ಹೈದರಾಬಾದ್: ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಹಾಗೂ ಅಮಲಾ ದಂಪತಿಯ ಪುತ್ರ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ ಶ್ರಿಯಾ ಭೂಪಾಲ್ ರವರ ಜೊತೆ ನಿನ್ನೆ ಹೈದರಾಬಾದ್ ನ ಜಿವಿಕೆ ಹೌಸ್ ನಲ್ಲಿ ಧಾಂ ಧೂಂ ಆಗಿ ನಡೆಯಿತು. ಅಕ್ಕಿನೇನಿ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಆಪ್ತರು ಮಾತ್ರ ಹಾಜರಿದ್ದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಶ್ರಿಯಾ ಭೂಪಾಲ್ ಗೆ ಅಖಿಲ್ ಅಕ್ಕಿನೇನಿ ಉಂಗುರ ತೊಡಿಸಿದರು.
ಅಖಿಲ್-ಶ್ರಿಯಾ ಲವ್ ಸ್ಟೋರಿ..
ಫ್ಯಾಶನ್ ಡಿಸೈನರ್ ಆಗಿರುವ ಶ್ರಿಯಾ ಭೂಪಾಲ್ ರವರನ್ನ ಕಾರ್ಯಕ್ರಮವೊಂದರಲ್ಲಿ ಪರಿಚಯ ಮಾಡಿಕೊಂಡ ಬಳಿಕ ಅಖಿಲ್ ಅಕ್ಕಿನೇನಿ ಹೃದಯದಲ್ಲಿ ಪ್ರೀತಿಯ ಮೊಳಕೆಯೊಡೆದಿದೆ. ಮೀಟಿಂಗ್, ಡೇಟಿಂಗ್ ಆದ ಬಳಿಕ ಇಬ್ಬರ ಪ್ರೇಮ ಪುರಾಣ ಮನೆಯವರಿಗೆ ಗೊತ್ತಾಗಿದೆ. ಹಿರಿಯರ ಸಮ್ಮತಿ ಪಡೆದು ಮನದನ್ನೆ ಶ್ರಿಯಾ ಭೂಪಾಲ್ ಜೊತೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ ಮಾಡಿಕೊಂಡರು. [ನಾಗಾರ್ಜುನ ಕುಟುಂಬದಲ್ಲಿ ಬರುವ ವರ್ಷ ಮದುವೆ]

ಶುಭ ಹಾರೈಸಿದ ಶಿವಣ್ಣ:
ಅಕ್ಕಿನೇನಿ ನಾಗಾರ್ಜುನ ಪುತ್ರನ ಎಂಗೇಜ್ಮೆಂಟ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಭಾಗವಹಿಸಿ ಶುಭ ಹಾರೈಸಿದರು.

ನಾಗ ಚೈತನ್ಯ ಹಾಗೂ ಸಮಂತಾ ಮದುವೆಯಾಗುತ್ತಾರೆ ಎಂಬ ಗುಸು ಗುಸು ಟಾಲಿವುಡ್ ನಲ್ಲಿ ಹೊಸದೇನಲ್ಲ. ಸಮಂತಾ-ನಾಗ ಚೈತನ್ಯ ಪ್ರೀತಿಗೂ ತಂದೆ ನಾಗಾರ್ಜುನ ಒಪ್ಪಿಗೆ ಸೂಚಿಸಿದ್ದಾಗಿದೆ. ಮುಂದಿನ ವರ್ಷ ಈ ಜೋಡಿ ಕೂಡ ಹಸೆಮಣೆ ಏರಲಿದೆ. ಹೀಗಾಗಿ ಬಿಂಕ ಇಲ್ಲದ ಅಖಿಲ್ ಎಂಗೇಜ್ಮೆಂಟ್ ನಲ್ಲಿ ಸಮಂತಾ ಕೂಡ ಭಾಗವಹಿಸಿದರು. [ನಾಗ್ ಚೈತನ್ಯ ಮದುವೆ ಆಗಲು ಮತಾಂತರಗೊಂಡರೇ ನಟಿ ಸಮಂತಾ?]


