ಸುದ್ದಿ9 ಕೈಕಂಬ:ಕುಪ್ಪೆಪದವಿನಲ್ಲಿ ಗುರುವಾರ ಅಲ್ಲಿನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನೇತೃತ್ವದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪಂ. ಅಧ್ಯಕ್ಷ ಹಾಗೂ ಪಂ. ಅಧಿಕಾರಿಗಳ ಬೆವರಿಳಿಸಿದ ಘಟನೆ ನಡೆಯಿತು. ಗ್ರಾಮಸಭೆ ನಡೆಯುತ್ತಿದ್ದಂತೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಬಾಣಗಳನ್ನು ತೂರಿದ ಗ್ರಾಮಸ್ಥರು, ಪಂಚಾಯತ್ ಅಧ್ಯಕ್ಷ ಉತ್ತರಿಸಲು ಅಕ್ಷರಶಃ ಪರದಾಡಿದರು,
ಲೋಕಾಯುಕ್ತ ತನಿಖೆ ಏನಾಯ್ತು?

31vp kupepadavu grama sabe 4

31vp kupepadavu grama sabe2

31vp kupepadavu grama sabe3

31 vp kupepadavu grama sabe
ಕಳೆದ ನೀರಿನ ಪಂಪ್ ವಿಚಾರದಲ್ಲಿ ಅಕ್ರಮ ನಡೆದಿರುವುದನ್ನು ಲೋಕಾಯುಕ್ತ ತನಿಖೆಗೆ ಕೊಡಲಾಗಿತ್ತು. ಈ ಪ್ರಕರಣ ಏನಾಗಿದೆ?  ಈ ಬಗ್ಗೆ ಏನು ನಿರ್ಣಯ ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಂ. ಅಧ್ಯಕ್ಷ ಇದನ್ನು ಇಂಜಿನಿಯರ್ನೊಂದಿಗೆ ಮಾತಾಡಿ ಕಾಂಪ್ರಮೈಸ್ (ಸಂಧಾನದ) ಮೂಲಕ ಸರಿಪಡಿಸಲಾಗಿದೆ ಎಂದುತ್ತರಿಸಿದರು, ಇದರಿಂದ ಕೆಂಡಾಮಂಡಲವಾದ ಗ್ರಾಮಸ್ಥರು ನೀವು ನೀವೇ ಸಂಧಾನದ ಮೂಲಕ ಸರಿಪಡಿಸಿರುವುದಾದರೆ ನಿಮಗೂ ಇಂಜಿನಿಯರ್ ಅವರಿಗೂ ನಿಮ್ಮ ನಿಮ್ಮಲ್ಲೇ ಸೆಟ್ಟಿಂಗ್ ನಡೆದಿದೆ ಎಂದರ್ಥ, ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಯಾಕೆ ಕೊಡಲಿಲ್ಲ? ಗ್ರಾಮಸ್ಥರನ್ನು ಮೂರ್ಖರನ್ನಾಗಿಸಿಸದ್ದೀರಿ. ನಿಮ್ಮ ಕಾಂಪ್ರಮೈಸನ್ನು ತಿರಸ್ಕರಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಆರು ತಿಂಗಳ ಸಮಯ ಕೊಡಿ:
