ಬಜ್ಪೆ:ಸರ್ಕಾರದ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಸಹಕಾರದಿಂದ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಮಿಜಾರು ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ವಿಜಯನಾಥ ವಿಠಲ ಶೆಟ್ಟಿ ಅಭಿಪ್ರಾಯಪಟ್ಟರು ಅವರು ಭಾನುವಾರ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಮುಂಡಬೆಟ್ಟುವಿನಲ್ಲಿ 40 ಲಕ್ಷ ವೆಚ್ಚದಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ನವೀಕರಿಸಿದ ಸುಸಜ್ಜಿತ ಹಿಂದೂ ರುದ್ರಭೂಮಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊರದೇಶಗಳಲ್ಲಿ ರುದ್ರಭೂಮಿಗೆ ದೇವಸ್ಥಾನದಷ್ಟೇ ಪ್ರಾಧ್ಯನ್ಯತೆ ಇದೆ ಹಾಗೂ ಅಲ್ಲಿ ಅಷ್ಟು ಸುಸಜ್ಜಿತವಾಗಿ ಸ್ಮಶಾನಗಳನ್ನು ನಿರ್ಮಾಣ ಮಾಡಲಾಗುತ್ತದೆ ಅದರಂತೆ ಮುಂಡುಬೆಟ್ಟುವಿನಲ್ಲಿ ಗ್ರಾಮದ ಹಿರಿಯರ,ಸಾರ್ವಜನಿಕರ ಮತುವರ್ಜಿಯಿಂದ ಜನಪ್ರತಿನಿಧಿಗಳ ಸಹಕಾರದಿಂದ ಸುಸಜ್ಜಿತವಾಗಿ ನಿರ್ಮಿತವಾದ ಈ ರುದ್ರಭೂಮಿಯು ಅಷ್ಟೇ ಸುಂದರವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇದು ಮಾದರಿಯಾಗಿದ್ದು ಇಂತಹದೇ ರುದ್ರಭೂಮಿಗಳು ಗ್ರಾಮಗಳಲ್ಲಿ ನಿರ್ಮಾಣವಾಗಲಿ ಎಂದರು ಮಾತ್ರವಲ್ಲ ಮುಂಡಬೆಟ್ಟುವಿನ ಉದ್ದೇಶಿತ ಯೋಜನೆಗಳಿಗೆ ಆರ್ಥಿಕ ಸಹಕಾರ ನೀಡಲು ಎಂದು ಇರುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಮೊೈದೀನ್ ಬಾವಾ ಯಾವೂದೇ ಜಾತಿ,ಮತ ಭೇದವಿಲ್ಲದೇ ಸರ್ವರ ಸಹಕಾರದಿಂದ ನಿರ್ಮಾಣವಾದ ರುದ್ರಭೂಮಿ ಎಲ್ಲರಿಗೂ ಮಾದರಿ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಸಲು ಬದ್ಧ ಎಂದರು.
ಜಿ..ಪಂ ಸದಸ್ಯ ಮಾತನಾಡಿ ಜನಾರ್ಧನ ಗೌಡ ಮಾತನಾಡಿ ಸುತ್ತ ಗ್ರಾಮದಲ್ಲಿ ಎಲ್ಲೂ ಇಲ್ಲದ ಹಾಗೂ ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತ ರುದ್ರಭೂಮಿ ಮುಂಡಬೆಟ್ಟುವಿನಲ್ಲಿ ಸಾರ್ವಜನಿಕರ ಮುಖಾಂತರ ನಡೆದಿರುವುದು ಶಾಘ್ಲನೀಯ ಎಂದರು.
ಮುಂಬೈ ಉದ್ಯಮಿ ಬಾಬು ಶೆಟ್ಟಿ ಪೆರಾರ ಮಾತನಾಡಿ ಗ್ರಾಮದಲ್ಲಿ ಇಂತಹ ರುದ್ರಭೂಮಿ ನಿರ್ಮಾಣವಾಗಿರುವುದು ಹೆಮ್ಮೆ ಅದರಲ್ಲಿ ನಾನು ಭಾಗಿಯಾಗಿರುವುದು ಪುಣ್ಯ ಇನ್ನೂ ಹೆಚ್ಚಿನ ಅಭಿವೃದ್ಧಿ ನಡೆಯಲಿ ಎಂದು ಆಶಿಸಿದರು.
