ಬಂಟ್ವಾಳ: ಬಿ.ಸಿ.ರೋಡಿನ 4 (2)

 

1 (5)

2 (5)

3 (4)ನಿವಾರಣೆಯ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಸದ ನಳೀನ್ ಕುಮಾರ್ ಕಟೀಲು ಅವರು ಗುರುವಾರ ಪರಿಶೀಲನೆ ನಡೆಸಿದರು.

ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಿಂದ ರಾ.ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದರ್ೇಶಕ ಶ್ರೀರಾಮ ಮಿಶ್ರ ಅವರೊಂದಿಗೆ ಹೆಜ್ಜೆ ಹಾಕಿದ ಸಂಸದರು ಇಲ್ಲಿನ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೆಲ ಪ್ರಮುಖ ಸಮಸ್ಯೆಗಳನ್ನು ಸಂಸದ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು. ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬಿ.ಸಿ.ರೋಡಿನ ವೃತ್ತವನ್ನು ಕಿರಿದು ಗೊಳಿಸುವುದು, ಸವರ್ಿಸ್ ರಸ್ತೆಯಲ್ಲಿ ನಿಲುಗಡೆಯಾಗುವ ಎಲ್ಲಾ ಖಾಸಗಿ ಮತ್ತು ಸಕರ್ಾರಿ ಬಸ್ಸುಗಳನ್ನು ನೂತನ ಕೆಸ್ಆರ್ಟಿಸಿ ಬಸ್ ತಂಗುದಾಣದಲ್ಲಿಯೇ ನಿಲುಗಡೆ ಅವಕಾಶ ಕಲ್ಪಿಸಿ ಕೊಡಲು ಸಂಸದರು ಪೊಲೀಸ್ರಿಗೆ ಸೂಚಿಸಿದರು.
ರೈಲ್ವೇ ಕಿರು ಸೇತುವೆಯ ಕಾಮಗಾರಿಯನ್ನು ಚರುಕುಗೊಳಿಸಿ ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸ ಬೇಕು ಸವರ್ಿಸ್ ರಸ್ತೆಯಲ್ಲಿ ಪುರಸಭೆಗೆ ಒಳಪಟ್ಟಿರುವ ಎಲ್ಲಾ ಪೈಪ್ಲೈನನ್ನು ತುತರ್ಾಗಿ ಸರಿಪಡಿಸಲು ಹಾಗೂ ಸ್ಥಳಾಂತರಿಸಲು ಮುಖ್ಯಾಧಿಕಾರಿಗೆ ಸೂಚಿಸಿದರು. ಕಿರಿದಾಗಿರುವ ಸವರ್ಿಸ್ ರಸ್ತೆಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪದರ್ಿಗೆ ಒಳಪಟ್ಟು ಈಗಾಗಲೇ ಪರಿಹಾರವನ್ನು ಪಡೆದುಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸ ಬೇಕು. ಈ ನಿಟ್ಟಿನಲ್ಲಿ ಮಂಗಳೂರು ಸಹಾಯಕ ಕಮಿಷನರ್ ಅವರು ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ತಿಳಿಸಿದರು.
23 ಕೋಟಿ ರು.ವಿನ ಪ್ರಸ್ತಾವನೆ:
ಮಳೆಗಾಲ ಆಗಮಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ಸುಸ್ಥಿತಿಗೆ ತರಲು ಕ್ರಮಗೈಗೊಳ್ಳುವ ನಿಟ್ಟನಲ್ಲಿ ಹೆದ್ದಾರಿ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು ಬಿ.ಸಿ.ರೋಡಿನಿಂದ ಸುರತ್ಕಲ್ವರೆಗಿನ ಚತುಷ್ಪಥ ರಸ್ತೆ ಕಾಮಾಗಾರಿ ವೀಕ್ಷಣೆ ಮಾಡಲಾಗಿದೆ. ಕೆಲ ಭಾಗಗಳಲ್ಲಿ ಕಾಮಾಗಾರಿ ಕುಂಟುತ್ತಾ ಸಾಗುತ್ತಿತುವ ಹಿನ್ನಲೆಯಲ್ಲಿ ಮತ್ತೆ ವೇಗ ನೀಡಲು ಸೂಚಿಸಲಾಗಿದೆ. ಸವರ್ಿಸ್ ರಸ್ತೆ ಅಭಿವೃದ್ದಿ ಅಂಡರ್ ಪಾಸ್, ಚರಂಡಿ ಮೊದಲಾದ ಅಗತ್ಯ ಕಾಮಗಾರಿಗಳಿಗೆ 23 ಕೋಟಿ ರುಪಾಯಿಯ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರಕ್ಕೆ ಸಲ್ಲಿಸಲಾಗಿದ್ದು ಇದರ ಮಂಜೂರಾತಿ ದೊರೆತಾಕ್ಷಣ ಕಾಮಾಗರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ನಳಿನ್ ಹೇಳಿದರು. ಚತುಷ್ಪಥ ಮೇಲ್ಸತೆಉವೆ ನಿಮರ್ಾಣಗೊಮಡ ಬಳಿಕ ಹಲವಾರು ತಾಂತ್ರಿಕ ಅಡೆತಡೆಗಳು ಎದುರಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆ ಬಗೆಹರಸಿಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇದೇ ಸಂದರ್ಭ ಬ್ರಹ್ಮರಕೂಟ್ಲುವಿನ ಟೋಲ್ಪ್ಲಾಝಾ ಬಳಿಯಿರುವ ಬ್ರಹ್ಮ ಸನ್ನಿಧಿಗೆ ತೆರಳಿದ ಸಂಸದ ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಈ ಸಂದರ್ಭ ಜಿ.ಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್, ತಾ.ಪಂ.ಅಧ್ಯಕ್ಷ ಯಶವಂತ ಡಿ., ಸದಸ್ಯ ಆನಂದ ಶಂಭೂರು, ಪುರಸಭಾ ಸದಸ್ಯರಾದ ದೇವದಾಸ್ ಶೆಟ್ಟಿ, ಭಾಸ್ಕರ ಟೈಲರ್, ಮಾಜಿ ಸದಸ್ಯ ಗೋಪಾಲ ಸುವರ್ಣ, ಬಿಜೆಪಿ ಪ್ರಮುಖರಾದ ಪುರುಷ ಸಾಲ್ಯಾನ್ ನೆತ್ತರಕೆರೆ, ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ಮಚ್ಚೇಂದ್ರ ಸಾಲ್ಯಾನ್, ರೋನಾಲ್ಡ್ ಡಿಸೋಜಾ, ರಝಾಕ್, ಚರಣ್ ಜುಮಾದಿಗುಡ್ಡೆ, ಪವನ್ ಕುಮಾರ್ ಮತ್ತಿತರರು ಹಾಜರಿದ್ದರು ಪುರಸಭಾ ಅಧಿಕಾರಿಗಳಾದ ಮತ್ತಡಿ, ಡೊಮೆನಿಕ್ ಡಿಮೆಲ್ಲೋ ಹೆದ್ದಾರಿ ಇಲಾಖೆಯ ಉದಯಕುಮಾರ್ ಇದ್ದರು

By suddi9

Leave a Reply

Your email address will not be published. Required fields are marked *