ಬಂಟ್ವಾಳ : ಪಾಣೆಮಂಗಳೂರು-ಆಲಡ್ಕ ಆಟದ ಮೈದಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಪಾಳು ಬಿದ್ದಿರುವ ತೆರೆದ ಬಾವಿ ನಿಮರ್ಾಣದ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯರು ನೀಡಿದ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಶೇಠ್ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಪಾಣೆಮಂಗಳೂರು ಗ್ರಾಮದ ಸವರ್ೆ ನಂಬ್ರ 28 ರ ಆಲಡ್ಕ ಎಂಬಲ್ಲಿರುವ ಮಕ್ಕಳ ಆಟದ ಮೈದಾನದ ಒಂದು ಬದಿಯಲ್ಲಿ ಕಳೆದ ಸುಮಾರು 12 ವರ್ಷಗಳ ಹಿಂದೆ ಕನರ್ಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಿಂದ 10 ಲಕ್ಷ ರೂಪಾಯಿಗೂ ಮಿಕ್ಕಿದ ಅಂದಾಜು ವೆಚ್ಚದಲ್ಲಿ ಬೋಳಂಗಡಿ ಎಸ್ಸಿ/ಎಸ್ಟಿ ಕಾಲನಿಗೆ ಕುಡಿಯುವ ನೀರು ಸರಬರಾಜಿಗೆ ಈ ಬಾವಿಯನ್ನು ನಿಮರ್ಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಾಗಲೀ ಮಾಹಿತಿ ಫಲಕವಾಗಲೀ ಕಂಡು ಬರುವುದಿಲ್ಲ. ಆದರೆ ಬಾವಿ ಮಾತ್ರ ಉಪಯೋಗಕ್ಕೆ ಬಾರದೆ ತೆರೆದ ಸ್ಥಿತಿಯಲ್ಲಿ ಪಾಳು ಬಿದ್ದಿದೆ ಎಂದು ಸಾರ್ವಜನಿಕರು ಜೂ 10 ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಶೇಠ್ ಅವರು ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ವಿಶೇಷ ಯೋಜನೆ-2002 ರಡಿ 6 ಮೀಟರ್ ವ್ಯಾಸ ಮತ್ತು 8 ಮೀಟರ್ ಆಳದ ಈ ತೆರೆದ ಬಾವಿಯನ್ನು ನಿಮರ್ಿಸಿ 2003 ರ ಎಪ್ರಿಲ್ 23 ರಂದು ಮುಂದಿನ ನಿರ್ವಹಣೆಗಾಗಿ ನಗರ ಪಂಚಾಯತ್ಗೆ ಹಸ್ತಾಂತರಿಸಿತ್ತು ಎಂದು ಸ್ಥಳಿಯರು ಲೋಕಾಯುಕ್ತ ಅಧಿಕಾರಿಗೆ ಮಾಹಿತಿ ನೀಡಿದರು.
ಆಟದ ಮೈದಾನ ಹಾಗೂ ಜನವಸತಿ ಪ್ರದೇಶದಲ್ಲಿ ತೆರೆದ ಸ್ಥಿತಿಯಲ್ಲಿರುವ ಈ ಬಾವಿಯಲ್ಲಿ ವರ್ಷದ ಎಲ್ಲ ಸಮಯಗಳಲ್ಲೂ ನೀರು ತುಂಬಿರುತ್ತಿದ್ದು, ಶಾಲಾ-ಮದ್ರಸ ವಿದ್ಯಾಥರ್ಿಗಳು ಸೇರಿದಂತೆ ಸ್ಥಳೀಯರ ಮಕ್ಕಳು ನಿತ್ಯ ಈ ಬಾವಿಗೆ ಹಾರಿ ಈಜಾಡುವ ಅಪಾಯಕರ ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಏನು ನಡೆಯುತ್ತದೆ ಎಂಬುದನ್ನು ಊಹಿಸಲು ಅಸಾಧ್ಯವಾಗಿದೆ ಎಂದು ಸ್ಥಳೀಯ ನಾಗರಿಕರು ಲೋಕಾಯುಕ್ತ ಅಧಿಕಾರಿಯ ಮುಂದೆ ಆತಂಕ ವ್ಯಕ್ತಪಡಿಸಿದರು.
ಬಾವಿ ನಿಮರ್ಾಣಕ್ಕೆ ತಗುಲಿದ ವೆಚ್ಚವು ಸರಕಾರದ ಬೊಕ್ಕಸಕ್ಕೆ ನಷ್ಟವಾಗಿರುತ್ತದೆ. ಈ ಬಾವಿ ನಿಮರ್ಾಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಸರಕಾರಕ್ಕೆ ಆದ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಭರಿಸುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಸ್ಥಳೀಯರು ಲೋಕಾಯುಕ್ತ ಅಧಿಕಾರಿ ಉಮೇಶ್ ಶೇಠ್ ಅವರನ್ನು ಆಗ್ರಹಿಸಿದರು. ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಮೇಶ್ ಶೇಠ್ ಸಾರ್ವಜನಿಕರಿಗೆ ಭರವಸೆ ನೀಡಿದರು. ಈ ಸಂದರ್ಭ ಸ್ಥಳೀಯರಾದ ಇಸ್ಮಾಯಿಲ್ ಪಡ್ಪು, ಅಬ್ದುಲ್ ರಬ್ಬು, ಮೋನು ಪಡ್ಪು, ಸಿದ್ದೀಕ್ ಬಂಗ್ಲೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ : 26 ಆಲಡ್ಕ 1 : ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಶೇಠ್ ಆಲಡ್ಕ ಮೈದಾನದಲ್ಲಿರುವ ತೆರೆದ ಬಾವಿ ಪರಿಶೀಲಿಸಿದರು.
26 ಆಲಡ್ಕ 2 : ತೆರೆದ ಬಾವಿಯ ದೃಶ್ಯ.
26 ಆಲಡ್ಕ 3 : ತೆರೆದ ಬಾವಿಗಿಳಿದು ಮಕ್ಕಳು ಸ್ನಾನ ಮಾಡುತ್ತಿರುವ ದೃಶ್ಯ