ಈ ಸಂದರ್ಭ ಹೊಸದಾಗಿ ನಿರ್ಮಾಣವಾದ ರುದ್ರಭೂಮಿ ಸಂಪರ್ಕ ಕಾಂಕ್ರಿಟ್ ರಸ್ತೆಯನ್ನು ಅತಿಥಿಗಳು ಉದ್ಘಾಟಿಸಿದರು,ಇಂಟರ್‍ಲಾಕ್ ಆವರಣವನ್ನು ವಿಜಯನಾಥ ವಿಠಲ ಶೆಟ್ಟಿ ಉದ್ಘಾಟಿಸಿ,ಮುಕ್ತಿಧಾಮವನ್ನು ಉದ್ಯಮಿ ಶಂಕರ ಸೇಮಿತ ಉದ್ಘಾಟಿಸಿದರು.
ಈ ಸಂದರ್ಭ ರುದ್ರಭೂಮಿ ನಿರ್ಮಾಣದಲ್ಲಿ ಶ್ರಮವಹಿಸಿದ ಕಂಟ್ರಾಕ್ಟರ್ ರಮೇಶ್ ಮೇಸ್ತ್ರಿ,ಮಾಜಿ ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ,ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್‍ಚಂದ್ರ,ಸಂಗೀತ ಕಲಾವಿದ ಕರುಣಾಕರ ಮಂಗಳೂರು,ಯಕ್ಷಗಾನ ಭಾಗವತರಾದ ರವೀಚಂದ್ರ ಕನ್ನಡಿಕಟ್ಟೆ,ಪಟ್ಲ ಸತೀಶ್ ಶೆಟ್ಟಿ,ಗಿರೀಶ್ ರೈ ಕಕ್ಕೆಪದವು,ಕಲಾವಿದ ಮಾದವ ಬಂಗೇರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಅತಿಥಿಗಳಾಗಿ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್,ಜಿ.ಪಂ ಸದಸ್ಯ ಜನಾರ್ಧನ ಗೌಡ,ಯು.ಪಿ ಇಬ್ರಾಹಿಂ,ತಾ.ಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮರಬ್ಬ,ಗುರುಪುರ ನಾಡ ಕಛೇರಿ ಉಪತಹಶೀಲ್ದಾರ ಶಿವ ಪ್ರಸಾದ್ ಕಾರ್ಕಳ,ಉದ್ಯಮಿ ಶಂಕರ ಸೇಮಿತ,ಗಂಗಾಧರ ರೈ ಮುಂಡಬೆಟ್ಟು,ಉದ್ಯಮಿ ಬಾಬು ಶೆಟ್ಟಿ ಪೆರಾರ ಸನ್ನಿಧಿ,ಪ್ರತೋಷ್ ಮಲ್ಲಿ,ಮೋಹನ್‍ದಾಸ್ ರೈ,ಕಿಶೋರ್ ಕಬೆತ್ತಿಗುತ್ತು,ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಎಂ.,ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ.,ಕಂಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮತ್ತು ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೃಷ್ಣ ಅಮೀನ್,ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಮೋನಪ್ಪ ಬಂಗೇರ ತನ್ಯಗುತ್ತು,ಸಮಿತಿ ಅದ್ಯಕ್ಷ ನವೀನ್‍ಚಂದ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ನೂರ್ ಅಹ್ಮದ್,ಸದಸ್ಯರಾದ ದೇವಪ್ಪ ಶೆಟ್ಟಿ ಕೊಕ್ಕಾರು,ಯಶವಂತ ಪೂಜಾರಿ,ಸಿತಾರಾಮ ಗೌಡ,ಭಾಸ್ಕರ್ ಮಲ್ಲಿ,ಹೇಮಲತಾ,ಅಮಿತಾ ಮೋಹನ್,ಪ್ರಫುಲ್ಲಾ,ಪೀಟರ್ ಲೋಬೋ,ವೇದಾವತಿ,ಶಾಲಿನಿ,ಗಣೇಶ್ ಪೂಜಾರಿ,ಸಮಿತಿಯ ಭಾಸ್ಕರ್ ಶೆಟ್ಟಿ,ಪದ್ಮನಾಭ ನೀರಳಿಕೆ,ರಂಗನಾಥ ಭಂಡಾರಿ,ಶಂಕರ ಅಡಪ ಪೆರೀರ್ ಮುಂತಾದವರು ಉಪಸ್ಥಿತರಿದ್ದರು.ನಂತರ ಯಕ್ಷಮಿತ್ರರು ಮೂಡುಪೆರಾರ ಮತ್ತು ಈಶ್ವರಕಟ್ಟೆ ಇವರ ಪ್ರಾಯೋಜಕತ್ವದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಸತ್ಯ ಹರಿಶ್ಚಂದ್ರ ಯಕ್ಷಗಾನ ಬಯಲಾಟ ನಡೆಯಿತು.
ಮಾಜಿ ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸ್ವಾಗತಿಸಿ,ಸುರೇಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು

