ಬಂಟ್ವಾಳ: ಮಾಣಿಯಲ್ಲಿರುವ ಕೃಷಿ ಇಲಾಖೆಯ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಪತ್ತೆಯಾಗಿದೆ. ರೈತರಿಗೆ ಸರಬರಾಜು ಮಾಡಲೆಂದು ಗೋದಾಮಿನಲ್ಲಿ ರೆಹುಳು ಗೊಬ್ಬರವನ್ನು ದಾಸ್ತಾನಿರಿಸಲಾಗಿತ್ತು. ಆದರೆ ಅದು ಕಳಪೆ ಗುಣಮಟ್ಟದ್ದಾಗಿದೆ ಎಂದು ದ.ಕ.ಜಿ.ಪಂನ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಾಣಾಜಾಲು ದೂರು ನೀಡಿದ ಹಿನ್ನಲೆಯಲ್ಲಿ ಜಿ.ಪಂ.ನ ಮುಖ್ಯಕಾರ್ಯನಿವರ್ಾಹಣಾಧಿಕಾರಿ ತುಳಿಸೀ ಮದ್ದಿನೇನಿ ಬುಧವಾರ ಬೆಳಿಗ್ಗೆ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗೊಬ್ಬರ ಕಳಪೆ ಗುಣಮಟ್ಟದ್ದಾಗಿರುವುದು ಬೆಳಕಿಗೆ ಬಂದಿದೆ. ದಾಸ್ತಾನಿರುವ ಎಲ್ಲಾ ಗೊಬ್ಬರವನ್ನು 5 ಕೆ.ಜಿಯಂತೆ ಪ್ಯಾಕೇಟ್ ಮಾಡಿ ಮರು ಪರೀಕ್ಷೆಗೆ ಕಳುಹಿಸುವಂತೆ ಮುಖ್ಯಕಾರ್ಯನಿವರ್ಾಹಣಾಧಿಕಾರಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಗೊಬ್ಬರ ಸರಬರಾಜು ಮಾಡಿರುವ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಸ್ವಲ್ಪ ಪ್ರಮಾಣದ ಎರೆಹುಳು ಗೊಬ್ಬರಕ್ಕೆ ಮಣ್ಣು ಹಾಗೂ ಬೂದಿಯನ್ನು ಮಿಶ್ರಣವನ್ನು ಸೇರಿಸಿ ಗೋದಾಮಿಗೆ ಸರಬರಾಜು ಮಾಡಿರುವುದಾಗಿ ತಿಳಿದು ಬಂದಿದೆ.
17 ಟನ್ ಕಳಪೆ ಗೊಬ್ಬರ:

BTW_JULY30_7
ಒಂದು ಲೋಡ್ ಕಳಪೆ ಗುಣಮಟ್ಟದ ಎರೆಹುಳು ಗೊಬ್ಬರ ಈ ಸಂದರ್ಭ ಪತ್ತೆಯಾಗಿದೆ. ಲೋಡ್ ಒಂದರಲ್ಲಿ 17 ಟನ್ ಗೊಬ್ಬರವನ್ನು ತುಂಬಲಾಗುತ್ತದೆ. ಟನ್ವೊಂದಕ್ಕೆ 20 ಚೀಲಗಳಂತೆ 340 ಚೀಲಗಳಲ್ಲೂ ಕಳಪೆ ಗೊಬ್ಬರ ಕಂಡು ಬಂದಿದೆ.
ಜಿ.ಪಂ.ನ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಗೋದಾಮಿಗೆ ಭೇಟಿ ನೀಡಿದ ಸಂದರ್ಭ ದ.ಕ.ಜಿ.ಪಂನ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಾಣಾಜಾಲು, ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಮಾಣಿ ಗಾ.ಪಂ.ಅಭಿವೃದ್ದಿ ಅಧಿಕಾರಿ ಹಾಜರಿದ್ದರು

By suddi9

Leave a Reply

Your email address will not be published. Required fields are marked *