ಬಂಟ್ವಾಳ: ಅಭಿವೃದ್ದಿಯಲ್ಲಿ ವಿಳಂಬವನ್ನು ಹೋಗಲಾಡಿಸಲು, ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಜನಸ್ವೇಹಿ ಯೋಜನೆ ಪರಿಪೂರ್ಣಗೊಳ್ಳಲು ಅಧಿಕಾರಿಗಳು ಉತ್ತಮವಾಗಿ ಕೆಲಸಮಾಡಬೇಕಾಗಿದೆ ಎಂದು ಜಿ.ಪಂ.ಸದಸ್ಯೆ ನಳಿನಿ ಶೆಟ್ಟಿ ಹೇಳಿದರು . ಅವರು ಜಿ.ಪಂ. ಗ್ರಾಮ ಪಂಚಾಯತ್ ಜನಸ್ನೇಹಿ ವಿನೂತನ ಕಾರ್ಯಕ್ರಮವನ್ನು ಸಂಗಬೆಟ್ಟು ಗ್ರಾ.ಪಂ. ನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

1ಸಾರ್ವಜನಿಕರ ಸಮಸ್ಯೆಯ ಮನವಿಗಳನ್ನು ಕ್ಲಪ್ತ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡುವತ್ತ ಗಮನ ಹರಿಸಬೇಕಾಗಿದೆ ಎಂದರು. ಉದಾಶೀನ ಬಿಟ್ಟು ಕೆಲಸ ಮಾಡಿ ಎಂದರು. ಇದೇ ಸಂದರ್ಭ ರಿಕ್ಷಾ ಪಾಕರ್ಿಂಗ್ ನಲ್ಲಿ ತೊಂದರೆ ಅಗುವ ಮರವನ್ನು ಕಡಿಯುವ ಬಗ್ಗೆ ಮತ್ತು ಈಗಾಗಲೇ ರಸ್ತೆ ಬದಿಯಲ್ಲಿ ಕಡಿದು ಹಾಕಲಾಗಿರುವ ಮರವನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಸುಶೀಲಾ, ರಾಯಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ, ಸದಸ್ಯರಾದ ಪ್ರಭಾಕರ ಪ್ರಭು, ಮಾದವ ಶೆಟ್ಟಿಗಾರ್, ಶ್ರೀದರ್ ಎಸ್.ಪಿ. ಬೆನೆಡಿಕ್ಟ್ ಡಿ.ಕೋಸ್ತ, ಗ್ರಾಮಕರಣಿಕ ಶಿವಾನಂದ ಉಪಸ್ಥಿತರಿದ್ದರು. ಪಿ.ಡಿ.ಒ ಪದ್ಮನಾಭ ಸಾಲಿಯಾನ್ ಸ್ವಾಗತಿಸಿ ವಂದಿಸಿದರು

By suddi9

Leave a Reply

Your email address will not be published. Required fields are marked *