ತುಪ್ಪೆಕಲ್ಲು:ಮನುಷ್ಯರ ದುರಾಸೆಯಿಂದಾಗಿ ನಿರಂತರ ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಂಗಳೂರು ವಿಭಾಗ ಆರ್.ಟಿ.ಓ ರವಿಶಂಕರ್ ಅರ್ಕುಳ ಶ್ರೀ ಉಳಾಕ್ಲು ಮಗೃಂತಾಯಿ ದ್ವಾರಾಸೇವಾ ಸಮಿತಿ ಆಶ್ರಯದಲ್ಲಿ ನಿರ್ಮಾಣ ಹಂತದ ತುಪ್ಪೆಕಲ್ಲು ಹಿಂದೂ ರುದ್ರ ಭೂಮಿಯಲ್ಲಿ ಪರಿಸರ ದಿನದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾನಾಡಿದರು.

IMG-20170709-WA0011
ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಕ್ಷೇತ್ರದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ಬಿಲ್ವ ಪತ್ರೆಯ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರಮಾತನಾಡಿದ  ಅವರು ಹಿಂದಿನವರು ಸ್ವಾರ್ಥ ರಹಿತವಾಗಿ ತನಗಲ್ಲದಿದ್ದರು ಮುಂದಿನ ಜನಾಂಗ ಕ್ಕೆ ಫಲ ಸಿಗಲೆಂದು ಮರಗಳನ್ನುಬೆಳೆಸುತ್ತಿದ್ದರು ಆದರೆ ಇಂದು ಶಿಘ್ರ ಫಲ ಕೊಡುವ ದೀರ್ಘ ಬಾಳಿಕೆ ಇಲ್ಲದ ಗಿಡ ನೆಡುವುದು ಖೇದಕರ ಎಂದರು.

IMG-20170709-WA0009
ಸದಾನಂದ ಆಳ್ವ ಕಂಪರವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು.   ವೇದಿಕೆಯಲ್ಲಿ  ಅಡ್ಯಾರ್  ಪಂ. ಸದಸ್ಯ ಸಂತೋಷ್ ತುಪ್ಪೆಕಲ್ಲು, ಅಡ್ಯಾರು ಗ್ರಾ. ಪಂ. ಉಪಾದ್ಯಕ್ಷೆ ಆಶಾಪ್ರಕಾಶ್ , ಪಂ. ಸದಸ್ಯೆ ಪವಿತ್ರ ಅರ್ಕುಳ,ಶ್ರೀ ಉಳಾಕ್ಲು ಮಗೃಂತಾಯಿ ದ್ವಾರ ಸೆವಾಸಮಿತಿ ಕೋಶಾಧಿಕಾರಿ ರಘುನಾಥ ಪೂಜಾರಿ, ಕಾರ್ಯದರ್ಶಿ ನವೀನ್ ಶೆಟ್ಟಿ ತುಪ್ಪೆಕಲ್ಲು,ಸಂದೇಶ್ ತುಪ್ಪೆಕಲ್ಲು,ಉಮೇಶ್ ಸೇಮಿತ, ದ್ವಾರಸೇವಾ ಸಮಿತಿ ಉಪಾದ್ಯಾಕ್ಷ ಪ್ರಾನ್ಸಿಸ್ ಡಿಸೋಜಾ ,ಶೇಖರ ಶೆಟ್ಟಿ, ಮಹಿಳಾ ಸಂಘದ ಕಾರ್ಯದರ್ಶಿ ಪದ್ಮಾವತಿ ಟೀಚರ್ ಉಪಸ್ಥಿತರಿದ್ದರು.

IMG-20170709-WA0008

ಚಿ.ರಮೇಶ್ ಕಲ್ಲಡ್ಕ ರವರು ಕಾರ್ಯಕ್ರಮ ನಿರೂಪಿಸಿದರು. ಆಶಾ ಚಂದ್ರ ತುಪ್ಪೆಕಲ್ಲು ರವರು ವಂದಿಸಿದರು. ಇದೇ ಸಂದರ್ಭದಲ್ಲಿ   ಹಿಂದೂ ರುದ್ರಭೂಮಿ ಸಮಿತಿ ಇದರ ಅದ್ಯಕ್ಷ ಸದಾನಂದ ಆಳ್ವ ಕಂಪ ಇದರ ನೇತ್ರತ್ವದಲ್ಲಿ ಹಿಂದೂ ರುದ್ರ ಭೂಮಿ ಸಮಿತಿ ರಚನೆಯಾಯಿತು.

IMG-20170709-WA0010

By suddi9

Leave a Reply

Your email address will not be published. Required fields are marked *