ಕೈಕಂಬ: ಗಂಜಿಮಠ ಕೈಗಾರಿಕಾ ಘಟಕಕ್ಕೆ ಮಂಗಳವಾರ ಬೆಂಕಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿದ್ದು ಕೊಟ್ಯಾಂತರ ರೂ.ನಷ್ಟ ಉಂಟಾಗಿದೆ. ಬಜಪೆ ನಿವಾಸಿ ಮಹಮ್ಮದ್ ಹನೀಫ್ ಎಂಬವರಿಗೆ ಸೇರಿದ ಮೋಹಾ ಪ್ಯಾಕೇಜಿಂಗ್ ಇಂಡಸ್ಟ್ರೀಯಲ್ಲಿ ಕಳೆದ ರಾತ್ರಿ 2.45ರ ಸುಮಾರಿಗೆ ದುರಂತ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ರಪ್ತು ಆಧಾರಿತ ಪ್ಲಾಸ್ಟಿಕ್ ಕಂಪೆನಿಯಾದದ್ದರಿಂದ ಯಂತ್ರೋಪಕರಣ,ಸಿದ್ದ ಉತ್ಪನ್ನಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಸುಮಾರು 15ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.