ಕುಪ್ಪೆಪದವಿನಲ್ಲಿ ಕಳೆದ ಹಲವಾಋಉ ವರ್ಷಗಳಿಂದ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಕುಪ್ಪೆಪದವು ಗಾಢಾಂಧಕಾರದಲ್ಲಿ ಮುಳುಗಿದೆ, ನೀರಿನ ಪಂಪ್ ಹಾಳಾಗಿ ನೀರು ಬರುತ್ತಿಲ್ಲ, ನೀರಿನ ಬಿಲ್ ಒಟ್ರಾಸಿ ಬರುತ್ತದೆ. ಅದನ್ನು ಕಟ್ಟದಿದ್ದರೆ ಕರೆಂಟ್ ಕಟ್ ಮಾಡ್ತಾರೆ. ಮೆಸ್ಕಾಂ ಇಲಾಖೆ ಎಲ್ಲಿ ಹಾಳಾಗಿ ಹೋಗಿದೆ ಎಂದಾಗ, ಮೆಸ್ಕಾಂ ಅಧಿಕಾರಿ, ರಾಜಶೇಖರ್ ನಾನು ಇಲ್ಲಿ ಅಧಿಕಾರಕ್ಕೆ ಬಂದು ಕೇವಲ 22 ದಿವಸವಷ್ಟೇ ಆಗಿದೆ. ನನಗೆ ಮೂರರಿಂದ ಆರು ತಿಂಗಳ ಸಮಯ ಕೊಡಿ, ನನ್ನ ಕರ್ತವ್ಯ ದೃಷ್ಟಿಯಿಂದ ನನ್ನ ಕೈ ಮೀರಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದಾಗ ಗ್ರಾಮಸ್ಥರು ಕರತಾಡನ ಮಾಡಿದರು.
ಅದು ಗ್ರಾಮಾಂತರ ವ್ಯಾಪ್ತಿಗೆ ಬರುತ್ತದೆ ನನ್ನದು ನಗರ ವ್ಯಾಪ್ತಿ:
ಮುತ್ತೂರು ಅಂಗನವಾಡಿಗೆ ಬರುವ ನೀರು ಮಲಿನವಾಗಿದೆ, ಗ್ರಾಮಸ್ಥರು ಇದೇ ಕೊಳಚೆ ನೀರನ್ನು ಕುಡಿಯುತ್ತಿದ್ದಾರೆ. ಇದು ಶುದ್ದೀಕರಣಗೊಳ್ಳದೆ ನೇರವಾಗಿ ಪಂಪಿನಿಂದ ಬರುವ ನೀರು ಎಂದು ಮಲಿನ ನೀರಿನ ಬಾಟಲಿಯನ್ನು ತಂದು ಮೇಜಿನ ಮೇಲೆ ಇಟ್ಟರು. ಈ ಸಮಸ್ಯೆಯನ್ನು ಹೊಸದಾಗಿ ಕೇಳಿದಂತೆ ಮಾಡಿದ ಪಂ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಇದನ್ನು ಅಧ್ಯಕ್ಷರು ಸೇರಿ ಅಧಿಕಾರಿಗಳು ಕುಡಿಯಿರಿ ಎಂದು ಸವಾಳು ಹಾಕದರು.
ಇಷ್ಟೆಲ್ಲಾ ಆದರೂ ಶಿಶು ಕಲ್ಯಾಣ ಅಧಿಕಾರಿ ಮೌನವಾಗಿ ಕೂತಿದ್ದರು. ಆಗ ಗ್ರಾಮಸ್ಥರು ಅಂಗನವಾಡಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದರೂ ಶಿಶು ಕಲ್ಯಾಣ ಅಧಿಕಾರಿ ಯಾಕೆ ಮೌನವಾಗಿ ಕೂತಿದ್ದೀರಿ ಎಂದು ಪ್ರಶ್ನಿಸಿದಾಗ, ಉತ್ತರಿಸಲು ಬಂದ ಶಿಶು ಕಲ್ಯಾಣಿ ಅಧಿಕಾರಿ ನನ್ನದು ನಗರ ವ್ಯಾಪ್ತಿ, ಗ್ರಾಮಾಂತ್ರ ಸಮಸ್ಯೆ ನನಗೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ ಎಂಬ ನಿರ್ಲಕ್ಷ್ಯದ ಉತ್ತರ ಕೇಳಿ ಗ್ರಾಮಸ್ಥರು ಲೊಬೋ ಲೊಬೋ ಎಂದು ಮಂಡೆಗೆ ಕೈ ಹಾಕಿ ಖಂಡನೆ ವ್ಯಕ್ತಪಡಿಸಿದರು. ಕೊನೆಗೆ ಗ್ರಾಮಸ್ಥರೇ ಈ ನೀರನ್ನು ಪ್ರಯೋಗಾಲಯಕ್ಕ ಕಳುಹಿಸಿ ಪರಕ್ಷಿಸಿ ಎಂದು ಸಲಹೆ ನೀಡಬೇಕಾದ ಪ್ರಮೇಯವೂ ಒದಗಿ ಬಂದಿತ್ತು,
