ಕೈಕಂಬ: ರೋಡ್ ಸೈಡ್ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ಯಾವುದೇ ಕಸಗಳನ್ನು ಹಾಕದೇ ಒಂದೇ ಕಡೆಯಲ್ಲಿ ರಾಶಿ ಹಾಕಿ ಸ್ವಚ್ಚತೆಗೆ ಸಹಕಾರಿಸುವಂತೆ ದಕ್ಷಿಣ ಕನ್ನಡ ಬಿಜೆಪಿ ಸ್ಲಂಮೋರ್ಚಾ ಜಿಲ್ಲಾಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು ಹೇಳಿದರು. ಅವರು ಅರ್ಕುಳ ದ್ವಾರದಿಂದ ಸ್ವಚ್ಚತಾ ಕಾರ್ಯಕ್ರಮ ಭಾನುವಾರ ಹಮ್ಮಿಕೊಂಡು ಮಾತನಾಡಿದರು. ಸ್ವಚ್ಚ ಭಾರತ್ ನಿರ್ಮಾಣವಾಗಲು ನಾವೆಲ್ಲರು ನಮ್ಮ ನಮ್ಮ ಪರಿಸರವನ್ನು ಸ್ವಚ್ಚತೆಯಲ್ಲಿ ಇಡಬೇಕು ಆಗ ಮಾತ್ರ ಸ್ವಚ್ಚಭಾರತ ನಿರ್ಮಾಣವಾಗಳು ಸಹಕಾರಿಯಾಗುತ್ತದೆ ಎಂದರು.7 vp arkula

ಅರ್ಕುಳ ದ್ವಾರದ ಬಳಿಯಿರುವ ಎರಡು ಬಸ್ಸು ತಂಗುದಾಣವನ್ನು ಪೈಂಟಿಂಗ್ ಮಾಡಿ ಸ್ವಚ್ಚ ಮಾಡಲಾಯಿತು. ನಂತರ ಅರ್ಕುಳ ದ್ವಾರದಿಂದ ವಳಚ್ಚಿಲ್‍ವರೆಗೆ ರಸ್ಥೆಯ ಬದಿಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಸ್ವಚ್ಚ ಮಾಡಲಾಯಿತು. ರಾಮಕೃಷ್ಣ ಮಿಷನು ಮಂಗಳೂರು ಹಾಗೂ ಸ್ವಚ್ಚ ಮೇಲಪದವು ಹಾಗೂ ಶ್ರೀನಿವಾಸ್ ಕಾಲೇಜು ವಳಚ್ಚೀಲ್ ಪದವು ಇವರ ಸಹಕಾರದಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

7-1

7-3

7-2
ಈ ಸಂದರ್ಭದ ಶ್ರೀನಿವಾಸ ಕಾಲೇಜು ಸಂಯೋಜಕರಾದ ಅಭಿಲಾಷ್ , ಬಿಜೆಪಿ ಹಿಂದುಳಿದ ಮೊರ್ಚಾದ ಕಾರ್ಯದರ್ಶಿ ಅಶೋಕ್ ಕೊಟ್ಟಾರಿ ವಳಚ್ಚಿಲ್ ಪದವು, ಸುಕುಮಾರ್ ಧರ್ಮಗಿರಿ, ರಾಜೇಶ್ ಶೆಟ್ಟಿ ವಳಚ್ಚಿಲ್ , ಜಯರಾಮ್ ವಳಚ್ಚಿಲ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *