ಗೆ ಗೋಷ್ಠಿ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಖ್ಯಾತ ಹನಿಗವಿ ದುಂಡಿರಾಜ್ ವಹಿಸಲಿದ್ದಾರೆ.
ಮೂರು ಗಂಟೆಗೆ ಮಹಮ್ಮದ್ ಬಡ್ಡೂರು ನೇತೃತ್ವದಲ್ಲಿ ಕವಿಗೋಷ್ಠಿ ನಡೆಯಲಿದ್ದು ನಾನಾ ಕವಿಗಳಿಂದ ವಿಗೋಷ್ಠಿ ನಡೆಯಲಿದೆ.ಸಂಜೆ ಪೊಳಲಿ-ಇತಿಹಾಸ -ಸಾಂಸ್ಕ್ರತಿಕ ಸಂಪದ ಎಂಬ ಬಗ್ಗೆ ಗೋಷ್ಠಿ ಪ್ರೊ ತುಕರಾಮ ಪೂಜಾರಿ ನೇತೃತ್ವದಲ್ಲಿ ನಡೆಯಲಿದೆ. ಇತಿಹಾಸ ತಜ್ಞ ಪುಂಡಿಕಾಯಿ ಗಣಪತಿ ಭಟ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಮ್ಮೇಳನದ ವಿಶೇಷತೆಗಳು:ಮೃಣ್ಮಯ ಮೂತರ್ಿ ಪೊಳಲಿ ರಾಜರಾಜೇಶ್ವರೀ ಪ್ರಾಂಗಣದ ಬಡಕಬೈಲು ಪರಮೇಶ್ವರಯ್ಯ ಆವರಣದಲ್ಲಿ ಪೊಳಲಿ ಶೀನಪ್ಪ ಹೆಗೆಡೆ ಸಭಾಂಗಣ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ವೇದಿಕೆಯಲ್ಲಿ-ಜಿಲ್ಲೆಯ ಸಾಹಿತ್ಯ-ಸಾಂಸ್ಕ್ರತಿಕ ಪರಂಪರೆಯ ಜ್ಞಾನ ವಧರ್ಿನಿ ಗೋಷ್ಠಿಗಳು ಕಾರ್ಯಕ್ರಮಗಳು-ಡಾ.ಅಮ್ಮೆಂಬಳ ಬಾಳಪ್ಪ ವಸ್ತು ಪ್ರದರ್ಶನ -ಪಿ.ಪುರುಷೋತ್ತಮ ಕಾರಂತ ಕಲಾಪ್ರದರ್ಶನ-ಅಡಿಗಳು ಮಾಧವ ಭಟ್ ಪುಸ್ತಕ ಪ್ರದರ್ಶನ-ಮಾರಾಟ-ಅ.ಬಾಳಕೃಷ್ಣ ಶೆಟ್ಟಿ ಪಾರಂಪರಿಕ ವಸ್ತು ಪ್ರದರ್ಶನ-ಬಿ.ಎಂ.ಇದಿನಬ್ಬ ಕನ್ನಡ ಗಣಕ ಪ್ರಾತ್ಯಕ್ಷಿಕೆ-ಉಳಿಪಾಡಿ ರಮೇಶ್ ನಾಕ್ ಭೋಜನ ಪ್ರಾಂಗಣದಲ್ಲಿ ಅತಿಥಿ ಉಪಚಾರ ನಡೆಯಲಿದೆ.
ಸ್ವಾಗತ ದ್ವಾರಗಳು: ಹೆಚ್.ಎಫ್.ಒಡೆಯರ್ ದ್ವಾರ, ಅಕರ್ುಳ ಸುಬ್ರಾಯ ಆಚಾರ್ ದ್ವಾರ, ಪೊಳಲಿ ದೊಡ್ಡವಾಸುದೇವ ಭಟ್ ದ್ವಾರ, ಅಮ್ಮುಂಜೆ ಗುತ್ತು ಶಂಕರ ಶೆಟ್ಟಿ ದ್ವಾರ, ಉಲಿಪಾಡಿ ರಮಾನಾಥ ಮಾರ್ಲ ದ್ವಾರ.
ಸಂಜೆ-4.45- ಗೋಷ್ಠಿ-4 ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಆಗಸ್ಟ್ ಮೂರರಂದು ವಿಶೇಷತೆಗಳು:
ಹಿರಿಯ ಕವಿ ಜಿ.ಎಸ್.ಉಬರಡ್ಕ ಅವರ ನೇತೃತ್ವದಲ್ಲಿ ವಿದ್ಯಾಥರ್ಿ ಕವಿಗೋಷ್ಠಿ ನಡೆಯಲಿದೆ. ವಿಶೇಷ ಉಪನ್ಯಾಸಗಳು : ಶತಮಾನದ ನಮನ ಎಂಬ ಬಗ್ಗೆ ಗೋಷ್ಠಿಯು ಪತ್ರಕರ್ತ ಮನೋಹರ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಯಕ್ಷಗಾನ: ಬದಲಾವಣೆಯ ಸವಾಲುಗಳು ಎಂಬ ಗೋಷ್ಠಿ, ಡಾ.ವಸಂತ ಕುಮಾರ್ ಪೆರ್ಲದಲ್ಲಿ ನಡೆಯಲಿದೆ. ಗೋಷ್ಠಿ 6 ಕೃಷಿಪ್ರಯೋಗ: ಅನುಷ್ಠಾನ -ಬದುಕು ಎಂಬ ಬಗ್ಗೆ :ಡಾ.ಎಲ್.ಸಿ.ಸೋನ್ಸ್ ಮೂಡಬಿದ್ರೆ ಅದ್ಯಕ್ಷತೆಯಲ್ಲಿ ನಡೆಯಲಿದೆ.
ಡಾ.ಬಿ.ಪಿ.ಸಂಪತ್ ಕುಮಾರ್ ಉಜಿರೆ ಇವರ ಅಧ್ಯಕ್ಷತೆಯಲ್ಲಿ ಸಾಹಿತ್ಯ-ಸಂಸ್ಕ್ರತಿ -ಪ್ರಕೃತಿಎಂಬ ಬಗ್ಗೆ ಗೋಷ್ಟಿ ನಡೆಯಲಿದೆ. ಸಂಜೆ ಎಸ್.ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಬಹಿರಂಗ ಅಧಿವೇಶನ
ನಡೆಯಲಿದೆ. ಈ ವೇಳೆ
ಅಪರಾಹ್ನ:3ಕ್ಕೆ: ಅಧ್ಯಕ್ಷತೆ ಧರ್ಮದಶರ್ಿ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ಡಾ.ಎಂ.ಮೋಹನ ಆಳ್ವ ಅವರನ್ನು ಸನ್ಮಾನಿಸಲಿಕ್ಕಿದೆ.
ಸಮಾರೋಪ ಸಮಾರಂಭ:
ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ. ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ರೈಲ್ವೆ ಸಚಿವರು ಡಿ.ವಿ.ಸದಾನಂದ ಗೌಡ, ಶಾಸಕರಾದ ಎಸ್. ಅಂಗಾರ, ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೋ, ಬಿ.ಎ.ಮೊದಿನ್ ಬಾವಾ, ವಿಧಾನ ಪರಿಷತ್ ಕ್ಯಾಪ್ಟನ್ ಗಣೇಶ್ ಕಾಣರ್ೀಕ್, ಐವನ್ ಡಿಸೋಜಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.



