ಮುಂಬಯಿ: ಇತ್ತೀಚೆಗೆ ದೈವಾಧೀನರಾದ ಮುಂಬಯಿ ಮಹಾನಗರದ ಹೆಸರಾಂತ ಸಮಾಜ ಸೇವಕ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಅಸೋಸಿಯೇಶನ್‍ನ ಮುಖವಾಣಿ `ಅಕ್ಷಯ’ ಮಾಸಿಕದ ರೂವಾರಿ, ಭಾರತ್ ಬ್ಯಾಂಕ್‍ನ ಮಾಜಿ ಉಪ ಕಾರ್ಯಾಧ್ಯಕ್ಷ ನಾರಾಯಣ ಎಲ್.ಸುವರ್ಣ (ಎನ್‍ಎಲ್) ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್ ಮತ್ತು ಬಿಲ್ಲವ ಜಾಗೃತಿ ಬಳಗ ಇವುಗಳ ಕೂಡುವಿಕೆಯಲ್ಲಿ ಇಂದಿಲ್ಲಿ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಭೆಯಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ (ಬಳಗದ ಅಧ್ಯಕ್ಷ), ಎನ್‍ಎಲ್ ಸುಪುತ್ರಿಯರಾದ ರೀನಾ ಸಿ.ಬಂಗೇರಾ, ದಿವ್ಯಾ ಜೆ.ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು ನಾರಾಯಣ ಎಲ್.ಸುವರ್ಣ ಭಾವಚಿತ್ರಕ್ಕೆ ಪುಷ್ಫಾಂಜಲಿಗೈದು ಅಗಲಿದ ಮಹಾನ್ ಚೇತನಕ್ಕೆ ಭಾಷ್ಪಾಂಜಲಿ ಕೋರಿ ಸಂತಾಪ ಸಭೆಗೆ ಚಾಲನೆಯನ್ನೀಡಿದರು.

ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಕೆ.ಅಲೆವೂರು ಮಾತನಾಡಿ ಮುಖವಾಣಿ ಕನಸು ಕಂಡು ಸಕಾರಗೊಳಿಸಿದ ಕೀರ್ತಿ ಎನ್.ಎಲ್ ಸುವರ್ಣ ಅವರಿಗೆ ಸಲ್ಲುತ್ತದೆ. ಬಿಲ್ಲವರ ಸಂಪರ್ಕ ಸೇತುವೆಯಾಗಿ ಅಕ್ಷಯವನ್ನು ಬೆಳೆಸಿದ ಎನ್‍ಎಲ್ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಾಳಿದವರು. ಬಿಲ್ಲವರಲ್ಲಿನ ಏಕತೆಗಾಗಿ ವಿಶ್ವಾಸ ಮೂಡಿಸಿ ಸದ್ಯ ಮರೆಯಾದ ಅವರ ದಿವ್ಯಾತ್ಮಕ್ಕೆ ಅಕ್ಷಯ ಬಳಗದಿಂದ ಶ್ರದ್ಧಾಂಜಲಿ ಕೋರುತ್ತೇನೆ ಎಂದರು.
ಜಯ ಸುವರ್ಣರು ಮಾತನಾಡಿ ನಮ್ಮದು ನಾಲ್ಕು ದಶಕಗಳ ಅವಿನಾಭಾವ ಸಂಬಂಧ. ಪ್ರಾಮಾಣಿಕ, ನಿಸ್ವಾರ್ಥ ಸೇವೆಗೆ ಬದ್ಧರಾಗಿ ಬಾಳಿದ ಅವರು ಅಕ್ಷಯ ಪತ್ರಿಕೆಗಾಗಿ 8 ಲಕ್ಷ ರೂಪಾಯಿ ಒಗ್ಗೂಡಿಸಿ ಪತ್ರಿಕೆಯನ್ನು ಉನ್ನತಿಯತ್ತ ಒಯ್ದಿರುವರು. ಅವರ ಸದ್ಗುಣಗಳು ನಮಗೆ ಸದಾ ಅನುಕರಣೀಯರಾಗಿದ್ದು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದರು.

ಎನ್.ಟಿ ಪೂಜಾರಿ ನುಡಿನಮನ ಸಲ್ಲಿಸಿ ಬಿಲ್ಲವ ಸಮಾಜದ ಧೀಶಕ್ತಿ ಕಳೆದ ನೋವು ನಮಗಿದೆ. ಅವರಲ್ಲಿನ ಏಕತಾ ಮನೋಭಾವ ಇಂದು ಕೂಡಿ ಬಂದಿದ್ದೂ ಈ ವೇದಿಕೆ ಸಾಕ್ಷಿಯಾಗಿದೆ. ಆ ಮೂಲಕ ಅವರ ಚಿಂತನೆ ಫಲಿಸಿದತಾಗಿದೆ. ಇದೇ ಅವರಿಗೆ ಸಲ್ಲುವ ಸದ್ಗತಿ ಆಗಿದೆ ಎಂದರು.
