ಮುಂಬಯಿ: ಭಂಡಾರಿ ಸಮಾಜವು ಶ್ರೇಷ್ಠ ಸಮಾಜ. ಗುಣ ನಡತೆ, ವಿಧೇಯತೆಗೆ ಪ್ರೇರಕರು. ಈ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕೊಡುಗೆ ಅನನ್ಯವಾಗಿದೆ. ಮನುಷ್ಯರಿಗೆ ಜಾತಿ ಮುಖ್ಯವಲ್ಲ ನೀತಿ ನಿಯತ್ತಿನ ಬಾಳು ಮುಖ್ಯವಾಗಿದೆ. ಇದನ್ನೇ ಈ ಸಮಾಜ ತೋರಿಸುತ್ತಿದೆ. ಭಂಡಾರಿ ಜನತೆಯ ಹೃದಯ ಶ್ರೀಮಂತಿಕೆ ಸರ್ವರಿಗೂ ಅನುಕಾರಣೀಯ. ಸಮಾಜ ಭಾಂದವರ ಸಹಯೋಗವಿದ್ದರೆ ಸರ್ವವೂ ಸಮೃದ್ಧಿಯುತವಾಗುವುದು. ಭಂಡಾರಿ ಸಮಾಜ ಬಂಧುತ್ವತೆಗೆ ಪ್ರೇರಕರು ಎಂದು ತುಳು ಚಿತ್ರ ನಿರ್ಮಾಪಕ ಉದಯ ಶೆಟ್ಟಿ ಕಾಂತಾವಾರ ತಿಳಿಸಿದರು.

bhandary-seva-samiti-anni-3
bhandary-seva-samiti-anni-5
bhandary-seva-samiti-anni-38

ಭಂಡಾರಿ ಸೇವಾ ಸಮಿತಿ ಮುಂಬಯಿ ತನ್ನ ವಾರ್ಷಿಕೋತ್ಸವ ಮತ್ತು 2016ನೇ ಸಾಲಿನ ಭಂಡಾರಿ ಸ್ನೇಹ ಸಮ್ಮಿಲನವನ್ನು ಇಂದಿಲ್ಲಿ ಆದಿತ್ಯವಾರ ದಿನಪೂರ್ತಿ ಥಾಣೆ ವಾಗ್ಲೇ ಎಸ್ಟೇಟ್‍ನ ಡಿ’ಸೋಜಾವಾಡಿ ಇಲ್ಲಿನ ಸೈಂಟ್ ಲಾರೇನ್ಸ್ ಶಾಲಾ ಸಭಾಗೃಹದಲ್ಲಿ ವಿಜೃಂಭನೆಯಿಂದ ಸಂಭ್ರಮಿಸಿದ್ದು ಮುಖ್ಯ ಅತಿಥಿಯಾಗಿದ್ದು ಉದಯ ಶೆಟ್ಟಿ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನೀಡಿ ಮಾತನಾಡಿದರು.

bhandary-seva-samiti-anni-1

ಸೇವಾ ಸಮಿತಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಬಾಲಿವುಡ್ ನಟ ಹಾಗೂ ಸಿಐಡಿ ಪ್ರಸಿದ್ಧಿಯ ಪ್ರಬುದ್ಧ ಕಲಾವಿದ ಹರೀಶ್ ವಾಸು ಶೆಟ್ಟಿ, ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಬಾರ್ಕೂರು ಅಧ್ಯಕ್ಷ, ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕ್ಲೇಶಪುರ ಉಪಸ್ಥಿತರಿದ್ದು ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಸಲೋಗಿ ಎಸ್.ಭಂಡಾರಿ, ಸ್ವಾತಿ ಎಸ್.ಭಂಡಾರಿ, ನವೀನ್ ಭಂಡಾರಿ, ಕುನಾಲ್ ಭಂಡಾರಿ, ಸೌರಭ್ ಸುರೇಶ್ ಭಂಡಾರಿ (ಪರವಾಗಿ ಅನಘಾ ಎಸ್.ಭಂಡಾರಿ) ಮೊದಲಾದವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು. ಉಮೇಶ್ ಹೆಗ್ಡೆ ಕಡ್ತಲ, ಕಿಶೋರ್ ಪಿಲಾರ್, ನಾಗರಾಜ ಗುರುಪುರ, ರಾಜೇಶ್ ಹೆಗ್ಡೆ, ಹರೀಶ್ ಹೆಗ್ಡೆ, ಮನೋಹರ್ ಶೆಟ್ಟಿ ನಂದಳಿಕೆ ಮುಂತಾದವರಿಗೆ ಅತಿಥಿಗಳು ಸತ್ಕರಿಸಿದರು.

