ಬಂಟ್ವಾಳ: ಜೈನ ಧರ್ಮವು ಧಾರ್ಮಿಕ ಸಹಿಷ್ಣುತೆ, ಆತ್ಮಶುದ್ಧಿ ಮತ್ತು ತಪಸ್ಸಿನ ಮೂಲಕ ಮೋಕ್ಷಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತದೆ. ಅಹಿಂಸೆಯ ಪರಮತತ್ವವು ಭಾರತೀಯ ಸಂಸ್ಕೃತಿಯ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸಿದೆ.
ಅರ್ಕುಳ ಅನಂತನಾಥ ಸ್ವಾಮಿ ಬಸದಿಯ ನವೀಕೃತ ಚಂದ್ರಶಾಲೆ ಕೇವಲ ಅಲಂಕಾರವಲ್ಲ; ಅದು ಜ್ಞಾನ ಮತ್ತು ಪ್ರಕಾಶದ ಸಂಕೇತವಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ನುಡಿದರು.

ಶ್ರೀ ಕ್ಷೇತ್ರ ಅರ್ಕುಳದ ವಾರ್ಷಿಕ ಜಾತ್ರೆಯ ಪ್ರಯುಕ್ತ ನಡೆದ ಚಂಡಿಕಾ ಯಾಗ ಹಾಗೂ ನಂದಿ ಪೂಜೆಯಲ್ಲಿ ಭಾಗವಹಿಸಿ ಬಸದಿಯ ನವೀಕೃತ ಚಂದ್ರಶಾಲೆಯನ್ನು ಉದ್ಹಗಾಟಿಸಿ ಆಶೀರ್ವಚನಗೈದ ಸ್ವಾಮೀಜಿ ಅವರು
ಈ ಪುನರುದ್ಧಾರ ಕಾರ್ಯವು ಭಕ್ತರಲ್ಲಿ ಧರ್ಮಜಾಗೃತಿಯನ್ನು ಉಂಟುಮಾಡಿ, ಅಹಿಂಸೆ–ಸಂಯಮ–ಸನ್ಮಾರ್ಗ ಪ್ರೇರೇಪಿಸಲಿ ಎಂದರು.ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ಕಾರ್ಯಕ್ತಮದ  ಅಧ್ಯಕ್ಷತೆ ವಹಿಸಿದ್ದರು.  ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್,ಅರ್ಕುಳ ಬೀಡು ರತ್ನರಾಜ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ, ಕಂಪ ಸದಾನಂದ ಆಳ್ವ, ಅರ್ಕುಳ ಬಸದಿ ಪುಷ್ಪರಾಜ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *