ಮಧುಮೇಹ ಇಂದು ಜಗತ್ತಿಗೆ ಶಾಪವಾಗಿ ಕಾಡುತ್ತಿದೆ. ಮಧುಮೇಹದಿಂದಾಗಿ ಬರುವ ಅನೇಕ ತೊಂದರೆಗಳು ಜನರನ್ನು ಕಾಡುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರಕ್ರಮ ಕೂಡ ಸೇರಿದೆ. ಮಧುಮೇಹಿಗಳು ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಯಾವಾಗ ಸೇವಿಸಬೇಕು ಎಂಬ ಮಾಹಿತಿಯ ಅಗತ್ಯವಿದೆ. ಮಧುಮೇಹದಿಂದ ಬಳಲುತ್ತಿರುವವರು ಯಾವುದೇ ಸಿಹಿ ತಿನ್ನಬಾರದು ಎಂಬ ತಪ್ಪುಕಲ್ಪನೆಯಿದೆ. ಎಲ್ಲಾ ಸಿಹಿಯ ಅಂಶ ದೇಹದ ಸಕ್ಕರೆಯ ಪ್ರಮಾಣವನ್ನ ಒಂದೇ ರೀತಿಯಲ್ಲಿಹೆಚ್ಚುಮಾಡದು. ಮಧುಮೇಹಗಳಿಗೂ ಕಾರ್ಬೋಹೈಡ್ರೇಟ್‍ನ ಅವಶ್ಯಕತೆಯಿದೆ.

images

ಕಾರ್ಬೋಹೈಡ್ರೇಟ್‍ಗಳಲ್ಲಿ ಮುಖ್ಯವಾಗಿ 2 ವಿಧ:
1) 1) Simple (ಸಿಂಪಲ್)
2) complex (ಕಾಂಪ್ಲೆಕ್ಸ್)

1) Simple (ಸಿಂಪಲ್) : ಈ ವಿಧವಾದ ಕಾರ್ಬೋಹೈಡ್ರೇಟ್‍ಗಳು ಕರುಳಿನಿಂದ ನೇರವಾಗಿ ರಕ್ತವನ್ನ ಸೇರುತ್ತದೆ. ಹೀಗಾಗಿ ಒಮ್ಮೆಲೆ ರಕ್ತದ ಸಕ್ಕರೆಯ ಅಂಶವನ್ನು ವೃದ್ಧಿಸುತ್ತದೆ. ಉದಾಹರಣೆಗೆ ಸಕ್ಕರೆ, ಜ್ಯಾಮ್, ಬೇಕ ಸಿಹಿತಿನಿಸುಗಳು, ಜೆಲ್ಲಿ ಇತ್ಯಾದಿ ಮಧುಮೇಹಿಗಳುಇದನ್ನ ಸೇವಿಸದೆ ಇರುವುದು ಉತ್ತಮ.

diabetic-foot-ulcer

2) complex (ಕಾಂಪ್ಲೆಕ್ಸ್) : ಈ ವಿಧವಾದ ಕಾರ್ಬೋಹೈಡ್ರೇಟ್‍ಗಳು ವಿಂಗಡಣೆಯಾಗುತ್ತಾ ನಿಧಾನವಾಗಿ ರಕ್ತವನ್ನು ಸೇರುತ್ತದೆ. ಅomಠಿಟex ಕಾರ್ಬೋಹೈಡ್ರೇಟ್‍ಗಳು ರಕ್ತದ ಸಕ್ಕರೆಯ ಅಂಶವನ್ನು ಒಮ್ಮೆಂದಲೆ ವೃದ್ಧಿಸದು.
ಮಧುಮೇಹಿಗಳು ಈ ವಿಧವಾದ ಕಾರ್ಬೋಹೈಡ್ರೇಟ್ ಅನ್ನು ಮಿತವಾಗಿ ಸೇವಿಸಬಹುದು.

diabetes-cure

ಉದಾಹರಣೆಗೆ : ಧಾನ್ಯಗಳು, ಅಕ್ಕಿ, ಗೋಧಿ ಇತ್ಯಾದಿ.
ಕೊಬ್ಬು: (fat)
ಮಧುಮೇಹಿಗಳೂ ಕೂಡ ವೆಜಿಟೇಬಲ್ ಎಣ್ಣೆಯನ್ನು ಉಪಯೋಗಿಸಬಹುದು.
(ಹಿತ ಮಿತವಾಗಿ)
ಉದಾ: ಸೂರ್ಯಕಾಂತಿ ಎಣ್ಣೆ ಇವುಗಳಲ್ಲಿ ( Unsaturated fatty acid ) ಇದೆ. ಇದು ಕೊಲೆಸ್ಟರಾಲ್ ಅನ್ನು ಒಮ್ಮೆಗೆ ಹೆಚ್ಚಿಸದು. ಮಧುಮೇಹಿಗಳು ಉಳಿದ ಜಟ್ಟಿನ ಅಂಶವನ್ನು ಸೇವಿಸದೇ ಇರುವುದು ಉತ್ತಮ.