bhandary-seva-samiti-anni-7

63 ರ ಸಂಭ್ರಮ ಸ್ತುತ್ಯರ್ಹ. ಭಂಡಾರಿ ಮತ್ತು ದೇವಾಡಿಗರೆಲ್ಲರೂ ಬಂಧು ಮಿತ್ರರು, ಸಹೋದದರು ಆಗಿದ್ದಾರೆ. ನಾವೆಲ್ಲರೂ ದೇವರಿಗೂ ಸಮೀಪಗರು. ವಿದ್ಯಾವಂತರಾದರೆ ಮಾತ್ರ ಹಿಂದುಳಿದ ಸಮಾಜಗಳ ಮುನ್ನಡೆ ಸಾಧ್ಯ. ನಮ್ಮ ಸಮುದಾಯಗಳ ಪ್ರಸಕ್ತ ಮುನ್ನಡೆ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿದೆ. ಇಂತಹ ಸೇವೆ ಭವಿಷ್ಯತ್ತಿನ ಸಾವಿರಾರು ವರ್ಷಗಳಿಗೆ ಮಾದರಿ ಆಗಲಿದೆ ಎಂದು ಧರ್ಮಪಾಲ್ ದೇವಾಡಿಗ ನುಡಿದರು.

bhandary-seva-samiti-anni-2

ಸುರೇಶ್ ಭಂಡಾರಿ ಮಾತನಾಡಿ ಸಮಾಜ ಸೇವೆ ಹೃನ್ಮನಗಳ ಕೂಡುವಿಕೆಗಳ ಮಿಲನವಾಗಿದೆ. ಇಲ್ಲಿ ಸೇವಾ ಮನೋಭಾವ ಅತೀ ಮುಖ್ಯವಾಗಿದೆ. ಬೆಳೆಯುವ ಸಿರಿ ಮೊಳಕೆಯಲಿ ಎನ್ನುವಂತೆ ನಮ್ಮ ಸಮಾಜ ಒಳಿತಾಗುವ ಲಕ್ಷಣ ಇವತ್ತಿನ ನಮ್ಮ ಒಗ್ಗೂಡುವಿಕೆ ಆಗಿದೆ. ಜಾತಿಯನ್ನು ಗುರುತಿಸುವುದು ಅಂದರೆ ಮಾತಾ ಪಿತಾರನ್ನು ಗುರುತಿಸುವುದು ಎಂದರ್ಥ. ತಲೆಮೇಲಿನ ಕೂದಲಿನಿಂದ ಕಾಲಿನ ಉಗುರುವರೆಗೆ ಸುಂದರೀಕರಿಸುವುದು ನಮ್ಮ ಕುಲ ಕಸುಬು ಆಗಿದೆ. ಆದುದರಿಂದ ನಾವು ಭಂಡಾರಿಗಳಾಗಿ ಗುರುತಿಸಿಕೊಳ್ಳಬೇಕು. ನಾವು ಧರ್ಮಾನುಸಾರವಾಗಿ ಬಾಳುತ್ತಾ ಎಲ್ಲರಿಗೂ ಮಾದರಿ ಆಗೋಣ ಎಂದು ತಿಳಿಸಿದರು.

bhandary-seva-samiti-anni-21

ಹರೀಶ್ ವಾಸು ಶೆಟ್ಟಿ ಮಾತನಾಡಿ ಭಂಡಾರಿ ಸಮಾಜದ ಇಂತಹ ಕೌಟುಂಬಿಕ ಉತ್ಸಹ ನನ್ನಲ್ಲಿ ಉತ್ಸುಕತೆ ಮೂಡಿಸಿದೆ. ನಿಮ್ಮ ಸಾಮಾಜಿಕ ಸೇವೆ ಸಮಾಜದಲ್ಲಿ ಸಾಂಘಿಕತೆಗೆ ಪೂರಕವಾಗಿದೆ ಎಂದು ತಿಳಿಸಿದರು.

bhandary-seva-samiti-anni-18

ಸಮಾಜದ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಕಂಡು ಗುರುತಿಸಿಕೊಳ್ಳುವ ಸಂಯೋಗ ಇದಾಗಿದೆ. ಮುಂಬಯಿಯಲ್ಲಿನ ಸಮಾಜ ಬಾಂಧವರು ಈ ಸಮಾಜದ ಧೀಶಕ್ತಿಯಾಗಿದ್ದಾರೆ. ಸಮಾಜದ ಭವ್ಯ ಕಟ್ಟಡ ರೂಪಿಸಿ ಭಂಡಾರಿತನದ ಭವ್ಯತೆ ಮರೆಸೋಣ. ಇತಿಹಾಸದ ಪುಟಗಳಲ್ಲಿ ನಮ್ಮ ಸಾಮಾಥ್ರ್ಯ ತೋರ್ಪಡಿಸೋಣ ಎಂದು ಸದಾಶಿವ ಭಂಡಾರಿ ಮಾತನಾಡಿದರು.

