ಬಂಟ್ವಾಳ: ದೀಪಾವಳಿ ಹಬ್ಬದ ಪ್ರಯುಕ್ತ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಬಿ.ಸಿ.ರೋಡ್ನ ಸಾಮರ್ಥ್ಯ ಸೌಧದ ಸರ್ಕಾರಿ ಕಚೇರಿಯಲ್ಲಿ ಗಣಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸೋಮವಾರ ನಡೆಯಿತು.

ಶಾಸಕ ರಾಜೇಶ್ ನಾಯ್ಕ್ , ಸಂಸದ ಕ್ಯಾ. ಬ್ರಿಜೇಶ್ ಚೌಟ,ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರ.ಕಾರ್ಯದರ್ಶಿಗಳಾದ ಸುದರ್ಶನ್ ಬಜ,ಶಿವಪ್ರಸಾದ್ ಶೆಟ್ಟಿ,ಪಕ್ಷದ ಮುಖಂಡರಾದ ಗೋವಿಂದಪ್ರಭು,ಮಾಧವ ಮಾವೆ,ರಾಮದಾಸ್ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್,ವಿಕಾಸ್ ಪುತ್ತೂರು,ಡೊಂಬಯ ಅರಳ,ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು,ವಸಂತ ಅಣದಣಳಿಕೆ,ಸಂಜೀವ ಪೂಜಾರಿ ಪಿಲಿಂಗಾಲು,ಮೋನಪ್ಪ ದೇವಸ್ಯ, ಸಮಜತೋಷ್ ರಾಯಿ ಬೆಟ್ಟಯ,ರಮಾನಾಥ ರಾಯಿ,ಹರಿಪ್ರಸಾದ್ ಭಂಡಾರಿಬೆಟ್ಟು,ಪುಪ್ಪರಾಜ್ ಚೌಟ,ಬಬಿತಾ ಕೋಟ್ಯಾನ್,ಕೃಷ್ಣಪ್ಪ ಪೂಜಾರಿ ದೋಟ
..ಸೇರಿದಂತೆ ಹಲವಾರು ಗಣ್ಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗಣಪತಿಯ ಆರಾಧನೆಯೊಂದಿಗೆ ಲೋಕಕಲ್ಯಾಣ ಹಾಗೂ ಸರ್ವರ ಒಳಿತಿಗಾಗಿ ಪ್ರಾರ್ಥಿಸಲಾಯಿತು.
