ಬಂಟ್ವಾಳ: ತಾಲೂಕು ವಾಮದಪದವು ವ್ಯ.ಸೇ.ಸ.ಸಂಘದ ನೂತನ ಅಧ್ಯಕ್ಷರಾಗಿ ಬಿ.ಯಶೋಧರ ಶೆಟ್ಟಿ ಅವರು ಮುಂದಿನ ವರ್ಷದ ಅವಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.
ಹಾಲಿ ಅಧ್ಯಕ್ಷ ತಿಮ್ಮಪ್ಪ ರೈ ಅವರು ನಿಧನ ಹೊಂದಿರುವುದರಿಂದ ತೆರವಾದ ಸ್ಥಾನಕ್ಕೆ ಬಿ.ಯಶೋಧರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಪ್ರಸ್ತುತ ಉಪಾಧ್ಯಕ್ಷರಾಗಿದ್ದರು.
ಸಹಕಾರ ಸಂಘಗಳ ಅಭಿವೃದ್ಧಿ ಅಕಾರಿ ಬಿ. ಜನಾರ್ಧನ ಅವರು ಚುನಾವಣಾಕಾರಿಯಾಗಿ ಚುನಾವಣೆಯನ್ನು ಜರಗಿಸಿದರು. ಈ ಸಭೆಯಲ್ಲಿ ಆಡಳಿತ ಮಂಡಳಿ ನಿರ್ಧೇಶಕರುಗಳು, ವಲಯ ಮೇಲ್ವಿಚಾರಕರು ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಕಾರಿ ಉಪಸ್ಥಿತರಿದ್ದರು.