ಉದಾ: ಬೆಣ್ಣೆ, ಮೊಸರು ಇವುಗಳಲ್ಲಿ (Saturated fatty acid ) ಇದೆ. ಇದು ಕೊಲೆಸ್ಟಾರ್ಹೆಚ್ಚು ಮಾಡುತ್ತದೆ.ಗ್ಲೈಸಿಮಿಕ್ ಇಂಡೆಕ್ಸ್ಇದು ಆಹಾರ ಎಷ್ಟು ಪ್ರಮಾಣದಲ್ಲಿ ರಕ್ತದ ಸಕ್ಕರೆಯ ಅಂಶವನ್ನ ವೃದ್ಧಿಸುತ್ತದೆ ಎಂಬುದರ ಮೇಲೆ ನಿರ್ಧರಿಸ್ಪಡುತ್ತದೆ.
ಉದಾಹರಣೆಗೆ: 1) ಅಕ್ಕಿ, ಗೋಧಿ, ಬಟಾಟೆ, ಕ್ಯಾರೆಟ್ – ಗ್ಲೈಸಿಮಿಕ್ ಇಂಡೆಕ್ಸ್ 65-75 ಇವುಗಳು ಹೆಚ್ಚಿನ ಗ್ಲೈಸಿಮಿಕ್ ಇಂಡೆಕ್ಸ್ ಹೊಂದಿದೆ. 2) ಹಣ್ಣುಗಳು – 45-55 3) ಹಸಿರುಬೇಳೆ ತೊಗರಿಬೇಳೆ ಬೀನ್ಸ್ , ಧಾನ್ಯಗಳು 30-40 } ಮಧುಮೇಹಿಗಳಿಗೆ ಅತ್ಯುತ್ತಮ } ಎಲ್ಲಾ ವಿಧವಾದ ನಾರಿನಾಂಶವಿರುವ ಆಹಾರ ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್ ಹೊಂದಿದೆ.

images-1

ಮಧುಮೇಹ ಮತ್ತು ಆಹಾರ ಸೇವಿಸಬಾರದ ಆಹಾರಗಳು ಮಿತವಾಗಿ ಸೇವಿಸಬಹುದಾದ ಆಹಾರಗಳು ಸೇವಿಸಬಹುದಾದ ಆಹಾರಗಳು ರಿಫೈನ್ಟ್ ಸಕ್ಕರೆ ಜಾಮ್ ಐಸ್‍ಕ್ರೀಂ ಕೇಕ್ಪೇ ಪೇಸ್ಟ್ರಿ ಸಿಹಿತಿನಿಸು ಬೇಕರಿ ಸಿಹಿತಿನಿಸುಗಳು ಬಿಸ್ಕೆಟ್‍ಗಳ ಚಾಕ್ಲೆಟ್‍ಗಳು ಸಾಫ್ಟ್‍ ಡ್ರಿಂಕ್ಸ್ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಸಂರಕ್ಷಕ ಬಳಸಿ ತಯಾರಿಸಿದ ಆಹಾರ ಪ್ಯಾಕೇಜ್ ಮಾಡಿದ ಆಹಾರ ಜೇನು, ಖರ್ಜೂರ ,ಕೆನೆತೆಗೆದ ಹಾಲು, ಗಿಣ್ಣು, ಸೌತೆಕಾಯಿ, ಈರುಳ್ಳಿ,ಬೆಳ್ಳುಳ್ಳಿ, ಹುರುಳೀಕಾಯಿ, ಮೂಲಂಗಿ ,ಟೊಮೇಟೊ,ಪಾಲಕ್‍ಸೊಪ್ಪ್, ಎಲೆಕೋಸು, ಟರ್ನಿಪ್, ಗ್ರೀನ್‍ಟೀ, ಓಟ್ಸ್, ಧಾನ್ಯಗಳು, ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳು.
1) ಸೇಬು
2) ನೇರಳೆಹಣ್ಣು
3) ಪಪ್ಪಾಯಿ ಹಣ್ಣು
4) ಅನಾನಸ್ (ಚಿಕ್ಕ ಪ್ರಮಾಣದಲ್ಲಿ)

