ಫರಂಗಿಪೇಟೆ: ಪುದು ಗ್ರಾಮದ ಸುಜೀರ್ ಕಲ್ಲಾಜೆ ಎಂಬಲ್ಲಿ ನಳೀನಿ ಮತ್ತು ರಾಮ ಪೂಜಾರಿ ಎಂಬವರ ಮನೆಗೆ ಮಂಗಳವಾರ 4 ಗಂಟೆಯ ವೇಳೆಗೆ ಜೋರಾಗಿ ಸಿಡಿಲು ಬಡಿದು 2 ಮನೆಗಳಿಗೆ ಹಾನಿಯನ್ನುಂಟು ಮಾಡಿದೆ. ಪರಿಣಾಮ ನಳಿನಿ ಮತ್ತು ರಾಮ ಪೂಜಾರಿ ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದ್ದು, ಗೋಡೆ ಕುಸಿದಿದೆ. ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಪುದು ಕ್ಷೇತ್ರದ ರವೀಂದ್ರ ಕಂಬಳಿ, ಮಂಗಳೂರು ಕ್ಷೇತ್ರದ ಪ್ರವೀಣ್ ಶೆಟ್ಟಿ, ಮಂಗಳೂರು ಅಲ್ಪ ಸಂಖ್ಯಾ ಮೋರ್ಚಾದ ಎಮ್. ಕೆ. ಅಶ್ರಫ್, ಪುದು ಶಕ್ತಿ ಕೇಂದ್ರ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಮಂಗಳೂರು ಕ್ಷೇತ್ರ ಸಮಿತಿ ಸದಸ್ಯ ಸುಬ್ರಹ್ಮಣ್ಯ ರಾವ್ ಸ್ಥಳಕ್ಕೆ ಭೇಟಿ ನೀಡಿದರು.



