ಮುಂಬಯಿ: ಯಕ್ಷಗಾನ ನಮ್ಮ ನಾಡಿನ ಸಂಪ್ರದಾಯ, ಪರಂಪರೆಯಾಗಿದೆ. ಜನಪದದಲ್ಲಿ ಜನವೆತ್ತ ಶಾಸ್ತ್ರೀಯ ಸಂಭ್ರಮ ಯಕ್ಷಗಾನ. ತ್ರಿವಳಿ ಪ್ರಭೇಧಗಳನ್ನೊಳಗೊಂಡಿದೆ. ಮತ್ತಿತರ ಅವಿಭಾಜ್ಯ ಅಂಗಗಳನ್ನೊಳಗೊಂಡÀ ಯಕ್ಷಗಾನದ ತಪ್ಪು ಒಪ್ಪುಗಳ ವಿಮರ್ಶಕರು ಪ್ರೇಕ್ಷಕರಾಗಿರುತ್ತಾರೆ ಎಂದು ಲಿಂಗೋ ಇಂಡಿಯಾ ಪ್ರೈ.ಲಿ. ಇದರ ಎಂ.ಡಿಯವರಾದ ಮನೋಹರ್ ನಾಯಕ್ ಹೇಳಿದರು.

y-9

y-11

yaksha-3

yakshagana-1

ಅವರು ಇಂದಿಲ್ಲಿ ಶನಿವಾರ ಸಯನ್ ಗೀತಾ ಗೋವಿಂದ ಹಾಲ್‍ನಲ್ಲಿ ಮುಂಬಯಿ ಪದವೀಧರ ಯಕ್ಷಗಾನ ಸಮಿತಿ ಪ್ರಾಯೋಜಕತ್ವದಲ್ಲಿ ನಡೆದ 16 ನೇ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಯಕ್ಷಗಾನ ಭಾಗವತರಾದ ಜಯಲಕ್ಷ್ಮೀ ದೇವಾಡಿಗ ಅವರಿಗೆ ಕಿರೀಟ ನೀಡುವ ಉದ್ಘಾಟಿಸಿ ಸಂಭಾಷಣೆಯ ಮೂಲಕ ಮಾತನಾಡಿದರು.ಶ್ರೀ ಕ್ಷೇತ್ರ ಕಟೀಲು ದೇವಳದ ಅರ್ಚಕ, ಯಕ್ಷಗಾನ ಚಿಂತಕ, ವಿದ್ವಾನ್ ವೇ.ಮೂ. ಹರಿನಾರಾಯಣದಾಸ ಅಸ್ರಣ್ಣರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

yaksha-6
y-4

ಮುಖ್ಯ ಅಭ್ಯಾಗತರಾಗಿದ್ದ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ತಾರನಾಥ ವರ್ಕಾಡಿ ಮಾತನಾಡಿ, ಅಕಾಡೆಮಿಗೆ ವಾರ್ಷಿಕ ರೂ. 1 ಕೋಟಿ ಅನುದಾನ ಇದೆ. ಕಾಸರಗೋಡು ಸೇರಿದಂತೆ 5 ಜಿಲ್ಲೆಗಳ ಯಕ್ಷಗಾನ ಮೇಳಗಳನ್ನು ಬಿಟ್ಟರೆ ಬಯಲಾಟ ಮೇಳವು 25 ರಷ್ಟಿದೆ. ಅದರೊಂದಿಗೆ ಗೊಂಬೆಯಾಟ ಮೇಳವು ಸೇರಿಕೊಂಡಿದೆ. ಹಾಗಾಗಿ ಅನುದಾನವು ಹಂಚಿಹೋಗುತ್ತದೆ. ಆಧುನಿಕ ಸಂಸ್ಕೃತಿಯ ವರ್ತುಲದಲ್ಲಿ ಆತಂಕಿತರಾದ ಸಂದರ್ಭ ಮಕ್ಕಳು ಯಕ್ಷಗಾನಕ್ಕೆ ಗೆಜ್ಜೆ ಕಟ್ಟುತ್ತರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂಬೈ ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ ಹೆಚ್.ಬಿ.ಎಲ್. ರಾವ್ ಅವರ ಯಕ್ಷಗಾನ ಉಜ್ಜೀವನಗೊಳಿಸುವ ಕಾರ್ಯಕ್ರಮವು ಯಕ್ಷಗಾನದ ಇತಿಹಾಸದಲ್ಲಿಯೇ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಾಧನೆ ಆಗಿದೆ ಎಂದರು.