bhandary-seva-samiti-anni-29

ವಾರ್ಷಿಕೋತ್ಸವಗಳು ಸ್ವಸಮಾಜದ ಸುಭದ್ರತೆಗೆ ಆಡಿಪಾಯವಾಗಿದೆ. ಸಮಾಜವನ್ನು ಬಲಪಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರೇಪಣೆ ನೀಡುತ್ತವೆ. ನಾವೂ ಎಲ್ಲಾ ಸಮಾಜಕ್ಕೂ ಸಮಾನವಾದ ಸಮಾಜವೆಂದು ಮುನ್ನಡೆದಾಗ ಭೇದ ಭಾವಗಳು ಮರೆಯಾಗಿ ನಮ್ಮ ಸಮಾಜ ಫಲಗೊಳ್ಳುವುದು. ಪ್ರತಿಯೊಂದು ಸಮಾಜಗಳು ಬಲಯುತವಾದಾಗ ಶುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶೇಖರ್ ಭಂಡಾರಿ ಅಭಿಪ್ರಾಯ ಪಟ್ಟರು.

bhandary-seva-samiti-anni-34

ಸಮಿತಿ ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಬಿ.ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ವೇದಿಕೆಯಲ್ಲಿ ಆಸೀನರಾಗಿದ್ದರು.

bhandary-seva-samiti-anni-45

ಕಾರ್ಯಕ್ರಮದಲ್ಲಿ ಜೊತೆ ಕೋಶಾಧಿಕಾರಿಗಳಾದ ಕರುಣಾಕರ್ ಎಸ್. ಭಂಡಾರಿ, ಕರುಣಾಕರ ಕೆ.ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಉದಯ ಭಂಡಾರಿ ಶಹಾಪುರ, ಕೇಶವ ಭಂಡಾರಿ, ರುಕ್ಮಯ ಭಂಡಾರಿ, ನಾರಾಯಣ ಭಂಡಾರಿ, ಪದ್ಮನಾಭ ಭಂಡಾರಿ, ರಾಕೇಶ್ ಭಂಡಾರಿ, ಜಯಶೀಲ ಭಂಡಾರಿ, ರಮೇಶ್ ಭಂಡಾರಿ, ವಿಶ್ವನಾಥ ಭಂಡಾರಿ, ಕರುಣಾಕರ ಭಂಡಾರಿ, ಜಯ ಭಂಡಾರಿ, ನವೀನ್ ಭಂಡಾರಿ, ಪ್ರಶಾಂತ್ ಭಂಡಾರಿ ಪುಣೆ, ಮಹಿಳಾ ಉಪಕಾರ್ಯಾಧ್ಯಕ್ಷೆಯರಾದ ಪಲ್ಲವಿ ರಂಜಿತ್ ಭಂಡಾರಿ, ಅನುಶ್ರೀ ಶಿವರಾಮ ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ, ಕೋಶಾಧಿಕಾರಿ ಕು| ಕ್ಷಮಾ ಆರ್.ಭಂಡಾರಿ,ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಲಿತಾ ವಿಶ್ವನಾಥ ಭಂಡಾರಿ, ಶಾಲಿನಿ ರಮೇಶ್ ಭಂಡಾರಿ ಸೇರಿದಂತೆ ಮಹಾರಾಷ್ಟ್ರ ರಾಜ್ಯದಾದ್ಯಂತ ಭಂಡಾರಿ ಸಮಾಜ ಬಂಧುಗಳು ಉಪಸ್ಥಿತರಿದ್ದರು.

bhandary-seva-samiti-anni-a4

ಶ್ರೀ ಕಚ್ಚೂರು ನಾಗೇಶ್ವರ ಕುಲದೇವರನ್ನು ರಿಯಾ ರಂಜಿತ್ ಭಂಡಾರಿ ಸ್ತುತಿಸಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ನ್ಯಾ| ಆರ್.ಎಂ. ಭಂಡಾರಿ ಸ್ವಾಗತಿಸಿದರು. ಜೊತೆ ಕಾರ್ಯದಶಿ ಶಶಿಧರ್ ಭಂಡಾರಿ ಅತಿಥಿsಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ.ಭಂಡಾರಿ ಮತ್ತು ಮಹಿಳಾ ಜೊತೆ ಕಾರ್ಯದರ್ಶಿ ಸರಿತಾ ಕೆ.ಬಂಗೇರ ಸಭಾ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ ವಂದಿಸಿದರು.

bhandary-seva-samiti-anni-b2

ವಾರ್ಷಿಕೋತ್ಸವದ ಅಂಗವಾಗಿ ಸಮಾಜ ಬಂಧುಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಉಡುಪಿಯ ಜಯಶೀಲ ಭಂಡಾರಿ ಮತ್ತು ಬಳಗವು `ಮಾಯದ ದೈವ’ ಹಾಸ್ಯ ಪ್ರಹಸನ ಕಾರ್ಯಕ್ರಮ ಹಾಗೂ ಸಂಸ್ಥೆಯ ಸದಸ್ಯರು `ಲ್ತಿನಕ್ಲು ತಿನ್ಪೇರ್‘ ತುಳು ನಾಟಕ ಪ್ರದರ್ಶಿಸಿದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

By suddi9

Leave a Reply

Your email address will not be published. Required fields are marked *