ಗ್ರಾಮಸ್ಥರ ಆರೋಪಗಳು:
* ಕುಪ್ಪೆಪದವು ಗ್ರಾಮ ಪಂಚಾಯತ್ನಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಎಲ್ಲವೂ ನಿರ್ಣಯ ಪುಸ್ತಕದಲ್ಲಿ ದಾಖಲುಗೊಳಿಸಿ ಆಮೇಲೆ ಸುಮ್ಮನಾಗುತ್ತಾರೆ. ಈ ಬಗ್ಗೆ ಚರ್ಚೆ  ನಡೆದರೆ ಅದನ್ನು ಸಾಮಾನ್ಯ ಸಭೆಗೆ ತಂದು ಹಾಕುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
* ಕೊಳವೂರು ಎಂಬಲ್ಲಿ ಹೈಟೆನ್ಷನ್ ವೈರ್ಗೆ ತಾಗಿಕೊಂಡು ಬಿದಿರಿನ ಮರ ಬಿದ್ದಿದೆ. ಈ ಬಗ್ಗೆ ದೂರು ನೀಡಿ ಒಂದು ವಾರ ಕಳೆದರೂ ಸಮಸ್ಯೆ ಬಗೆಹರಿಯಲಿಲ್ಲ ಎಂದಾಗ, ನಾವು ಸ್ವಲ್ಪ ಬ್ಯುಸಿಯಾಗಿದ್ದೆವು ಎಂದು ಪಂ ಅಧ್ಯಕ್ಷ ಸಬೂಬು ಹೇಳಿದಾಗ ಗ್ರಾಮಸ್ಥರು ಮತ್ತಷ್ಟು ಗಲಾಟೆ ಮಾಡಿದರು.
* ಗ್ರಾಮ ಸಭೆ ಬಹುಪಾಲು ಗಲಾಟೆಯಲ್ಲೇ ಕಳೆದುಹೋಯ್ತು. ಪಂ ಅಧ್ಯಕ್ಷರನ್ನು ಬಿಟ್ಟರೆ ಉಳಿದವರ ಬಾಯಿಗೆ ಬೀಗ ಹಾಕಲಾಗಿದೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದರು.
* ಗ್ರಾಮಸ್ಥರು ಆಧಾರ ಸಹಿತ ಪಂಚಾಯತ್ನ ಮೇಲೆ ಆರೋಪ ಮಾಡುವುದರಿಂದ ವೇದಿಕೆ ಮೇಲಿದ್ದ ಅಧಿಕಾರಿಗಳು ಮೌನವಾಗಿಯೇ ಕೂತಿದ್ದರು,
* ಕೆಲವೊಮ್ಮೆ ಗ್ರಾಮಸ್ಥರು ತಮ್ಮೊಳಗಡೆಯೇ ಕಚ್ಚಾಟ ನಡೆಸಿದರು.
ಒಟ್ಟಿನಲ್ಲಿ ಗ್ರಾಮಸಭೆ ಗಲಾಟೆ ಸಭೆಯಾಗಿ ಪರಿಣಮಿಸಿತ್ತು.
ಪಿಡಿಓ ಪುಷ್ಪ ಸಾಲ್ಯಾನ್, ಉಪಾಧ್ಯಕ್ಷೆ ಪುಷ್ಪ ನಾಯ್ಕ, ಪಂ ಸದಸ್ಯರು, ನಾನಾ ಇಲಾಖೆಯ ಅಧಿಕಾರಿಗಳು ವೇದಿಕೆಯ ಮೇಲಿದ್ದರು

By suddi9

Leave a Reply

Your email address will not be published. Required fields are marked *