ಬಜಪೆ: ಸುಂಕದಕಟ್ಟೆಯ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಂಯೋಗದಲ್ಲಿ ಎರಡನೇ ವರ್ಷದ  “ಬೊಲ್ಪುದ ಪರ್ಬ-2016″ರ  ಸಂಭ್ರಮದ ಸಮಾರಂಭ ಅ.23 ಭಾನುವಾರ ಜರಗಿತು. ಈ ವೇಳೆ ಮುಕ್ತಗೂಡುದೀಪ, ರಂಗೋಲಿ ಸ್ಪರ್ಧೆ, ಹಾಗೂ  ಭಕ್ತಿ,  ಜಾನಪದ, ಯಕ್ಷನಾಟ್ಯ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

dsc

dsc10

s-6

dsc9

ಈ ಸಂದರ್ಭದಲ್ಲಿ ಯಕ್ಷಮಿತ್ರ ಸುಂಕದಕಟ್ಟೆ ಇವರ 7ಗೂಡುದೀಪಗಳಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿರುವ ಮಧ್ಯದ ಗೂಡುದೀಪಕ್ಕೆ ಸುಮಾರು 110 ಜನರು ಕೂಪನ್ ಮೂಲಕ ತಮ್ಮದಾಗಿಸಕೊಳ್ಳಬೇಕೆಂದುಕೊಂಡರು. ರಾಜೇಶ್ ಸುವರ್ಣ ಆಯ್ಕೆಯಾಗಿ ಗೂಡುದೀಪ ತಮ್ಮದಾಗಿಸಿಕೊಂಡರು.

dsc6
dsc_

ಗೂಡುದೀಪ ಸ್ಪರ್ಧೆ 2 ವಿಭಾಗಗಳಲ್ಲಿ ಜರಗಿದ್ದು  ಮೊದಲನೆಯ ಆಧುನಿಕ ವಿಭಾಗದಲ್ಲಿ  ಜಗದೀಶ್ ಆಚಾರ್ಯ ಜೋಕಟ್ಟೆ ಪ್ರಥಮ, ಪ್ರಮೋದ್ ಕೊಳಂಬೆ ದ್ವಿತೀಯ  , ತೃತೀಯ ಹೇಮಂತ್ ಕೋಡಿಕಲ್, ಹಾಗೂ ಆಕರ್ಷಕ ಬಹುಮಾನ ಯೋಗೀಶ್ ಕೆಂಜಾರ್ ಹಾಗೂ ಸಾಂಸ್ಥಿಕ ವಿಭಾಗದಲ್ಲಿ ಪ್ರಥಮ ಸಂದೇಶ್ ಕೋಡಿಕಲ್, ದ್ವಿತೀಯ ನಿಶಾಲ್ ಕುಮಾರ್ ಕೃಷ್ಣಾಪುರ, ತೃತೀಯ ಗಗನ್ ಗ್ಯಾನ್ ಬಜಪೆ ಪಡಕೊಂಡರು.

s-2

s-1

p5

ಇದೇ ರೀತಿ ರಂಗೋಲಿ ಸ್ಪರ್ಧೆಯಲ್ಲಿ  60 ಸ್ಪರ್ಧಿಗಳು  ಭಾಗಿಯಾಗಿದ್ದು ಚುಕ್ಕಿ ರಂಗೋಲಿಯಲ್ಲಿ ಅಮೃತ ತಾರೆಮಾರ್ ಪ್ರಥಮ,  ಶೀಲಾ ಎಚ್ ರಾವ್ ಸುಂಕದಕಟ್ಟೆ ದ್ವಿತೀಯ, ವೀಣಾ ಎಸ್. ಕಾಮತ್ ಸುಂಕದಕಟ್ಟೆ ತೃತೀಯ,ಆಧುನಿಕ ವಿಭಾಗದಲ್ಲಿ ರಕ್ಷಾ ಸುಂಕದಕಟ್ಟೆ ಪ್ರಥಮ, ಪ್ರತೀಕ್ ಸುಂಕದಕಟ್ಟೆ ದ್ವಿತೀಯ, ದಿವ್ಯ ಬಳಗ ಸುಂಕದಕಟ್ಟೆ ತೃತೀಯ.

s-11

23-vm-rangoli

s-112

dsc_8987

ಈ ಸಂದರ್ಭ ದಿನೇಶ್ ಇರುವೈಲು, ವಿನಯ್ ಅದಯಪಾಡಿ, ಮಲ್ಲಿಕಾ ಕೈಕಂಬ  ಇವರಿಂದ ಭಕ್ತಿ ಭಾವಗೀತೆ ಹಾಗೂ ಎಸ್ ಎನ್ ಎಸ್ ಸಮೂಹ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಭಕ್ತಿ,  ಜಾನಪದ, ಯಕ್ಷನಾಟ್ಯ, ಶ್ರೇಯಾ ಸನಿಲ್, ಶ್ರಾವ್ಯ ಸನಿಲ್ ಸುಂಕದಕಟ್ಟೆ ಮತ್ತು ಬಳಗದವರಿಂದ ಭರತನಾಟ್ಯ, ಜಾನಪದ, ರಾಧ ಕೃಷ್ಣ ನೃತ್ಯ ರೂಪಕ, ಶ್ರಾವ್ಯ ಕೃಷ್ಣ ಶ್ರೇಯ ಶೆಟ್ಟಿ, ಅಕ್ಷತ ಬಜಪೆ ಇವರಿಂದ ಭರತನಾಟ್ಯ ಮತ್ತು ಕಥಕ್ ನೃತ್ಯ ಹಾಗೂ ವೈವಿಧ್ಯಮಯ  ಕಾರ್ಯಕ್ರಮ ಜರುಗಿತು.

dsc_5

dsc_4

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸುಂಕದಕಟ್ಟೆಯ ಆಡಳಿತ ಮೋಕ್ತೇಸರ  ನಾರಾಯಣ ಪೂಜಾರಿ, ನಮ್ಮ ಟಿ.ವಿ ನಿರ್ದೇಶಕ ಲೀಲಾಕ್ಷ ಕರ್ಕೇರ ಮತ್ತು  ನಿರೂಪಕ ಎಡ್ಮೆ ಮಾರ್ ನವೀನ್ ಶೆಟ್ಟಿ, ಡಾ| ಗಣೇಶ್ ಅಮೀನ್ ಸಂಕುಮಾರ್, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ , ಪ್ರಿನ್ಸಿಪಾಲೆ ಲತಾ, ಮುಖ್ಯ ಶಿಕ್ಷಕಿ ಶೋಭಾ ರಾಣಿ, ಮುಖ್ಯ ಶಿಕ್ಷಕಿ ಗಣಾವತಿ , ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *