ಮುಂಬೈ: ಅಹಮದಾಬಾದಿನ ಖ್ಯಾತ ಲೇಖಕ, ಸಾಹಿತಿ, ಕಾದಂಬರಿಕಾರ, ಪತ್ರಕರ್ತ ಹಾಗೂ ಪ್ರತಿಷ್ಠಿತ ಗುಜಾರಾತ್ ವಿದ್ಯಾಪೀಠ [ವಿಶ್ವವಿದ್ಯಾಲಯ]ದ ಗೌರವ ಪ್ರಾಧ್ಯಾಪಕ ಎಂ.ಎಸ್,ರಾವ್ ಅವರ ಹತ್ತನೇ ಕನ್ನಡಕೃತಿ ಹಾಗೂ ನರೇಂದ್ರ ಮೋದಿಯವರ ಬಗ್ಗೆ ಬರೆದ ಐದನೇ ಕನ್ನಡ ಕೃತಿ “ನರೇಂದ್ರ ಮೋದಿ, ವಿಶ್ವದೆಲ್ಲೆಡೆ ಮೋಡಿ” ಯನ್ನು ರಾಷ್ಟ್ರೀಯ ಬಿಲ್ಲವ ಮಂಡಲ, ಇದರ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್, ಇದರ ಅಧ್ಯಕ್ಷ ಜಯ ಸಿ. ಸುವರ್ಣ ಅವರು ಮುಂಬಯಿಯ ಬಿಲ್ಲವ ಭವನದಲ್ಲಿ ನಡೆದ ವೈಶೆಷ್ಟಪೂರ್ಣ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.
ಈ ವಿಶೇಷ ಸಂದರ್ಭದಲ್ಲಿ “ಅಕ್ಷಯ” ಸಂಪಾದಕ ಡಾ. ಈಶ್ವರ ಅಲೆವೂರು ಅವರು ಗುಜರಾತಿನಲ್ಲಿ ಪ್ರಥಮ ಕನ್ನಡ ಕೃತಿಯನ್ನು ಬರೆದು, ಗುಜರಾತಿನಲ್ಲಿ ಬಿಡುಗಡೆ ಮಾಡಿ ದಾಖಲೆ ಸೃಷ್ಟಿಸಿದ ಎಂ. ಎಸ್. ರಾವ್ ಗುಜರಾತಿನ ಕನ್ನಡದ ರಾಯಭಾರಿಯಾಗಿರುವುದು ಕನ್ನಡಿಗರಿಗೆ ಅಭಿಮಾನದ ವಿಷಯ,ಯಾರಿಗೂ ಸಂದರ್ಶನ ನೀಡಿದ ಮೋದಿಯವರು ರಾವ್ ಅವರಿಗೆ 10ಬಾರಿ ಸಂದರ್ಶನ ನೀಡಿದ್ದಾರೆ, ಅದು ದಾಖಲೆ ಮುಖ್ಯಮಂತ್ರಿಯಾಗಿ ಪ್ರಥಮ ಸಂದರ್ಶನ ನೀಡಿದ್ದು ಅವರಿಗೆ,ಅದೇ ರೀತಿ ಪ್ರಧಾನ ಮಂತ್ರಿಯಾದ ಪ್ರಥಮ ಸಂದರ್ಶನ ನೀಡಿದ್ದು ರಾವ್ ಅವರಿಗೆ ಅದು ಅವರಿಗೆ ಅಭಿಮಾನದ ವಿಷಯ.

ಅವರ ಸಾಧನೆಗಳ ಹಟ್ಟಿ ದೊಡ್ಡದಿದೆ. ಅದು ಇನ್ನೂ ಬೆಳೆಯುತ್ತಾ ಹೋಗಲಿ, ಅವರ ಪ್ರತಿಭೆಯ ಲಾಭ ಕನ್ನಡಿಗರಿಗೆ ನಿರಂತರವಾಗಿ ಲಭಿಸಲಿ ಎಂದು ಪ್ರಾಮಾಣಿಕರಾಗಿ ಆಶಿಸುತ್ತೇನೆ ಎಂದು ನುಡಿದರು. ವೇದಿಕೆಯಲ್ಲಿ ಖ್ಯಾತ ಕವಿ, ಶಿಕ್ಷಕ ಟಿ.ಎಸ್,ಕುರ್ಕಾಲ್, ಮುಂಬೈ ಬಿಲ್ಲವರ ಎಸೋಸಿಯೇಶನ್ ನಿತ್ಯನಂದ ಡಿ. ಕೋಟ್ಯಾನ್, ಗುಜರಾತ್ ಬಿಲ್ಲವರ ಸಂಘದ ಸಂಸ್ಥಾಪಕ ಮೋಹನ್ ಸಿ. ಪೂಜಾರಿ, ಹಿರಿಯ ಕೈಕಾರಿಕೋದ್ಯಮಿ, ರಾಜಕೀಯ ಧುರೀಣ ಎಲ್,ವಿ. ಅಮೀನ್, ಹಿರಿಯ ಸಾಹಿತಿ, ಕವಿ, ಸಂಪಾದಕ ಎಂ.ಬಿ. ಕುಕ್ಯಾನ್, ಸಾಹಿತಿ ಎಚ್. ಎಸ್. ಪೂಜಾರಿ, ಡಾ. ಕರುಣಾಕರ ಶೆಟ್ಟಿ, ಶಂಕರ ಪೂಜಾರಿ, ರಾಜಾ ಸಾಲ್ಯಾನ್, ಭಸ್ಕರ ಬಂಗೇರ, ಶಕುಂತಳಾ ಕೋಟ್ಯಾನ್, ಮಹೇಶ್ ಕಾರ್ಕಳ, ಉಪಸ್ಥಿತರಿದ್ದರು. ಹರೀಶ್ ಕೆ. ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿ, ಧರ್ಮೇಶ್ ಸಾಲ್ಯಾನ್ ವಂದಿಸಿದರು.

