ಬಂಟ್ವಾಳ : ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಅವರನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಸನ್ಮಾನಿಸಿದರು.
ಬಿ.ಸಿ.ರೋಡು-ಮಿತ್ತಬೈಲು ಜುಮಾ ಮಸೀದಿ ಆಡಳಿತ ಸಮಿತಿ ಕಛೇರಿಗೆ ಭೇಟಿ ನೀಡಿದ ಸಚಿವರು ಮಿತ್ತಬೈಲು ಉಸ್ತಾದ್ ಅವರನ್ನು ಸನ್ಮಾನಿಸಿ ಪ್ರಶಂಸಿದರು. ಈ ಸಂದರ್ಭ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಶರೀಫ್, ಮಸೀದಿ ಅಧ್ಯಕ್ಷ ಹಬೀಬುಲ್ಲಾ, ಉಪಾಧ್ಯಕ್ಷ ಇಬ್ರಾಹಿಂ ಬೋಗೋಡಿ, ಕೋಶಾಧಿಕಾರಿ ಎಸ್.ಎಂ. ಮುಹಮ್ಮದ್ ಅಲಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ, ಕಾರ್ಯದರ್ಶಿಗಳಾದ ಅಶ್ರಫ್ ಶಾಂತಿಅಂಗಡಿ, ಹನೀಫ್ ನಂದರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Yasir Sanmana

By suddi9

Leave a Reply

Your email address will not be published. Required fields are marked *