ಕೈಕಂಬ: ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿಯಲ್ಲಿ ಮಾರ್ಚ್ 1ರಿಂದ 6ರವರೆಗೆ ಜರಗುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಜೀರ್ಣೋದ್ಧಾರದ ಬಗ್ಗೆ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮವು ಅ.23 ಭಾನುವಾರದಂದು ಸಂಜೆ 5.30ಕ್ಕೆ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜರಗಲಿದೆ.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀ ವಿವೇಕ ಚೈತನ್ಯಾನಂದ ಅವರು ವಿಜ್ಞಾಪನ ಪತ್ರ ಬಿಡುಗಡೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮುಕ್ತೇಸರ ಪದ್ಮನಾಭ ಶೆಟ್ಟಿ ಪೆರ್ಮಂಕಿ ಗುತ್ತು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕುಡುಪು ವಾಸ್ತುಶಿಲ್ಪ ತಜ್ಞರು ಕೃಷ್ಣರಾಜ ತಂತ್ರಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಉದ್ಯಮಿ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಉಳಾಯಿಬೆಟ್ಟು ಗ್ರಾ.ಪಂ ಅಧ್ಯಕ್ಷ ವಸಂತ್ ಕುಮಾರ್ ಪೆರ್ಮಂಕಿ ಭಾಗವಹಿಸುವರು ಎಂದು ಸದಾಶಿವ ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

