ಕೈಕಂಬ:ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದಿವ್ಯ ಹಸ್ತದಲ್ಲಿ “ಗುರುದಯ” ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇದರ ಉದ್ಘಾಟನಾ ಸಮಾರಂಭ ಹಾಗೂ “ಬದ್ಕೆರಾಪುಜಿ” ನಾಟಕದ ಮಹೂರ್ತ ಕಾರ್ಯಕ್ರಮವು ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ ಮಾ.12 ಅದಿತ್ಯವಾರ ಬೆಳ್ಳಗೆ 8.15ಕ್ಕೆ ಗುರುಪುರ ಶ್ರೀ ರಾಮಾಂಜನೇಯದೇವರು ಹಾಗೂ ಶ್ರೀ ಅಭಯ ನರಸಿಂಹ ದೇವರ ಸಾನಿಧ್ಯದಲ್ಲಿ ಜರುಗಿತು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ತೀರ ಹತ್ತಿರದಲ್ಲಿ ರಂಗಭೂಮಿಯನ್ನು ಕಂಡ ಅವರು ತಮ್ಮ ಅನುಭವಗಳನ್ನು ವಿವರಿಸುತ್ತಾ ಹೊಸ ಕಲಾವಿದರಿಗೆ ಮಾರ್ಗದರ್ಶನದ ಸಂದೇಶವನ್ನು ನೀಡಿ ಆಶೀರ್ವದಿಸಿದರು. ನಂತರ ಲಕುಮಿ ತಂಡದ ಪ್ರಭುದ್ದಕಲಾವಿದ ಹಾಗೂ ಲೇಖಕ ನವೀನ್ ಶೆಟ್ಟಿ ಅಳಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಣ್ಣದ ಲೋಕದ ಹಲವಾರು ಅನುಭವಗಳನ್ನು ಹಂಚಿಕೊಂಡು ರಂಗ್‍ದಕಲಾವಿದರಿಗೆ ಸಲಹೆ ಸೂಚನೆ ನೀಡುವ ಮೂಲಕ ಸಂಪೂರ್ಣ ಸಹಕಾರ ಸದಾ ನಿಮ್ಮೊಂದಿಗಿದೆ ಎಂದು ತಿಳಿಸಿ, ತಾವು ಬರೆದ ನಾಟಕಗಳ ಹಾಗೂ “ಎಕ್ಕಸಕ” ಸಿನಿಮಾದ ಮುಹೂರ್ತವು ಇದೇ ವಜ್ರದೇಹಿ ವೇದಿಕೆಯಲ್ಲಿ ನಡೆದಿರುವ ಬಗ್ಗೆ ನೆನಪಿಸಿಕೊಂಡು ತಂಡದ ಯಶಸ್ಸಿಗೆ ಶುಭಹಾರೈಸಿದರು.ತಂಡದ ನಿರ್ದೇಶಕರಾದ ಪ್ರಶಾಂತ್ ಕೈಕಂಬ ಇವರು “ಗುರುದಯ ತಂಡದ ಹುಟ್ಟಿನ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಂಡದ ಸಾರಥಿ ಪ್ರಶಾಂತ್ ಗುರುಪುರ, ಮುಖ್ಯ ಅತಿಥಿಗಳಾಗಿ ವಿಷ್ಣುಕಾಮತ್, ಪ್ರವೀಣ್ ಶೆಟ್ಟಿ, ವರದ್‍ರಾಜ್‍ಶೆಟ್ಟಿ ಉಪಸ್ಥಿತರಿದ್ದರು.