y-13

yaksha-2

ಪ್ರಸಂಗವೂ ಸಾಹಿತ್ಯ. ಹಿಮ್ಮೇಳದಲ್ಲಿ ಸಾಹಿತ್ಯ. ಮುಮ್ಮೇಳವೂ ಸಾಹಿತ್ಯ. ಆದುದರಿಂದ ಯಕ್ಷಗಾನವು ಸಾಹಿತ್ಯ ಭಾಂಡಾಗಾರ. ಅದರಲ್ಲೂ ವಾಚಿಕದಲ್ಲಿ ಮುಮ್ಮೇಳದವರು ಗದ್ಯ ಕವಿಗಳು ಎಂದರೆ ಅತಿಶಯೋಕ್ತಿಯಲ್ಲ. ಮನದೊಳಗೆ ಪ್ರಕಟವಾದ ಭಾವವನ್ನು ಇನ್ನೊಬ್ಬನಿಗೆ ವಾಚಕವಾಗಿ ತಿಳಿಸುವ ಪ್ರಧಾನ ಮಾಧ್ಯಮವೇ ಭಾಷೆ. ಈ ಭಾಷೆ ಮನೋಹರವಾಗಿ ರಮಣೀಯಾರ್ಥವನ್ನು ಹೊರಹೊಮ್ಮುವುದಿದ್ದಲ್ಲಿ ಅದನ್ನು ಸಾಹಿತ್ಯ ಅನ್ನುತ್ತಾರೆ. ಶಾಸ್ತ್ರವನ್ನು ಕಾವ್ಯವಾಗಿಸುವ ಕೀರ್ತಿ ಯಕ್ಷಗಾನಕ್ಕಿದೆ. ಕಾವ್ಯವನ್ನು ಶಾಸ್ತ್ರವಾಗಿಸುವ ಪ್ರೌಢಿಮೆ ಅದರ ಇನ್ನೊಂದು ಪ್ರಕಾರವಾದ ತಾಳಮದ್ದಲೆಗಿದೆ. ಒಟ್ಟಿನಲ್ಲಿ ಹೇಳುವುದಾದರೆ ನೃತ್ಯ ಶ್ರವ್ಯ ಕಾವ್ಯವೂ ಯಕ್ಷಗಾನದ ಸ್ವರೂಪ ಎಂದು ಸಮ್ಮೇಳನದ ಅಧ್ಯಕ್ಷ ವಿದ್ವಾನ್ ಹರಿನಾರಾಯಣದಾಸ ಅಸ್ರಣ್ಣರು ತಿಳಿಸಿದರು.y-10

ಮುಂಬೈ ಪದವೀಧರ ಯಕ್ಷಗಾನ ಸಮಿತಿ ಅಧ್ಯಕ್ಷ ಹೆಚ್.ಬಿ.ಎಲ್. ರಾವ್ ಸ್ವಾಗತಿಸಿದರು. ಭಾಗವತಿಕೆಯ ಮೂಲಕ ಕು.ಅಪೂರ್ವ ಆರ್. ಸುರತ್ಕಲ್, ಜಯಲಕ್ಷ್ಮೀ ದೇವಾಡಿಗ, ಡಾ. ಸಹನಾ ಪೋತಿ ಅವರು ಯಕ್ಷಜ್ಯೋತಿ ಪ್ರಜ್ವಲನೆಗೈದರು. ಜಿ.ಎಸ್ ನಾಯಕ ವಂದಿಸಿದರು. ಡಾ. ಜ್ಯೋತಿಸತೀಶ್ ಕಾರ್ಯಕ್ರಮ ನಿರ್ವಹಿಸಿದರು.

yaksha-7

ಉದ್ಘಾಟನೆಗೂ ಮುನ್ನ ಯಕ್ಷಗಾನ ಪೂರ್ವರಂಗ, ಒಡ್ಡೋಲಗಸಭಾಕಲಶ, ಬಣ್ಣದ ವೇಷದ ಒಡ್ಡೋಲಗ, ಹೆಣ್ಣು ಬಣ್ಣದ ಒಡ್ಡೋಲಗ, ಬಡಗು ತಿಟ್ಟಿನ ಸ್ತ್ರೀ ವೇಷದ ಕುಣಿಕೆ ಮುಂತಾದವು ಪ್ರದರ್ಶನವಾಯಿತು.

By suddi9

Leave a Reply

Your email address will not be published. Required fields are marked *