ಫರಂಗಿಪೇಟೆ : ಭಾರತ ದೇಶದ ತಿರುಳು ಆಧ್ಯಾತ್ಮದಲ್ಲಿ ಹುದುಗಿದೆ. ಆಧ್ಯಾತ್ಮ ಧರ್ಮದಲ್ಲಿ ಅಡಗಿದೆ. ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಪುದು ಗ್ರಾಮದ ಸುಜೀರುಗುತ್ತು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಶ್ರೀ ಧರ್ಮದೈವಗಳ ನೂತನ ಶಿಲಾಮಯ ಭಂಡಾರದ ಮನೆಯಲ್ಲಿ ಶ್ರೀ ಧರ್ಮದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ದ ಅಂಗವಾಗಿ ಬುಧವಾರ ಸಂಜೆ ನಡದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧರ್ಮ ಎನ್ನುವುದು ಎಲ್ಲರ ಒಳಿತಿಗೆ ಇರುವಂತದ್ದು. ಜೀಣೋದ್ದರಾ ಕಾರ್ಯಗಳು ಕೂಡ ಧರ್ಮ ಕಾರ್ಯಗಳೇ. ಸಧರ್ಮ ಆಚರಣೆಗಳು ನಮ್ಮ ಕರ್ತವ್ಯವಾಗಿರಬೇಕು. ಎಂದರು. ಒಗ್ಗಟ್ಟು ಮತ್ತು ಸಂರಕ್ಷಣೆಗೆ ಸುಜೀರು ಸಾಕ್ಷಿಯಾಗಿ ನಿಂತಿದೆ. ಸುಜೀರಿನಲ್ಲಿ ಸಂಸ್ಕøತಿಯ ಪಜೀರು(ಹುಲ್ಲು) ಬೆಳೆದು ನಿಂತಿದೆ. ಭಾರತೀಯ ಸಂಸ್ಕೃತಿಯ ಎರಡು ವಿಧಗಳಾದ ಅಗ್ನಿ ಹಾಗೂ ಜಲ ಸಂಸ್ಕೃತಿಗಳನ್ನು ನೋಡಲು ತುಳುನಾಡಿಗೆ ಬರಬೇಕು, ಅಂತಹ ವೈವಿಧ್ಯ ಸಂಸ್ಕøತಿ ಇಲ್ಲಿಯೂ ಬೆಳೆದಿದೆ ಎಂದರು
ಸಂಸದ ನಳೀನ್ ಕುಮಾರ್ ಕಟೀಲು, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ತಾಲೂಕು ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಗಾಣಿಗರ ಸಂಘದ ಅಧ್ಯಕ್ಷ ರಘು ಸಪಲ್ಯ, ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಕುಂಟಾರು ರವೀಶ ತಂತ್ರಿ, ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ, ಧರ್ಮದರ್ಶಿ ವಜ್ರನಾಭ ಶೆಟ್ಟಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತರ ಯಕ್ಷಗಾನ ಮಂಡಳಿಯ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಎ. ಜಯರಾಮ ಶೆಟ್ಟಿ ವೇಣೂರು, ಕೇತ್ರದ ಅರ್ಚಕ ರಘುರಾಮ ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ಸುಂದರ ಶೆಟ್ಟಿ ಕಲ್ಲತಡಮೆ, ಕಾರ್ಯಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಪ್ರಧಾನಕಾರ್ಯದರ್ಶಿ ಪ್ರಕಾಶ್ಚಂದ್ರ ರೈ ದೇವಸ್ಯ, ಕೋಶಾಧಿಕಾರಿ ರವೀಂದ್ರ ಕಂಬಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೇವಸ್ಯ ರಾಜಶೇಖರ ಚೌಟ ದುಬೈ, ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ಕೋಶಾಧಿಕಾರಿ ಚಂದ್ರಶೇಖರ ಆಳ್ವ ತೇವು ಹಾಜರಿದ್ದರು.ಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ತಂತಿ ಹಾಗೂ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಸ್ವಾಗತಿಸಿದರು, ಜೀಣೋದ್ದಾರ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು ಪ್ರಾಸ್ತವಿಕವಾಗಿ ಮಾತನಾಡಿದರು ಪ್ರಧಾನ ಕಾರ್ಯದರ್ಶಿ ತೇವು ತಾರನಾಥ ಕೊಟ್ಟಾರಿ ವಂದಿಸಿದರು, ಅಡ್ಯಾರು ಪುರುಷೋತ್ತಮ ಭಂಡಾರಿ ನಿರೂಪಿಸಿದರು.
