ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ “ ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ”. ಹೀಗಾಗಿ ಕಷ್ಟ ಸಂಕಷ್ಟ ಕೀಟ ಕೋಟಲೆಗಳ ಭಯವೇಕೆ ಸಂಕಷ್ಟ ಬಂದರೆ ಅದರ ಹಿನ್ನಲೆಯಲ್ಲಿ ಅರಿತುಕೊಳ್ಳಬೇಕು. ಎಂಬ ಮಾತಿನಂತೆ ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಝೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಝೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಸೆ.16 ವಿಶ್ವ ಓಝೋನ್ ದಿನವೆಂದು ಆಚರಿಸಲಾಗುತ್ತದೆ.

ozone

“If earth is our mother, then Ozone is our father”  ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ, ಆದ್ದರಿಂದ ಭೂಮಿಯನ್ನು ಭೂ ತಾಯಿಗೆ ಹೋಲಿಸುತ್ತೇವೆ. ಅದೇ ರೀತಿ ಓಝೋನ್ ಪದರು ಸಹ ಜೀವಿಸಲು ಅಷ್ಟೇ ಮುಖ್ಯ. ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗಲಾರದು. ಜೀವಿಗಳು ಬದುಕಿ ಬಾಳಲು ಭೂಮಿ ಬೇಕು ಹಾಗೆಯೇ ಭೂಮಿ ಬದುಕಲು ಓಝೋನ್ ಬೇಕೇ ಬೇಕು. ಮಳೆಗಾಲದಲ್ಲಿ ಕೊಡೆ ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಝೋನ್ ಪದರ ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ (UV- Rays ) ಕಿರಣಗಳಿಂದ ರಕ್ಷಿಸುತ್ತದೆ. ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲ ಬಾರಿಗೆ ಗುರುತಿಸಲ್ಪಟ್ಟ ಓಝೋನ್ ಒಂದು ಭಿನ್ನವಾದ ರಾಸಾಯನಿಕ ಸಂಯುಕ್ತವಾಗಿ ‘ಕ್ರಿಸ್ಟಿಯನ್ ಫ್ರೆಟ್ರಿಕ್ ಸ್ಕಾನ್ ಬೀನ್’ ಎಂಬಾತನಿಂದ 1840 ರಲ್ಲಿ ಸೂಚಿಸಲ್ಪಟ್ಟಿತ್ತು. ಮಿಂಚಿನ ಬಿರುಗಾಳಿಗಳಲ್ಲಿನ ಒಂದು ವಿಲಕ್ಷಣವಾದ ವಾಸನೆಗೆ ಉಲ್ಲೇಖಿಸಲಾಗುವ “ಓಝೀನ್” (ವಾಸನೆ ಬೀರುವುದು) ಎಂಬ ಗ್ರೀಕ್ ಕ್ರಿಯಾಪದದ ಹೆಸರನ್ನು ಅವನು “ಓಝೋನ್” ಗೆ ಇರಿಸಿದ. ಓಝೋನ್ ಗೆ ಸಂಬಂಧಿಸಿದ ಸೂತ್ರವಾದ 03 ಎಂಬುದು” ಜಾಕ್ವೆಸ್-ಲೂಯಿಸ್ ಸೋರೆಟ್” ಎಂಬಾತನಿಂದ 1865 ರಲ್ಲಿ ನಿರ್ಣಯಿಸಲ್ಪಡುವವರೆಗೆ ಮತ್ತು ಸ್ಕಾನ್ ಬೀನ್ ಎಂಬಾತನಿಂದ 1867 ರಲ್ಲಿ ಧೃಢೀಕರಿಸಲ್ಪಡುವವರೆಗೆ ತೀರ್ಮಾನಿಸಲ್ಪಟ್ಟಿರಲಿಲ್ಲ.

ozone-5

1985 ರಲ್ಲಿ ಓಝೋನ್ ಪದರದಲ್ಲಿ ರಂಧ್ರ ಹಾಗೂ ಪದರ ತೆಳುವಾಗಿರುವುದು ಕಂಡುಬಂದಿತು. ಇದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿತ ವಿವಿಧ ದೇಶಗಳ ಸಕಾರದ ಮುಖ್ಯಸ್ತರು ಒಟ್ಟಾಗಿ ಸೇರಿ 1987ರ ಸೆ.16 ರಲ್ಲಿ ವಿಯೆನ್ನಾದಲ್ಲಿ ಓಝೋನ್ ಪದರ ರಕ್ಷಣೆಗಾಗಿ ಅಂತರಾಷ್ಟ್ರೀಯ ಸಮಾವೇಶ ನಡೆಯಿತು. ಓಝೋನ್ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಯವನ್ನು ಅಲ್ಲಿ ಕೈಗೊಳ್ಳಲಾಯಿತು. ಈ ಸಂಬಂಧದ “ ಮಾಂಟ್ರೆಲ್ ಪ್ರೊಟೊಕಾಲ್” ಗೆ 24 ದೇಶಗಳು ಸಹಿ ಹಾಕಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ಓಝೋನ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ ಹಾಗೂ 1994 ಸೆಪ್ಟೆಂಬರ್ 16 ರಂದು ನಡೆದ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಿ 1987 ರ ಸಪ್ಟೆಂಬರ್ 16 ರಂದು ಮಾಂಟ್ರಿಯಲ್ ಪ್ರೊಟೊಕಾಲ್ ಗೆ ಸಹಿ ಹಾಕಿರುವುದನ್ನು ನೆನಪಿಸಲು ಸೆ.16 ನ್ನು ವಿಶ್ವ ಓಝೋನ್ ದಿನ ಆಚರಿಸಲು ತೀರ್ಮಾನಿಸಿತು. ಇದರ ಉದ್ದೇಶ ಓಝೋನ್ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.

ozone-3

“Ozone is like your Heart, if broken, then you are Finish”. ಓಝೋನ್ ಪದರ 250 ರಿಂದ 305 ಡಾಬ್ಸನ್ ಯುನಿಟ್ಟಿಗೆ ನಷ್ಟು ದಪ್ಪ(ಗಟ್ಟಿ) ಇರಬೇಕು.ಆದರೆ ಈ ಹಿಂದೆ ಓಝೋನ್ ಪದರದಲ್ಲಿ ರಂಧ್ರವಾಗಿದೆ. ಅದರ ಸಾಂದ್ರತೆ ಕಡಿಮೆಯಾಗಿದೆ ಎಂದು ತಿಳಿದಾಗ ಕೇವಲ 90 ಡಾಬನ್ಸ್ ನಷ್ಟಿತ್ತು. “Ozone and climate, Restored by a world united”  ಇದೀಗ 2016 ರಲ್ಲಿ ವಿಶ್ವವೇ ಒಗ್ಗೂಡಿ ಓಝೋನ್ ಪದರ ರಕ್ಷಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆಯಾಗಿಸುವುದು. ಆಮ್ಲಜನಕದ 3 ಪರಮಾಣುಗಳು ಸೇರಿ ಓಝೋನ್(03) ಆಗುತ್ತದೆ.ವಾತಾವರಣದ ಮೇಲೆ ಭೂಮಿಯನ್ನು ಆವರಿಸುವ ಈ ಪದರವು ಅಪಾಯಕಾರಿಯದ ಸೂರ್ಯನಿಂದ ಬರುವ ಅತಿನೇರಳೆ ಕಿರಣವನ್ನು ಹೀರಿಕೊಳ್ಳುವುದರ ಮೂಲಕ ಜೀವಸಂಕುಲದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಭೂಮಿಯ ಮೇಲೆ ಸುಮಾರು 15 ಕಿ.ಮೀ. ದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಓಝೋನ್ ಪದರ ಭೂಮಿಯನ್ನು ಆವರಿಸಿದೆ.

