ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಇದರ ಮುಖವಾಣಿ `ಗೋಕುಲವಾಣಿ’ ಇದರ ವಾರ್ಷಿಕ ಕಥಾ ಸ್ಪರ್ಧೆಗೆ ಈ ಹಿಂದೆ ಅಕ್ಟೋಬರ್ 15, 2016ರ ಗಡುವು ನೀಡಿ ಕಥೆಗಳನ್ನು ಆಹ್ವಾನಿಸಲಾಗಿತ್ತು. ಆದರೆ ಸ್ಪರ್ಧೆಗೆ ಸಾಕಷ್ಟು ಸಂಖ್ಯೆಯಲ್ಲಿ ಕಥೆಗಳು ಬಾರದ ಕಾರಣ ಸ್ಪರ್ಧೆಯನ್ನು ಮುಂದೂಡಲಾಗಿದೆ. ಸದ್ಯ ಬಂದ ಕಥೆಗಳನ್ನೊಳಗೊಂಡಂತೆ ಎಪ್ರಿಲ್.2017ರ ಸಂಚಿಕೆಯನ್ನು ಯುಗಾದಿ ವಿಶೇಷ ಸಂಚಿಕೆಯಾಗಿ ಹೊರತರುತ್ತಿದೆ.
ಈ ನಿಮಿತ್ತ `ಅಖಿಲ ಭಾರತ ಕನ್ನಡ ಕಥಾ ಸ್ಪರ್ಧೆ’ ಆಯೋಜಿಸಿದ್ದು ಪ್ರಥಮ (ರೂ. 7000/-) ದ್ವಿತೀಯ (ರೂ. 5000/-) ಹಾಗೂ ತೃತೀಯ (ರೂ.3000/- ಬಹುಮಾನಗಳನ್ನು ಅರ್ಹ ಕಥೆಗಳಿಗೆ ನೀಡಲಾಗುತ್ತದೆ. ನಿರ್ಣಾಯಕರು ನಿಶ್ಚಯಿಸಿದಲ್ಲಿ ರೂ. 1,000/- ಮೊತ್ತದ ಎರಡು ಪ್ರೋತ್ಸಾಹಕ ಬಹುಮಾನಗಳನ್ನು ಕೊಡಲಾಗುವುದು.
`ಗೋಕುಲ’ ಸಾಯನ್, ಮುಂಬಯಿಯ ಮಾಸಿಕ ಸ್ಪರ್ಧೆಯ ನಿಯಮಗಳನ್ನು ಈ ಹಿಂದೆ ತಿಳಿಸಲಾಗಿದೆ ಹಾಗೂ ಗೋಕುಲವಾಣಿಯಲ್ಲಿ ನೀಡಲಾಗಿದೆ. *ಕಥೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 10, ಫೆಬ್ರವರಿ 2017. *
ಕಥೆಯನ್ನು ದಯವಿಟ್ಟು ಕೆಳಗಿನ ವಿಳಾಸಕ್ಕೆ ಕಳುಹಿಸಿ:
Editor, Gokulavani, Kannada Monthly,
BSKB Association, Plot No. 273,
Gokul Marg, Sion(E) Mumbai 400 022.
Email: gokulavani@bskba.com
ವಿಜೇತರಿಗೆ ಪತ್ರ ಮುಖೇನ ಅಥವಾ `ಗೋಕುಲವಾಣಿ’ ಹಾಗೂ ಇತರ ಪತ್ರಿಕೆಗಳಲ್ಲಿ ಸ್ಪರ್ಧಾ ಫಲಿತಾಂಶ ಪ್ರಕಟಿಸಲಾಗುವುದು.

