ಬಂಟ್ವಾಳ : ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಹ್ವಾನಿತ 16 ತಂಡಗಳ 11 ಜನರ 6 ಓವರ್‍ಗಳ ಅಂಡರ್ ಆರ್ಮ್ ‘ಭೂಯಾ ಟ್ರೋಫಿ-2017’ ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 25 ಹಾಗೂ 26 ರಂದು ಆಲಡ್ಕ ಮೈದಾನದಲ್ಲಿ ನಡೆಯಲಿದೆ.

ವಿಜೇತ ತಂಡಗಳಿಗೆ ಪ್ರಥಮ ರೂ. 20,020/-, ದ್ವಿತೀಯ ರೂ. 10,010/- ಹಾಗೂ ಭೂಯಾ ಟ್ರೋಫಿ ಅಲ್ಲದೆ ಉತ್ತಮ ದಾಂಡಿಗ, ಎಸೆತಗಾರ, ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ವೈಯುಕ್ತಿಕವಾಗಿ ನೀಡಿ ಗೌರವಿಸಲಾಗುವುದು. ಈ ಬಗ್ಗೆ ವಿವರಗಳಿಗೆ 8123123732, 8904415885, 9164643932 ಅಥವಾ 9611273877 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಂಚಾಲಕ ಶಫೀಕ್ ಉಪ್ಪುಗುಡ್ಡೆ ತಿಳಿಸಿದ್ದಾರೆ.
