ಬಜಪೆ: ಉಡುಪಿ ಜಿಲ್ಲೆಯ ಕೋಟಾದಲ್ಲಿ ಸೆ.25 ರಂದು ನಡೆದ ಹೊಳಪು-2016 ದ.ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಂಚಾಯಿತಿ ಜನಪ್ರತಿನಿಧಿಗಳ ಕ್ರೀಡಾ-ಸಾಂಸ್ಕøತಿಕ ಉತ್ಸವದಲ್ಲಿ ದ.ಕ ಜಿಲ್ಲೆಯ ಮಂಗಳೂರು ತಾಲೂಕು ಎಡಪದವು ಗ್ರಾಂ. ಪಂ. ಪುರುಷ ಸದಸ್ಯರು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಂ .ಪಂಚಾಯತ್ನ ಅಧ್ಯಕ್ಷೆ ಶ್ರೀಮತಿ ಮಾಲತಿ, ಉಪಾಧ್ಯಕ್ಷ ಗೋಪಾಲ, ತಾ.ಪಂ ಸದಸ್ಯರಾದ ನಾಗೇಶ್ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎಂ ಭೋಗ ಮಲ್ಲಣ್ಣ, ಲೆಕ್ಕ ಸಹಾಯಕರು ಇಸ್ಮಾಯಿಲ್ ಎಂ ಎಸ್, ಸದಸ್ಯರಾದ ಸುಕುಮಾರ, ರಾಮಚಂದ್ರ, ನಾಗೇಶ ನಾಯ್ಕ್, ಗೀತಾ ನಾಯಕ್ ಉಪಸ್ಥಿತರಿದ್ದರು.
2015-16 ನೇ ಸಾಲಿನ ನ.7 ರಂದು ಉಡುಪಿ ತಾಲೂಕು ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೋಟ ಶಿವರಾಮ ಕಾರಂತ ಧೀಂ ಪಾರ್ಕ್ನಲ್ಲಿ ನಡೆದ ಪಂಚಾಯಿತಿ ದಿಬ್ಬಣದಲ್ಲಿ ಎಡಪದವು ಗ್ರಾಂ. ಪಂ ಉತ್ತಮ ಸ್ಮಶಾನ ವ್ಯವಸ್ಥೆಯ ನಿರ್ವಹಣೆಗಾಗಿ ಕಾರಂತ ಪ್ರಶಸ್ತಿಯನ್ನು ಅಧ್ಯಕ್ಷರಾದ ಶ್ರೀಮತಿ ಮಾಲತಿ ಇವರು ಸ್ವೀಕರಿಸಿದ್ದಾರೆ.