download-2

ಮಧುಮೇಹ ಮತ್ತು ವ್ಯಾಯಾಮ:
ಮಧುಮೇಹ ಬಾರದಂತೆ ತಡೆಗಟ್ಟಲು ಮತ್ತು ಮಧುಮೇಹವನ್ನು ಹತೋಟಿಯಲ್ಲಿಡಲು ವ್ಯಾಯಾಮ ಸಹಕಾರಿ. ಮಧುಮೇಹಕ್ಕೆ ಯಾವ ವ್ಯಾಯಾಮ ಉತ್ತಮ, ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು ಮತ್ತು ಅದರ ಪ್ರಯೋಜನಗಳೇನು ಎನ್ನುವ ಪ್ರಶ್ನೆ ಎಲ್ಲರಲ್ಲು ಮೂಡುತ್ತದೆ. ನಾವು ಸಾಮಾನ್ಯವಾಗಿ ಎಲ್ಲಾ ಮಧುಮೇಹಿ ರೋಗಿಗಳಿಗೆ ವ್ಯಾಯಾಮದ ಬಗ್ಗೆ ಹೇಳಿದಾಗ ನಾವು ಆಫೀಸ್ ಕೆಲಸ ಮಾಡುತ್ತೇವೆ ಅಥವಾ ಮನೆಕೆಲಸ ಮಾಡುತ್ತೇವೆ ನಮಗೆ ಅದರ ಅಗತ್ಯವಿಲ್ಲ ಎಂಬ ಹೆಮ್ಮೆಯ ಉತ್ತರ ಬರುತ್ತದೆ. ಆದರೆ ಇವುಗಳಿಂದ ಮಧುಮೇಹ ತಡೆಗೆ ಅಥವಾ ಹತೋಟಿಗೆ ಪ್ರಯೋಜನವಾಗದು. ಯಾವ ವ್ಯಾಯಾಮ ಉತ್ತಮ ಏರೋಬಿಕ್ ವ್ಯಾಯಾಮಗಳು:

1) ವೇಗದನಡಿಗೆ (Brisk walk)

2) ಸೈಕ್ಲಿಂಗ್ (Cycling)

ಈಜು (Swimming)
4) ನೃತ್ಯ (Dancing)

download-1

ವ್ಯಾಯಾಮದ ಅವಧಿ
ಸಾಮಾನ್ಯವಾಗಿ ಎಷ್ಟು ಹೊತ್ತು ಈ ವ್ಯಾಯಾಮ ಮಾಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ವ್ಯಾಯಾಮಗಳನ್ನು ನಿತ್ಯವೂ 30ನಿಮಿಷ ಮಾಡಿದರೆ ಮಧುಮೇಹ ರೋಗಿಗಳಿಗೆ ಪ್ರಯೋಜನ ಶತಸಿದ್ಧ. ಮಧುಮೇಹ ಬಾರದಂತೆ ತಡೆಗಟ್ಟಲೂ ಇದು ಪ್ರಯೋಜನಕಾರಿ ವ್ಯಾಯಾಮ ಮತ್ತು ಮಧುಮೇಹ ಮಧುಮೇಹಕ್ಕೂ ವ್ಯಾಯಾಮಕ್ಕೂ ಇರುವ ಸಂಬಂಧ ಏನು? ವ್ಯಾಯಾಮ ಹೇಗೆ ಮಧುಮೇಹಿಗಳಿಗೆ ಉತ್ತಮ.

download

* ವ್ಯಾಯಾಮದಿಂದ ಇನ್ಸುಲಿನ್ ಕಾರ್ಯಕ್ಷಮತೆ ಹೆಚ್ಚುತ್ತದೆ.
* ಶರೀರ ಇನ್ಸುಲಿನ್‍ಗೆ ಸೂಕ್ತವಾಗಿ ಸ್ಪಂದಿಸುತ್ತದೆ.
* ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.
* ಶರೀರದ ತೂಕ ಸಮತೋಲನದಲ್ಲಿಡಲು ಸಹಕಾರಿ
* ಹೃದಯದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.

dhanurasana-bow-pose

ಮಧುಮೇಹ ತಡೆಗೆ ಈ ಸೂತ್ರವನ್ನು ಅನುಸರಿಸಿ ನಿಯಮಿತ ಊಟ, ನಸುಕಿನ ಓಟ ಬಾರದು ಬಾಳಲಿ ಮಧುಮೇಹದ ಕಾಟ

ಡಾ| ಸತೀಶ ಶಂಕರ ಬಿ.
ಮುಖ್ಯಸ್ಥರು
ಆರ್ಯುಸ್ಪರ್ಶ ಆರ್ಯುವೇದ ಆಸ್ಪತ್ರೆ ಗಂಜಿಮಠ,
ಮೊ: 9482167168

By suddi9

Leave a Reply

Your email address will not be published. Required fields are marked *