ozone-2

ಓಝೋನ್ ಪದರಿನ ಮುಖ್ಯ ಕಾರ್ಯವೆಂದರೆ ಸೂರ್ಯನಿಂದ ಬಂದ 97-98% ಅತಿನೇರಳೆ ಕಿರಣಗಳನ್ನು ಹೀರಿಕೋಡು ಬೆಳಕಿನ ಕಿರಣಗಳನ್ನು ಮಾತ್ರ ಭೂಮಿ ಮೇಲೆ ಬೀಳುವಂತೆ ಮಾಡುತ್ತದೆ. ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳು ವಾತಾವರಣದಲ್ಲಿರುವ ಆಮ್ಲಜನಕದ(02)  ಮೇಲೆ ಬಿದ್ದಾಗ ಆಮ್ಲಜನಕ 2 ಅಣುಗಳಾಗಿ (0+0) ಬೇರ್ಪಡುತ್ತವೆ. ಬೇರ್ಪಡದೇ ಇದ್ದ ಆಮ್ಲಜನಕ (02) ಜೊತೆ ಮತ್ತೊಂದು ಅಣು ಸಂಯೋಗವಾಗಿ ಓಝೋನ್ (03) ಆಗುತ್ತದೆ. ಓಝೋನ್ ಪದರ ನಾಶವಾಗಲು ಕಾರಣ ಫ್ರಿಜ್ ಮತ್ತು ಕೋಲ್ಡ್ ಹೌಸ್ಗಳಲ್ಲಿ ಉಪಯೋಗಿಸುವ Chloro Floro Carbons (CFC’s) ಮತ್ತು ವಾಯುಮಾಲಿನ್ಯ (CFC’s) ಒಂದು ಅಣುವು ಓಝೋನ್ ನ 1,00,000 ಅಣುಗಳನ್ನು ನಾಶ ಮಾಡುತ್ತದೆ. ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ.  ಬಾಹ್ಯಕಾಶ ಸಂಶೋಧನೆ , ಉಪಗ್ರಹಗಳ ಉಡಾವಣೆಗೆ ಹಾರಿ ಬಿಡುವ ರಾಕೆಟ್ ಗಳಿಂದ ಹಾನಿ ಿದರ ಪರಿಣಾಮ ಅತಿಯಾದ ಮಳೆ, ಅತಿಯಾದ ಬರ, ಸಮುದ್ರ ಮಟ್ಟ ಏರಿಕೆ, ನದಿ ಪ್ರವಾಹಗಳು, ಭೂತಾಪ ಏರಿಕೆ, ಅತಿಯಾದ ಚಳಿ, ಅತಿಯಾದ ಶಾಖ, ಒಣಗುತ್ತಿರುವ- ಬರಿದಾದ ಕಾಡು ಚಂಡಮಾರುತಗಳ ಹೆಚ್ಚಳ ಇತ್ಯಾದಿ.

?????????

ಒಝೋನ್ ಪದರದ ರಕ್ಷಣೆಗಾಗಿ ಕೃಷಿಯಲ್ಲಿ ಕೀಟನಾಶಕ ಬಳಸುತ್ತಿರುವ ಮಿಥೈಲ್ ಬ್ರೋಮೈಡ್ ಗೆ ನಿಷೇಧ, ಅವಶ್ಯವಿದ್ದಾಗ ಮಾತ್ರ ವಾಹನ ಬಳಕೆ, ಅರಣ್ಯ ನಾಸ ತಡೆ ಗಟ್ಟಿ ಹಸಿರನ್ನು ಬೆಳೆಸಿ, ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು , ರೆಫ್ರೀಜರೇಟರ್ ನಲ್ಲಿ ಹಾಗೂ ಕೋಲ್ಡ್ ಹೌಸ್ ಗಳಲ್ಲಿ (CFC’s)ಯ ಬದಲು Hydro  Chloro Floro Carbons(HCFC’s)  ರಾಸಾಯನಿಕ ಉಪಯೋಗಿಸಬೇಕು.

ozone-6

“Save ozone layer else you may lie in no zone” ಓಝೋನ್ ಇಲ್ಲದ ಭೂಮಿಯು ಮೇಲ್ಛಾವಣಿ ಇಲ್ಲದ ಮನೆಯಂತೆ ಆದ್ದರಿಂದ ವಿಶ್ವ ಓಝೋನ್ ದಿನದಂದು ನಾವು ಪ್ರತಿಜ್ಞೆಯನ್ನು ಮಾಡಿ ನಾವು ಇಂದಿನಿಂದ ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರಿನ ನಾಶ ಮಾಡುವುದನ್ನು ನಿಲ್ಲಿಸೋಣ. ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿಟ್ಟುಕೊಂಡು ಹೇಗೆ ನಮ್ಮ ಹಿಂಂದಿನವರು ಓಝೋನ್ ಸಹಿತ ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟಿದ್ದಾರೆಯೋ ಅದೇ ರೀತಿ ನಾವು ಮುಂದಿನ ಪೀಳಿಗೆಗೆ ಓಝೋನ್ ಸಹಿತ ಭೂಮಿಯನ್ನು ಕೊಡೋಣ.ಈ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ವಿಗಳಾಗೋಣ.

By suddi9

Leave a Reply

Your email address will not be published. Required fields are marked *