ಬಂಟ್ವಾಳ: ಕಳೆದ ಐದು ವರ್ಷಗಳಿಂದ ಅನಾರೋಗ್ಯದಲ್ಲಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ಆಲದಪದವು ಗೋಪಾಲ ಅಂಚನ್ ಅವರ ಮನೆಗೆ ಸೋಮವಾರ ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಪ್ರಮುಖರು ಭೇಟಿ ನೀಡಿದರು.

ಅನಾರೋಗ್ಯದ ಬಗ್ಗೆ ಮಾತುಕತೆ ನಡೆಸಿದ ಬಿ.ರಮಾನಾಥ ರೈ ಮತ್ತು ಪ್ರಮುಖರು ಗೋಪಾಲ ಅಂಚನ್ ಅವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯಧನ ಹಸ್ತಾಂತರಿಸಿದರು.
ಇದೇ ಸಂದರ್ಭ ಸಾಹಿತ್ಯ, ಸಾಂಸ್ಕ್ರತಿಕ ಕ್ಷೇತ್ರದ ಸಾಧನೆಗಾಗಿ “ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕ್ರತರಾದ ಹಿನ್ನೆಲೆಯಲ್ಲಿ ಗೋಪಾಲ ಅಂಚನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದ ರೈ ಅವರು ಅಂಚನ್ ಅವರ ಸಾಹಿತ್ಯ, ಸಾಂಸ್ಕ್ರತಿಕ, ಶೈಕ್ಷಣಿಕ ಮತ್ತು ಜನಜಾಗೃತಿ ಕ್ಷೇತ್ರದ ಸೇವೆ ಶ್ಲಾಘನೀಯವಾದುದು ಎಂದು ಪ್ರಶಂಸಿದರು.
ಬಂಟ್ವಾಳ ನಗರ ಯೋಜಬಾ ಪ್ರಾಧಿಕಾರದ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ನೆಲ್ಲಿಗುಡ್ಡೆ ಶ್ರೀ ಸಂಯುಕ್ತ ಕೃಷ್ಣ ಜನ್ಮಾಷ್ಠಮಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್, ವಾಮದಪದವು ವಲಯ ಯುವ ಬಂಟರ ಸಂಘದ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ ಗಂಟಾರಬೆಟ್ಟು ಗುತ್ತು, ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಚೆನ್ನೈತ್ತೋಡಿ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಅಜ್ಜಿಬೆಟ್ಟು, ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಕುಮಾರ್ ನಾಯರ್ಕುಮೇರು, ಯತೀಶ್ ಶೆಟ್ಟಿ ವಿಜಯನಗರ, ರಾಜೀವ ಗಟ್ಟಿ ಬಸ್ತಿಕೋಡಿ, ಸುರೇಶ್ ಶೆಟ್ಟಿ ನಂದಿಲ, ಹರೀಶ ಸಪಲ್ಯ ಆಲದಪದವು, ಲಿಂಗಪ್ಪ ಪೂಜಾರಿ ಶ್ರೀನಿವಾಸ ನಗರ ಮೊದಲಾದವರು ಉಪಸ್ಥಿತರಿದ್ದರು.
