ನವದೆಹಲಿ : ಇರಾಕ್ ಉಗ್ರರ ಒತ್ತೆಯಾಳುಗಳಾಗಿದ್ದವರ ಪೈಕಿ ಇಬ್ಬರು ಭಾರತೀಯ ಯುವಕರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಮ್ರಾನ್ ರಜಪೂತ್ ಹಾಗು ಅಲ್ತಫ್ ಗಾಂಧಿ ಇರಾಕ್’ನಿಂದ ವಾಪಸ್ಸಾಗಿರುವ ಭಾರತೀಯ ತರುಣರು. ಇವರು ಇರಾಕ್’ನಲ್ಲಿ ಭಯೋತ್ಪಾದಕರು ವಶಪಡಿಸಿಕೊಂಡಿರುವ ಮೊಸೂಲ್ ನಗರದಿಂದ 50 ಕಿ.ಮಿ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

irak

ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮಗೆ ಬದುಕಿ ಬರುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ನಮ್ಮ ಸಮೀಪದ ಮೊಸೂಲ್ ನಗರವನ್ನು ಬಂಡುಕೋರರು ವಶಪಡಿಸಿಕೊಂಡಿದ್ದಾರೆ. ನಾವು ವಾಸವಿದ್ದ ಪ್ರದೇಶಕ್ಕೂ ಬರುವವರಿದ್ದರು. ಈ ವೇಳೆ ನಮ್ಮನ್ನು ಅಲ್ಲಿನ ಸೇನೆ ಬಂದು ಕಾಪಾಡಿತು.

ಬಂಡುಕೋರರು ಎಲ್ಲೆಡೆ ಆಕ್ರಮಣ ಮಾಡುತ್ತಿದ್ದಾರೆ. ಅವರು ಆಕ್ರಮಣ ಮಾಡಿದ ಎಲ್ಲ ಕಡೆ ಸಂಪೂರ್ಣ ವಿನಾಶವಾಗಿ ಹೋಗುತ್ತಿದೆ. ಬಂಡುಕೋರರು ವಶಪಡಿಸಿಕೊಂಡ ಪ್ರದೇಶಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ ಇರಾಕ್’ನ ಮಸೂನ್ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರು ಸುರಕ್ಷಿತವಾಗಿ ಇದ್ದಾರೆ. ಅವರನ್ನು ವಾಪಾಸ್ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು ಎಂದು ಭಾನುವಾರ ವಿದೇಶಾಂಗ ಇಲಾಖೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *