ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರ ಸಮೀಪ ಬೈಕ್ ಗೆ ಕಾರ್ ಗುದ್ದಿ ಕಿನ್ನಿಕಂಬಳ ನಿವಾಸಿ ಸ್ಥಳದಲ್ಲೆ ಸಾವು. ಮೃತನನ್ನು ಕನ್ನಿಕಂಬಳ ಜುಭೇದಾ ಉಸ್ಮಾನ್ ಸಾಹೇಬ್ ಅವರ ಮಗ ಝಿಯಾನ್ ಎಂದು ಗುರುತಿಸಲಾಗಿದೆ.
ಭಾನುವಾರ ಸುಮಾರು 11 ಗಂಟೆಯ ಸಮಯ ಕಿನ್ನಿಕಂಬಳದ ಮನೆಯಿಂದ ಅಪ್ಪಾಚಿ ಬೈಕ್‍ನಲ್ಲಿ ಎಡಪದವಿನ ತನ್ನ ಗೆಳೆಯನ ಮನೆಗೆ ಹೋಗುವುದಾಗಿ ಬೈಕ್ನಲ್ಲಿ ತೆರಳಿದ್ದ . ಗಂಜಿಮಠ ಸಮೀಪ ತಲುಪುತ್ತದ್ದಂತೆ ಕಾರ್ ಬೈಕ್ ಗೆ ಗುದ್ದಿ ಪರಾರಿಯಾಗಿದೆ ಎನ್ನಲಾಗಿದೆ. ಕಾರ್ ಕೈಕಂಬದ ಕಡೆಗೆ ಪರಾರಿಯಾಗಿರುವ ಶಂಕೆ ಸೇರಿದ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಗಂಜಿಮಠ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
