ಕಾಸರಗೋಡು: ಮಲ್ಲಪುರ ಜಿಲ್ಲೆಯಲ್ಲಿ ಸರ್ವ ಧರ್ಮದವರೆಗೆ ಪ್ರೀತಿಪಾತ್ರರಾದವರು ಪಝಮಳ್ಳೂರ್ ಕುಂಞಕೋಯ ತಂಙಳ್ ಎಂದು ಅಲಿ ಅಹ್ಸನಿ ಕಾರೆಕಾಡ್ ಅಭಿಪ್ರಾಪಟ್ಟರು.
ಅವರು ಕಾಸರಗೋಡು ಜಿಲ್ಲೆಯ ಬಾಯರ್ ಮುಜಮ್ಮುಹ್ ಸಖಾಫತ್ ಸುನ್ನಿಯ್ಯಾದ ಶಿಲ್ಪಿ ಸಯ್ಯದ್ ಅಬುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್-ಬುಖಾರಿ ಬಾಯರ್‍ರ ತೀರ್ಥರೂಪರಾದ ಪಝಮಳ್ಳೂರ್ ಕುಂಞಕೋಯ ತಂಙಳ್‍ರವರ ಆಂಡ್ ನೇರ್ಚೆ ಪ್ರಯುಕ್ತ ಬಾಯರ್ ಮುಜಮ್ಮಹ್ ಸಖಾಫತ್‍ಸುನ್ನಿಯ್ಯಾದ ವಠಾರದಲ್ಲಿ ನಡೆದ ಅನುಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಝಮಳ್ಳೂರ್ ಕುಂಞಕೋಯ ತಂಙಳ್‍ರವರು ವಿಶೇಷ ಪವಾಡದಿಂದ ಮಲ್ಲಪುರಂ ಜಿಲ್ಲೆಯಲ್ಲಿ ಪ್ರಸಿದ್ಧಿಪಡೆದು ರೋಗ ರುಜಿನಗಳಿಗೆ ಪರಿಹಾರ ನೀಡುತ್ತಿದ್ದರು.
ಮಾಣಿ ದಾರುಲ್ ಇರ್ಷಾದ್ ವಿದ್ಯಾಸಂಸ್ಥೆಯ ಶಿಲ್ಫಿ ಹಮೀದ್ ಮುಸ್ಲಿಯಾರ್ ಮಾತನಾಡಿ, ಜಗತ್ತಿನಲ್ಲಿ ಜನಿಸಿದ ಎಲ್ಲ ಜೀವಿಗಳು ಮರಣಹೊಂದುತ್ತದೆ. ಅಗೆ ಮನುಷ್ಯರಾದ ನಾವು ಮರಣಹೊಂದಲ್ಲಿದೆವೆ. ಮರಣ ಕಡ್ಡಾಯ ಅದರೆ ನಮ್ಮ ಜೀವನ ಕಾಲದಲ್ಲಿ ನಾವು ಎನು ಮಾಡಿದೆವೆ ಎಂಬುದು ಮುಖ್ಯ ಎಂದು ಹೇಳಿದರು.

ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಮತ್ತು ಸಯ್ಯದ್ ಮುಹ್‍ಸೀನ್ ಅಲವಿಕೋಯ ತಂಙಳ್ ನೇತೃತ್ವದಲ್ಲಿ ಖತಮುಲ್ ಕುರುಅನ್, ತಹ್ಲೀಲ್ ಬುರ್ದಾ, ಮೌಲಿದ್, ಕೂಟು ಪ್ರಾರ್ಥನೆ ನಡೆಯಿತು.
ಈ ಸಂದರ್ಭ ಡಿ, 12ರಂದು ಬಾಯರ್ ಮುಜ್ಮಹದಲ್ಲಿ ನಡೆಯುವ ಜಲ್ಸೇ ವೀಲಾದ್ ಕಾರ್ಯಕ್ರಮ ನೋಟಿಸ್ ಬಿಡುಗಡ್ಡೆಗೋಳಿಸಲಾಯಿತು.

ಬಿ.ಎಸ್ ಅಬ್ದುಲ್ಲ ಕುಂಞ ಪೈಝಿ, ಮೂಸ ಸಖಾಫಿ ಕಲ್ಲತ್ತೂರು, ಮಂಜನಾಡಿ ಅಲ್-ಮದೀನಾದ ಅಬ್ಬಾಸ್ ಉಸ್ತಾದ್, ಎಸ್‍ವೈಎಸ್ ಮುಖಂಡ ಕೆ.ಸಿರೋಡು ಸಹದಿ, ಸುನ್ನಿ ಪೈಝಿ, ಸಿ.ಅಬ್ದುಲ್ಲ ಮುಸ್ಲಿಯಾರ್ ಉಪ್ಪಳ, ಅಬ್ದುಲ್ ಖಾದರ್ ಸಖಾಫಿ ಕಾಟಿಪರ, ಉಮರ್ ಸಖಾಫಿ, ಅಬ್ದುಲ್ ಖಾದರ್ ಮೊಗ್ರಲ್, ಶಾಕೀರ್ ಬಾಖವಿ ಮಂಬಾಡ್, ಯ್ಯಾಹ ನಹೀಮಿ, ಶಾಝಾನ್ ಸಖಾಫಿ ವಾಯಿಕಡವು ಮುಂತಾದವರು ಈ ಸಂದರ್ಭ ಉಪಸ್ಥಿತರಿದರು. ಸಂಸ್ಥೆಯ ಮ್ಯಾನೇಜರ್ ಸಿದ್ದೀಕ್ ಸಖಾಫಿ ಬಾಯರ್ ಸ್ವಾಗತಿಸಿ. ಪೊಯ್ಯತ್ತಬೈಲ್ ಮುದರ್ರಿಸ್ ಅಬ್ದುಲ್ ಜಬ್ಬಾರ್ ಸಖಾಫಿ ವಂದಿಸಿದರು.


