ಬಜಪೆ: ಯಕ್ಷಮಿತ್ರ ಪೊರ್ಕೋಡಿ ಪೇಜಾವರ ಸಂಸ್ಥೆಯ ವತಿಯಿಂದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಸಂಸ್ಥೆಯ ಗುರುಗಳಾದ ಶ್ರೀ ಲಕ್ಷಣ್ ಕುಮಾರ್ ಮರಕಡ ಇವರ 25ನೇ ವರ್ಷದ ಯಕ್ಷ ಕಲಾ ಬದುಕಿನ ನೆನಪಿಗಾಗಿ ನ. 6ರಂದು ಭಾನುವಾರ ಬೆಳಿಗ್ಗೆ 10.30 ರಿಂದ ರಾತ್ರಿ 11.30ರವರೆಗೆ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ “ಶ್ರೀ ಲಕ್ಷ್ಮಣಾಭಿನಂದಮ್” ಕಾರ್ಯಕ್ರಮ ಜರಗಲಿದೆ.

yakshagana

ಬೆಳಿಗ್ಗೆ 10.30ರಿಂದ 12.55ರವರೆಗೆ “ಕ್ರೇಜಿ ಗಾಯ್ಸ್” ಡ್ಯಾನ್ಸ್ ಗ್ರೂಪ್ ಕಿನ್ನಿಗೋಳಿ ಇವರಿಂದ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 1ರಿಂದ 3ರವರೆಗೆ “ ಯಕ್ಷ ಗಾನ ಪ್ರಸ್ತುತಿ” ಸಂಜೆ 4ರಿಂದ 7ರವರೆಗೆ ಶ್ರೀ ಲಕ್ಷಣ್ ಕುಮಾರ್ ಮರಕಡ ಇವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ “ಶ್ರೀಕೃಷ್ಣ ಜನ್ಮ- ಶ್ರೀಕೃಷ್ಣಲೀಲೆ-ಕಂಸವಧೆ” ಎಂಬ ಯಕ್ಷಗಾನ ಹಾಗೂ ಸಂಜೆ 7ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ” ಗಜೇಂದ್ರ ಮೋಕ್ಷ-ರಕ್ತರಾತ್ರಿ” ಯಕ್ಷಗಾನ ಜರುಗಲಿದೆ.

By suddi9

Leave a Reply

Your email address will not be published. Required fields are marked *