ಮುಂಬಯಿ: ರಾಷ್ಟ್ರವಾದಿ ಕಾಂಗ್ರೇಸ್ ಪಾರ್ಟಿ (ಎನ್‍ಸಿಪಿ) ಇದರ ಮುಂಬಯಿ ವಿಭಾಗೀಯ (ಪ್ರಶಾಸನ)ದ ಉಪಾಧ್ಯಕ್ಷರಾಗಿ ಸೇವಾ ನಿರತ ಲಕ್ಷ ್ಮಣ್ ಸಿ.ಪೂಜಾರಿ ಅವರನ್ನು ಪಕ್ಷದ ಪಾರ್ಲಿಮೆಂಟ್ ಬೋರ್ಡ್‍ಗೆ ಆಯ್ಕೆ ಗೊಳಿಸಿದೆ.
ಮುಂಬರುವ 2017ನೇ ಫೆಬ್ರವರಿಯಲ್ಲಿ ನಡೆಯಲಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ (ಬಿಎಂಸಿ) ಮಹಾಚುನಾವಣೆಗಾಗಿ ಪಕ್ಷವು ಪ್ರಮುಖರನ್ನು ಆಯ್ಕೆಗೊಳಿಸಿದ್ದು, ಮುಂಬಯಿಯಲ್ಲಿನ 6 ಜಿಲ್ಲೆಗಳಲ್ಲಿನ 227 ವಾರ್ಡ್‍ಗಳ ಉಮೇದ್ವಾರಿಕೆ ಆಯ್ಕೆ ಪ್ರಕ್ರಿಯೆಯ ಪ್ರಧಾನ ಹುದ್ದೆ ಇದಾಗಿದೆ.
ಎನ್‍ಸಿಪಿ ಆಯ್ಕೆ ಸಮಿತಿ ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ನಿಕಟವರ್ತಿ ಆಗಿರುವ ಲಕ್ಷ್ಮಣ್ ಪೂಜಾರಿ ಇಂತಹ ಹುದ್ದೆಯನ್ನಲಂಕರಿಸಿದ ಪ್ರಪ್ರಥಮ ತುಳುಕನ್ನಡಿಗರೆಣಿಸಿದ್ದಾರೆ.
ದಕ್ಶಿಣ ಕನ್ನಡ ಜಿಲ್ಲೆಯ ಮಂಗಳೂಋ ಮೂಲ್ಕಿ ಚಿತ್ರಾಪುರ ಮೂಲತಃ ಚೆನ್ನಪ್ಪ ಪೂಜಾರಿ ಮತ್ತು ಜಾನಕಿ ಪೂಜಾರಿ ದಂಪತಿ ಸುಪುತ್ರರಾದ ಲಕ್ಷ್ಮಣ್ ಪೂಜಾರಿ ಓರ್ವ ಸರಳ ಸಜ್ಜನಿಕೆಯ ಅನುಭವೀ ರಾಜರಣಿ ಆಗಿರುವ ಇವರು ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿಸಿ ಕೊಂಡಿರುವರು. ಮೂಲತಃ ಕಾಂಗ್ರೇಸ್ ಪಕ್ಷದಲ್ಲಿದ್ದು 1997ರ ಬಿಎಂಸಿ ಚುನಾವಣೆಯಲ್ಲಿ ನಗರ ಸೇವಕ ಸ್ಥಾನಕ್ಕೆ ಅಭ್ಯಥಿರ್ü ಆಗಿದ್ದರು. ಮಾಡಾ ಸದಸ್ಯರಾಗಿ, ಪಶ್ಚಿಮ ಪ್ರಾದೇಶಿಕ ರೈಲ್ವೇ ಮಂಡಳಿ ಸದಸ್ಯರಾಗಿ, ಚಿತ್ರಾಪು ಬಿಲ್ಲವ ಸಂಘ (ರಿ.) ಇದರ ಮಾಜಿ ಅಧ್ಯಕ್ಷರಾಗಿ, ಮೂಲ್ಕಿ ಬಿಲ್ಲವ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ, ಸಾಂತಕ್ರೂಜ್ ಪೂರ್ವದ ಗುರುನಾರಾಯಣ ಮಾರ್ಗದ ನಾಮಕಾರಣಕ್ಕೂ, ಬಿಲ್ಲವರ ಭವನದ ನಿರ್ಮಾಣಕ್ಕೂ ತನ್ನ ಯೋಗದಾನ ನೀಡಿರುವರು.