ಎನ್‍ಎಲ್ ಅವರು ತೀರಾ ಛಲವಾದಿ ಆಗಿದ್ದು ಜವಾಬ್ದಾರಿಯುತ ವ್ಯಕ್ತಿತ್ವವನ್ನು ಮೈಗೂಡಿಸಿದ್ದರು. ಸುದೀರ್ಘವಧಿ ಸೇವಾವದಿಯುದ್ದಕ್ಕೂ ಅತೀವ ಸೇವಾ ಕಳಕಳಿ ಹೊಂದಿದ ವ್ಯಕ್ತಿತ್ವ ಅವರದ್ದಾಗಿತ್ತು. ಹಿರಿಕಿರಿಯರಲ್ಲಿ ಅನನ್ಯ ಸಂಬಂಧ ಬೆಳೆಸಿಕೊಂಡಿದ್ದ ಅವರು ಎಲ್ಲರಿಗೂ ಪ್ರೇರಕ ಶಕ್ತಿ ಆಗಿದ್ದಾರೆ. ಸ್ವರ್ಗಿಯ ಎನ್‍ಎಲ್ ದಿವ್ಯಾತ್ಮಕ್ಕೆ ಸಮಗ್ರ ಬಿಲ್ಲವರ ಪರವಾಗಿ ಚಿರಶಾಂತಿ ಕೋರುತ್ತೇನೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.
ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಎನ್.ಎಂ ಸನೀಲ್, ಜಯಕರ ಡಿ.ಪೂಜಾರಿ, ಬಳಗದ ಉಪಾಧ್ಯಕ್ಷರುಗಳಾದ ಡಿ.ಬಿ ಅವಿೂನ್ ಮತ್ತು ಪುರುಷೋತ್ತಮ ಎಸ್.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಕೇಶವ ಕೆ.ಕೋಟ್ಯಾನ್, ಚಿತ್ರಾಪು ಕೆ.ಎಂ ಕೋಟ್ಯಾನ್, ಹರೀಶ್ ಜಿ.ಪೂಜಾರಿ, ಜಿ.ಎಂ ಕೋಟ್ಯಾನ್ ಸಂದರ್ಭೋಚಿತವಾಗಿ ಮಾತನಾಡಿ ಎನ್‍ಎಲ್ ಸೇವಾಗುಣ, ಸಾಮಾಜಿಕ ಕೊಡುಗೆಗಳು ಮತ್ತು ಜೀವನ ವೈಖರಿ ನೆನಪಿಸಿ, ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಸಭೆಯಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷ ರಾಜಾ ವಿ.ಸಾಲ್ಯಾನ್, ಡಾ| ಧನಂಜಯ ಯು.ಕುಮಾರ್, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಜೆ.ಪೂಜಾರಿ, ಉಪ ಪ್ರಧಾನ ಪ್ರಬಂಧಕರುಗಳಾದ ಮೋಹನ್‍ದಾಸ್ ಹೆಜ್ಮಾಡಿ, ವಾಸುದೇವ ಎಂ.ಸಾಲ್ಯಾನ್, ಸುರೇಶ್ ಎಸ್.ಸಾಲ್ಯಾನ್, ವಿಶ್ವನಾಥ ಜಿ.ಸುವರ್ಣ,ಪ್ರಭಾಕರ ಜಿ.ಸುವರ್ಣ, ಪ್ರಧಾನ ಪ್ರಬಂಧಕರುಗಳಾದ ವಿದ್ಯಾನಂದ ಎಸ್.ಕರ್ಕೇರ, ದಿನೇಶ್ ಬಿ.ಸಾಲ್ಯಾನ್, ನವೀನ್‍ಚಂದ್ರ ಎಸ್.ಬಂಗೇರಾ, ಅಸೋಸಿಯೇಶನ್‍ನ ಸಿ.ಟಿ.ಸಾಲ್ಯಾನ್, ಶ್ರೀನಿವಾಸ ಆರ್. ಕರ್ಕೇರಾ, ಪ್ರಬಂಧಕ ಭಾಸ್ಕರ ಟಿ.ಪೂಜಾರಿ, ಉಳ್ಳೂರು ಶೇಖರ ಶಾಂತಿ, ಜೆ.ಎಂ ಕೋಟ್ಯಾನ್, ಅಕ್ಷಯ ಮಾಸಿಕದ ಉಪ ಸಂಪಾದಕ ಹರೀಶ್ ಹೆಜ್ಮಾಡಿ, ಸತೀಶ್ ಎನ್.ಬಂಗೇರಾ ಮತ್ತಿತರರು ಉಪಸ್ಥಿತರಿದ್ದು ಬಾಷ್ಪಾಂಜಲಿ ಕೋರಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸಭಾ ಕಲಾಪ ನಡೆಸಿದರು.
ಚಿತ್ರ / ವರದಿ : ರೋನ್ಸ್ ಬಂಟ್ವಾಳ್
