ಕೈಕಂಬ;ಬೆಳಕು ಕಣ್ಣಿನ ಆಸ್ಪತ್ರೆ ಅಶೋಕನಗರ ಮಂಡ್ಯ,ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ವೋವೆಟ್ ರೀಸರ್ಚ್ ಪೌಂಡೇಷನ್(ರಿ) ಗಂಜೀಮಠ ಇವರ ಸಂಯುಕ್ತ ಆಶ್ರಯದಲ್ಲಿ “ಮಧುಮೇಹ ಮುಕ್ತ ಭಾರತ” ಜನಜಾಗೃತಿ ಅಭಿಯಾನದ ಅಂಗವಾಗಿ ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವು ಮೆ.12 ಶುಕ್ರವಾರ ಬೆಳಗ್ಗೆ 9ರಿಂದ 11.30ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ತಗ್ಗಹಳ್ಳಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎಂ,ಜಿ,ರಮೇಶ್ ಬಾಬು ಬಂಡಿಸಿದ್ದೇಗೌಡ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಅಧ್ಯಕ್ಷತೆಯನ್ನು ಗಂಜೀಮಠ ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ವೋವೆಟ್ ರೀಸರ್ಚ್ ಪೌಂಡೇಷನ್‍ನ ಅಧ್ಯಕ್ಷರು ಡಾ.ಸತೀಶ್ ಶಂಕರ್ ಬಿ, ವಹಿಸಲಿದ್ದಾರೆ.

aye-clinic
ಮುಖ್ಯ ಅತಿಥಗಳಾಗಿ ರಾಜ್ಯ ಜತ್ಯಾತೀತ ಜನತಾದಳದ ಉಪಾಧ್ಯಕ್ಷ ಅಶೋಕ್ ಜಯರಾಮ್ ಎಸ್.ಜಿ.,ಬೆಳಕು ಕಣ್ಣಿನ ಆಸ್ಪತ್ರೆ ಡಾ.ಸುರೇಶ್, ಮಂಡ್ಯ ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಮಂಜುನಾಥ್, ವi ಂಡ್ಯ ಮಾಜಿ ಜಿಲ್ಲಾ ಪಂ.ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಂಡ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗಣ್ಣ, ಮಂಡ್ಯ ಎ.ಪಿ.ಎಮ್.ಸಿ ಅಧ್ಯಕ್ಷ ಎಂ.ಕೆ.ಮಧು, ಗ್ರಾ.ಪಂ.ಅಧ್ಯಕ್ಷ ತಗ್ಗಹಳ್ಳಿ ಅನ್ಸರಿ ಜಿ, ಹಳುವಾಡಿ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮಣ ಡಿ, ತಗ್ಗಹಳ್ಳಿ ಕಾಂಗ್ರೇಸ್ ಮುಖಂಡ ಎಂ.ಎನ್ ಕೃಷ್ಣ, ತಗ್ಗಹಳ್ಳಿ ಪ್ರಸನ್ನ, ವಿ.ಎಸ್,ಎಸ್, ಎನ್ ಅಧ್ಯಕ್ಷ ಸುರೇಶ್, ಹಳುವಾಡಿ ಮಾಜಿ ಗ್ರಾ.ಪಂ.ಅಧ್ಯಕ್ಷ ಸಿದ್ದರಾಜ್, ಎಲ್,ಐ.ಸಿ.ಕಮ್ಮನಾಯಕನಹಳ್ಳಿ ಬಿ.ಡಿ.ದೇವರಾಜು, ಪುರ ಮಾಜಿ ಗ್ರಾ.ಪಂ.ಸದಸ್ಯ ಮಹದೇವಪ್ಪ ಉಪಸ್ಥಿತರಿರುವರು.

By Suddi9

Leave a Reply

Your email address will not be published. Required fields are marked *