ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸ್ವಸಹಾಯ ಸಂಘಗಳಿಗೆ ಎಸ್ ಬಿ ಐ ಅಧಿಕಾರಿಗಳ ನಿಯೋಗ ಭೇಟಿ ನೀಡಿ ಸಂಘದ ದಾಖಲಾತಿ ಹಾಗೂ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಕಛೇರಿ ಮುಂಬಯಿಯ ಡಿಜಿಎಂ ಪಳನಿ ಸ್ವಾಮಿ, ಬೆಂಗಳೂರು ಎಲ್. ಎಚ್ .ಒ ಚೀಫ್ ಮ್ಯಾನೇಜರ್ ಶೋಭಾ, ಮಂಗಳೂರು ಎಸ್ .ಬಿ. ಐ.ನ ಆರ್ ಎ ಸಿ ಸಿ ಇದರ ಎಸ್ ಬಿಐ ಕಾರ್ಪೋರೇಟ್ ಸೆಂಟರ್ ನ ಅಧಿಕಾರಿ ಮುದ್ರಾಲೋಪ ಮತ್ತುಮಂಗಳೂರು ಎಸ್ .ಬಿ. ಐ.ನ ಆರ್ ಎ ಸಿ ಸಿ ಇದರ ,
ಅಧಿಕಾರಿ ಸ್ವಾತಿ ಅವರನ್ನೊಳಗೊಂಡ ನಿಯೋಗ ಬಂಟ್ವಾಳ ತಾಲೂಕು ವ್ಯಾಪ್ತಿಯ ಅಲ್ಲಿಪಾದೆ ಸಿ.ಎಸ್.ಸಿ. ಕೇಂದ್ರ, ನಾವೂರ ಶ್ರಾವಣ ಸಂಘದ ದಾಖಲಾತಿ ಪರಿಶೀಲನೆ ಹಾಗೂ ವಾರದ ಸಭೆ,ಭೇಟಿ ಮತ್ತು ಪೂಪಾಡಿಕಟ್ಟೆಯಲ್ಲಿ ಜನನಿ ಸಂಘದ ಸದಸ್ಯರ ಸ್ವ-ಉದ್ಯೋಗ ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲನೆ ನಡೆಸಿದರು.

ಯೋಜನೆಯ ಮೂಲಕ ಸಂಘಗಳ ನಿರ್ವಹಣೆ, ವಾರದ ಸಭೆಯಲ್ಲಿ ಪಾಲ್ಗೊಳ್ಳುವಿಕೆ ದಾಖಲಾತಿಗಳ ನಿರ್ವಹಣೆ ಮತ್ತು ಹಣಕಾಸಿನ ವ್ಯವಹಾರಗಳ ವ್ಯವಸ್ಥಿತವಾದ ನಿರ್ವಹಣೆಯ ಬಗ್ಗೆ ನಿಯೋಗದಲ್ಲಿದ್ದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಕಛೇರಿ ಬಿ.ಸಿ. ವಿಭಾಗದ ನಿರ್ದೇಶಕ ಪ್ರವೀಣ್. ಎಂ.ಸಿ., ಯೋಜನಾಧಿಕಾರಿ ಜಗದೀಶ್ ಕುಮಾರ್, ಉಡುಪಿ ಪ್ರಾದೇಶಿಕ ವಿಭಾಗದ ಬಿ.ಸಿ. ಯೋಜನಾಧಿಕಾರಿ ಸುಪ್ರೀತ್ ಕುಮಾರ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಮತ್ತು ದಕ್ಷಿಣ ಕನ್ನಡ ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿ ಪ್ರೇಮನಾಥ್ ಎಸ್.ಹೆಚ್. ಮತ್ತು ಬಂಟ್ವಾಳ ವಲಯ ಮೇಲ್ವಿಚಾರಕಾ ರಾಜೇಶ್ ನಾಯ್ಕ್ ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕಿನ ಆಶಯದಂತೆ ಯೋಜನೆಯು ಕುಗ್ರಾಮಗಳ ಬಡಜನರಿಗೆ ಬ್ಯಾಂಕ್ ವ್ಯವಹಾರವನ್ನು ತಲುಪಿಸಲು ಬ್ಯಾಂಕುಗಳ ಸೇವಾಪ್ರತಿನಿಧಿಯಾಗಿ ಸ್ವಸಹಾಯ ಸಂಘಗಳನ್ನು ರಚಿಸುತ್ತಿದೆ.
ಈ ಕಾರ್ಯಕ್ರಮದನ್ವಯ ಸದಸ್ಯರು ತಮ್ಮ ಹಣಕಾಸಿನ ನಿರ್ವಹಣೆಯನ್ನು ತಮ್ಮ ಗ್ರಾಮಗಳಲ್ಲಿ ಯೋಜನೆಯ ಸಹಕಾರದೊಂದಿಗೆ ಮಾಡಿಕೊಳ್ಳುತ್ತಾರೆ. ಯೋಜನೆಯು ಈ ಸದಸ್ಯರ ಹಣವನ್ನು ಬ್ಯಾಂಕಿಗೆ ಮುಟ್ಟಿಸುವುದಲ್ಲದೇ ಬ್ಯಾಂಕುಗಳು ನೀಡುವ ಸಾಲವನ್ನು ಸದಸ್ಯರಿಗೆ ತಲುಪಿಸುತ್ತದೆ.ಈ ನಿಟ್ಟಿನಲ್ಲಿ ಎಸ್ ಬಿಐ ಬ್ಯಾಂಕಿನ ಅಧಿಕಾರಿ ತಂಡ ಪರಿಶೀಲನೆಗಾಗಿ ಅಗಮಿಸಿದೆ.
