ಬಂಟ್ವಾಳ :ತಾಲೂಕು ಪಿಲಾತಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಸುಮಾರು 20 ವರ್ಷಗಳಿಂದ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿ ಇದೀಗ ಮಾಲಾಡಿ ಗ್ರಾಮ ಪಂಚಾಯತ್ಗೆ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ ಯಶೋಧರ ಶೆಟ್ಟಿ ಅವರಿಗೆ ಗ್ರಾ.ಪಂ.ಹಾಗೂ ಊರ ನಾಗರಿಕರ ವತಿಯಿಂದ ಬೀಳ್ಕೊಡುಗೆ ಹಾಗೂ ಸಮ್ಮಾನ ಕಾರ್ಯಕ್ರಮ ಪುಂಜಾಲಕಟ್ಟೆಯ ನಂದಗೋಕುಲ ಸಭಾಂಗಣದಲ್ಲಿ ಜೂ.28 ರಂದು ಸಂಜೆ ಜರಗಿತು.

6
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರಕಾರದ ಕೆಲಸ ದೇವರ ಕೆಲಸ ಎಂಬಂತೆ ಪ್ರಾಮಾಣಿಕತೆ,ಶ್ರದ್ಧೆಯಿಂದ ತನ್ನ ಕಾರ್ಯ ನಿರ್ವಹಿಸಿ ಗ್ರಾಮಸ್ಥರ ಮೆಚ್ಚುಗೆ,ಪ್ರೀತಿಗೆ ಕಾರಣರಾದ ಯಶೋಧರ ಶೆಟ್ಟಿ ಅವರು ಅಭಿನಂದನೀಯರು.ಯಾವುದೇ ಆಮೀಷಕ್ಕೆ ಒಳಗಾಗದೆ ಸಹನೆ,ಮಾನವೀಯತೆಯ ಸೇವಾ ಕೈಂಕರ್ಯ ಅವರ ಹಾಗೂ ಸಮಾಜದ ಉನ್ನತಿಗೆ ಸಹಕಾರಿಯಾಗಿದೆ ಎಂದು ಹೇಳಿದರು.ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಹಾಪ್ಕಾಮ್ಸ್ ಉಪಾಧ್ಯಕ್ಷ ಕೆ.ಲಕ್ಷೀ ನಾರಾಯಣ ಉಡುಪ,ಪಿಲಾತಬೆಟ್ಟು ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಸುಂದರ ನಾಯ್ಕ,ತಾ.ಪಂ.ಸದಸ್ಯ ವಿನಯ ನಾಯಕ್,ಪಂ.ಅ.ಅಕಾರಿ ಧರ್ಮಪಾಲ ಪೂಜಾರಿ ಅವರು ಶುಭ ಹಾರೈಸಿದರು.ಗ್ರಾ.ಪಂ.ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್,ಗ್ರಾ.ಪಂ.ಸದಸ್ಯರು,ಸಿಬಂದಿ ವರ್ಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಶೋಧರ ಶೆಟ್ಟಿ ಅವರನ್ನು ಗ್ರಾ.ಪಂ.ಹಾಗೂ ಊರ ನಾಗರಿಕರ ವತಿಯಿಂದ ಸಮ್ಮಾನಿಸಲಾಯಿತು.
ಗ್ರಾ.ಪಂ.ಸದಸ್ಯ ಶಂಕರ ಶೆಟ್ಟಿ ಬೆದ್ರಮಾರ್ ಅವರು ಸ್ವಾಗತಿಸಿದರು.ಭರತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *