ಬಂಟ್ವಾಳ: ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಕಲ್ಲಡ್ಕದ ಗುಂಡೂರಿನ ಕಾಂಗ್ರೆಸ್ ನಾಯಕ ಮಧುಸೂದನ್ ಐತಲ್ ಅವರ ಮನೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಗೋಪೂಜಾ ಕಾರ್ಯಕ್ರಮ ನಡೆಸಲಾಯಿತು.

ಪುರೋಹಿತರಾದ ಮಹೇಶ್ ಭಟ್ ಅವರು ಧಾರ್ಮಿಕ ಪೂಜಾ ವಿಧಿವಿಧಾನವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ,
ಪಕ್ಷದ ಮುಖಂಡರಾದ ಸುದೀಪ್ ಶೆಟ್ಟಿ ಮಾಣಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಐಡಾ ಸುರೇಶ್, ದೈವನರ್ತಕ ಲೋಕಯ್ಯ, ಕರುಣಾಕರ ಶೆಟ್ಟಿಗಾರ್, ದೇವದಾಸ್ ಶೆಟ್ಟಿಗಾರ್, ಸುರೇಶ್ ನಾಯ್ಕ್, ಶ್ರೀಲತಾ ಐತಲ್, ಚಂದನ್ ಜೈನ್, ಪರಮೇಶ್ವರ್ ಭಟ್, ಸುದರ್ಶನ್ ಭಟ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
