ಅದು 1965 ನೇ ಇಸವಿ. ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು. ಅವರ ಮನೆಯವರ ಒತ್ತಾಸೆಗೆ ಮಣಿದು ಫಿಯೆಟ್ ಕಾರು ಖರೀದಿಸಲು ಮುಂದಾದರು. ಆ ತನಕ ಶಾಸ್ತ್ರಿ ಅವರಲ್ಲಿ ಸ್ವಂತದಾದ ಕಾರು ಇರಲಿಲ್ಲ. ಫಿಯೆಟ್ ಕಾರಿನ ಬೆಲೆ ಎಷ್ಟೆಂದು ಕೇಳಿದರೆ ಆವಾಗ ಕಾರಿನ ದರ 12,000/- ರೂ. ಆದರೆ ಶಾಸ್ತ್ರಿಯವರ ಬ್ಯಾಂಕ್ ಖಾತರಯಲ್ಲಿದ್ದದ್ದು ಕೇವಲ 7000/- ರೂ. ಉಳಿದ 5,000 ಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಲೋನ್ ಗೆ ಅಪ್ಲೈ ಮಾಡಿದರು. ಬ್ಯಾಂಕ್ ಕೇವಲ ಒಂದುವರೆ ಗಂಟೆಯಲ್ಲಿ ಲೋನ್ ಸ್ಯಾಂಕ್ಷನ್ ಮಾಡಿತು.

ಆದರೆ ಈ ನಿಯಮವನ್ನು ಒಪ್ಪಿಕೊಳ್ಳದ ಪ್ರ್ರಧಾನಿ ಶಾಸ್ತ್ರಿ ಸಾಮಾನ್ಯರಿಗೆ ಮಾಡುವಂತೆ ಬ್ಯಾಂಕ್ ಮೀಟೀಂಗ್ ನಲ್ಲಿ ಪಾಸ್ ಮಾಡಿ ಕ್ಯೂ ಪ್ರಕಾರ ಲೋನ್ ನೀಡಿ ಅದೇ ಪ್ರಕಾರ ಲೋನ್ ಕಟ್ಟುತ್ತೇನೆ ಎಂದು ಹೇಳಿದರು. ನಾನು ಪ್ರಧಾನಿಯೆಂದು ವಿನಾಯಿತಿ ಬೇಡ ಎಂದರು. ಬ್ಯಾಂಕ್ ಮತ್ತೆ ಅದೇ ರೀತಿ ಪ್ರೊಸೆಸ್ಸನ್ನು ಮುಂದುವರೆಸಿತು. ನಂತರ ದಿನಗಳಲ್ಲಿ ಲೋನ್ ಸಹಿತ ಕಾರು ಶಸ್ತರಿಯವರ ಅಂಗಳಕ್ಕೆ ಬಂತು.


1966 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮರಣವನ್ನಪ್ಪಿದರು. ಬ್ಯಾಂಕ್ ನಿಂದ ಅವರ ಪತ್ನಿ ಲಲಿತಾ ಶಾಸ್ತ್ರಿ ಅವರಿಗೆ ಲೋನ್ ಪವತಿಸುವಂತೆ ಪತ್ರ ಬಂತು. ಪತ್ನಿ ತನ್ನ ಕುಟುಂಬದ ಪೆನ್‍ಷೆನ್ ಮೊತ್ತದಲ್ಲಿ ತಿಂಗಳು ತಿಂಗಳು ಪಾವತಿಸುತ್ತೇನೆಂದು ಮನವಿ ಮಾಡಿದರು. ಅದರಂತೆ ಪಾವತಿಸಿ ಲೋನ್ ಮುಗಿಸಿದರು ಕೂಡಾ ಆ ಫಿಯೆಟ್ ಕಾರು ಈಗಲೂ ಶಾಸ್ತ್ರಿಯವರ ಮನೆಯಲ್ಲಿದೆ.

ಶಾಸ್ತ್ರಿಯವರ ಪುತ್ರ ಉದ್ಯೋಗಕ್ಕಾಗಿ ಇಲಖೆಯೊಂದಕ್ಕೆ ಅರ್ಜಿ ಹಾಕಿದ್ದರು. ಈ ಹಿಂದೆ ಮಗನನ್ನು ಸೈಂಟ್ ಸ್ಟೀಫನ್ ಕಾಲೇಜಿಗೆ ಸೇರಿಸುವಾಗ ಫಾರ್ಮ್‍ನಲ್ಲಿ ತಂದೆಯ ವೃತ್ತಿ ಕಾಲಂನಲ್ಲಿ ‘ ಸರಕಾರಿ ಸೇವಕ’ ಅಂತ ಶಾಸ್ತ್ರಿ ನಮೂದಿಸಿದ್ದರು. ಉದ್ಯೋಗದ ದಾಖಲಾತಿಗಾಗಿ ಸಾಮಾನ್ಯರೊಂದಿಗೆ ಕ್ಯೂನಲ್ಲಿ ನಿಂತಿದ್ದ ಶಾಸ್ತ್ರಿ ಪುತ್ರ ತಮ್ಮ ಸರದಿ ಬಂದಾಗ ಕಾಲೇಜು ಸರ್ಟಿಫಿಕೇಟ್ ಪರಿಶೀಲಿಸಿದ ಇಲಾಖೆಯ ಕ್ಲರ್ಕ್ ತಂದೆಗೇನು ಸರಕಾರಿ ಕೆಲಸ ಎಂದು ಪುತ್ರನಲ್ಲಿ ಪ್ರಶ್ನಿಸಿದರು. ಮಗ ತನ್ನ ತಂದೆ ದೇಶದ ‘ಪ್ರಧಾನ ಮಂತ್ರಿ’ ಎಂದಾಗ ಕ್ಲರ್ಕ್ ಬೆಚ್ಚಿ ಬಿದ್ದರು. ಅಂತಹ ಸರಳ ವ್ಯಕ್ತಿತ್ವ ದೇಶದ ದ್ವಿತೀಯ ಪ್ರಧಾನಿ ಲಲ್ ಬಹದ್ದೂರು ಶಾಸ್ತ್ರಿ ಅವರದ್ದಾಗಿತ್ತು. ಅವರ ಮನೆಯವರಿಗೂ ಅಂತಹುದೇ ಸರಳ ಜೀವನವನ್ನು ಕಲಿಸಿದ್ದರು.
ಸಂಗ್ರಹ

