ಸುದ್ದಿ9 ಕೈಕಂಬ: ಇತ್ತೀಚೆಗೆ ಎಡಪದವು-ಕುಪ್ಪೆಪದವು- ಕೈಕಂಬ ಪರಿಸರದಲ್ಲಿ ಜೋಡಿ ಪತ್ತೆ ಪ್ರಕರಣ ಹೆಚ್ಚುತ್ತಿದ್ದು ಭಾರೀ ಆತಂಕದ ಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಎಡಪದವಿನಲ್ಲಿ ಜೋಡಿಯೊಂದು ಪತ್ತೆಯಾಗಿದ್ದು ಸ್ಥಳೀಯರೇ ಸೇರಿಕೊಂಡು ಮನೆಗೆ ಸೇರಿಸಿದ ಘಟನೆ ನಡೆದಿದ್ದು ಇದೆಲ್ಲಾ ಒಬ್ಬರಿಂದೊಬ್ಬರಿಗೆ ವಾಟ್ಸ್ಆಪ್ ಮೂಲಕ ಹರಿದಾಡುತ್ತಾ ಸುದ್ದಿ ಮಾಡುತ್ತಿದೆ.

kup2

kup1
ಕೆಲದಿನಗಳ ಹಿಂದೆ ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯನ್ನು ಬೈಕ್ನಲ್ಲಿ ಕರೆದುಕೊಂಡು ಎಂಜಾಯ್ ಮಾಡುತ್ತಿದ್ದ. ಇದು ಸ್ಥಳೀಯರ ಗಮನಕ್ಕೆ ಬಂದಿದ್ದು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇವರಿಬ್ಬರ ಅಸಲಿ ಜಾತಕ ಬಯಲಾಗಿತ್ತು. ಇಬ್ಬರಿಗೂ ಸಾಕಷ್ಟು ಬುದ್ಧಿವಾದ  ಹೇಳಿ ಯುವತಿಯನ್ನು ಮನೆಗೆ ಕರೆದೊಯ್ದು ಬಿಟ್ಟಿದ್ದರು.
ಹಾಗೆ ನೋಡಿದರೆ ಈ ಪರಿಸರದಲ್ಲಿ ಜೋಡಿ ಪತ್ತೆ ಪ್ರಕರಣ ನಡೆಯುತ್ತಲೇ ಇದ್ದು, ಸಿಕ್ಕಿಬೀಳುವ ಪ್ರಮೇಯವೂ ಹೆಚ್ಚುತ್ತಿದೆ. ಕೆಲವೊಂದು ಪ್ರಕರಣಗಳು ಪೊಲೀಸ್ ಮೆಟ್ಟಿಲೇರಿದ್ದರೂ, ಇದರ ಅಸಲಿಯತ್ ಬಗ್ಗೆ ಕಂಡುಹಿಡಿಯಲು ಪೊಲೀಸರು ಕ್ರಮಕೈಗೊಳ್ಳಲಿಲ್ಲ.
ಕೆಲದಿನಗಳ ಹಿಂದೆ ಮೂಡಬಿದ್ರೆ ಸಮೀಪದ ಮೂರು ಅನ್ಯ ಕೋಮಿನ ಯುವಕರೊಂದಿಗೆ ಇಬ್ಬರು ಯುವತಿಯರು ಪತ್ತೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಸ್ವಲ್ಪ ದಿನ  ಮುಂಚೆ ಕುಪ್ಪೆಪದವಿನಲ್ಲಿ ಯುವತಿಯೋರ್ವಳು ಅನ್ಯಕೋಮಿನ ಯುವಕನೊಂದಿಗೆ ರಿಕ್ಷಾದಲ್ಲಿ ಸುತ್ತಾಡುತ್ತಿದ್ದಾಗ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದರು. ಕುಪ್ಪೆಪದವಿನಲ್ಲಿ ಭಾರೀ ನಿರ್ಜನ ಗುಡ್ಡೆಯೊಂದಿದ್ದು ಇದು ಅನೈತಿಕತೆಯ ಕೇಂದ್ರ ಬಿಂದು ಎನ್ನಲಾಗುತ್ತಿದೆ.
ಇದನ್ನೆಲ್ಲಾ ಗಮನಿಸಿದಾಗ ಜೋಡಿ ಪತ್ತೆಯ ಹಿಂದೆ ಸೆಕ್ಸ್ ಮಾಫಿಯಾದ ಕರಾಳ ಛಾಯೆ ಆವರಿಸಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ಘಟನೆಯಿಂದ ಯುವಕ- ಯುವತಿಯರ ಬಗ್ಗೆ ಹೆತ್ತವರಿಗೆ ನಂಬಿಕೆ ಕರಗುವಂತೆ ಮಾಡಿದೆ. ಅಲ್ಲದೆ ಇಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಜೋಡಿ ಪತ್ತೆಯಾಗುತ್ತಿದ್ದು, ಮಂಗಳೂರಿನ ಲಾಡ್ಜ್ಗಳಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ

By suddi9

Leave a Reply

Your email address will not be published. Required fields are marked *