ನೇಪಾಳ ಮತ್ತು ಸಿಕ್ಕಿಂ ಗಡಿ ಪ್ರದೇಶದಲ್ಲಿರುವ ಅತ್ಯಂತ ಸುಂದರವೂ ಅಷ್ಟೇ ದುರ್ಗಮವೂ ಆದ ಪರ್ವತ ಶಿಖರ “ಕಾಂಚನ ಗಂಗಾ”. ಇದು ಪ್ರಪಂಚದ ಅತ್ಯುನ್ನತ ಪರ್ವತ ಶಿಖರಗಳಲ್ಲಿ ಮೂರನೆಯದು. ಟಿಬೆಟಿಯನ್ನರು ಈ ಶಿಖರವನ್ನು “ಕಾಂಗ್-ಚೆನ್-ಡ್ಜೊ-ನ್ಗ”, ಎಂದು ಕರೆಯುತ್ತಾರೆ. ಸಿಕ್ಕಿಂ ಭಾಷೆಯಲ್ಲಿ ಇದರ ಅರ್ಥ ‘ಪಂಚಮಹಾ ಹಿಮ ಸಂಚಯ’ ಎಂದಾಗುತ್ತದೆ. ಹದಿನೆಂಟನೆಯ ಶತಮಾನದಲ್ಲಿ “ರಿನ್ ಜಿನ್ ನಾಮ ಗ್ಯಾಲ್” ಎಂಬವನು ಮೊದಲ ಬಾರಿಗೆ ಕಾಂಚನ ಗಂಗಾದ ನಕ್ಷೆಯನ್ನು ಸಿದ್ಧಪಡಿಸಿದ. ಅನಂತರ ಹಲವಾರು ಮಂದಿ ಐರೋಪ್ಯ ಅನ್ವೇಷಕರರು ಈ ಭೂಭಾಗವನ್ನು ಸಂದರ್ಶಿಸಿ ಇಲ್ಲಿನ ಭೌಗೋಳಿಕ ವಿವರಗಳನ್ನು ಬರೆದಿಟ್ಟರು.

kanchana-3

kanchana-5

28,209 ಅಡಿ ಎತ್ತರದ ಈ ಶಿಖರವನ್ನು ಏರಲು 1905 ರಿಂದ ಈಚೆಗೆ ಹಲವಾರು ಪ್ರಯತ್ನಗಳು ನಡೆದವು. ಇವುಗಳಲ್ಲಿ “ಪಾಲ್ ಬವರ್” ಹಾಗೂ ಆತನ ಸಂಗಡಿಗರು ಗಮನಾರ್ಹ. 1929 ಮತ್ತು 1931 ರಲ್ಲಿ ಬವರ್ ವiತ್ತು ಆತನ ಸಂಗಡಿಗರು ಕಾಂಚನ ಗಂಗಾವನ್ನು ಏರುವ ಸಾಹಸ ನಡೆಸಿದರು. “ಜೆಮು” ಎಂಬ ಹಿಮನದಿ ಇರುವ ಪೂರ್ವದಿಕ್ಕಿನಿಂದ ಅವರ ಪ್ರಯತ್ನಗಳು ನಡೆದವು. ಈ ಪ್ರಯತ್ನಗಳಲ್ಲಿ ಬವರ್ ಮತ್ತು ಆತನ ಗುಂಪಿಗೆ 25,263 ಅಡಿಗಳಷ್ಟು ಎತ್ತರವನ್ನು ತಲುಪುವುದಷ್ಟೇ ಸಾಧ್ಯವಾಯಿತು.

kanchana-2

kanchana-1

ಕಾಂಚನ ಗಂಗಾವನ್ನು ಮೊದಲ ಬಾರಿಗೆ ಏರಿದ ಕೀರ್ತಿ ‘ಚಾಲ್ರ್ಸಇವಾನ್ಸ್’ ನಿಗೆ ಸಲ್ಲುತ್ತದೆ. ಇವನ ನೇತೃತ್ವದ ಬ್ರಿಟನ್ನಿನ ಪರ್ವತಾರೋಹಿ ತಂಡವು ಕಾಂಚನ ಗಂಗಾ ಶಿಖರದ 28,202 ಅಡಿಗಳಷ್ಟು ಎತ್ತರವನ್ನು ಏರಿ ಅಲ್ಲಿಂದ ಹಿಂದಿರುಗಿತು. ಸಿಕ್ಕಿಂ ಜನರು ಅತ್ಯಂತ ಪವಿತ್ರವೆಂದು ನಂಬಿದ ಕಾಂಚನ ಗಂಗಾದ ಶಿಖರಾಗ್ರವನ್ನು ಪಾದಸ್ಪರ್ಶದಿಂದ ಅಪವಿತ್ರಗೊಳಿಸಲಾಗದು ಎಂಬ ಕಾರಣಕ್ಕಾಗಿ ಮಿಕ್ಕ ಏಳು ಅಡಿಗಳಷ್ಟು ಎತ್ತರವನ್ನು ಏರದೇ ತಂಡವು ಹಿಂದಿರುಗಿತು ಎಂಬಂತೆ ‘ ಚಾಲ್ರ್ಸ’ ನ ಹೇಳಿಕೆಗಳಿವೆ.

kanchana-4

kanchana-6

ತಾಲುಂಗ್, ಯಾಲೂಂಗ್, ಜೆಮು, ಮತ್ತು ಕಾಂಚನಾ ಗಂಗಾ ಎಂಬ 4 ಹಿಮನದಿಗಳು ಹರಿಯುವ ಕಾಂಚನಾ ಗಂಗಾ ಶಿಖರಗಳು ದೂರದಿಂದ ನೋಡುವವರಿಗೆ ದೊಡ್ಡ ಶಿಲುಬೆಯೊಂದನ್ನು ನಿಲ್ಲಿಸಿದಂತೆ ಕಾಣುತ್ತದೆ. ಭಾರತದ ಗಿರಿಧಾಮಗಳಲ್ಲಿ ಒಂದಾದ ಡಾರ್ಜಿಲಿಂಗ್ ನಿಂದ ವಾಯವ್ಯ ದಿಕ್ಕಿನತ್ತ ದೃಷ್ಟಿ ಹರಿಸಿದರೆ 72 ಕಿ.ಮೀ. ದೂರದ ಕಾಂಚನ ಗಂಗಾ ಶಿಖರಗಳ ರಮಣೀಯ ದೃಶ್ಯಗಳನ್ನು ಕಾಣಬಹುದು.

ಎಚ್.ನಾರಯಣ ರಾವ್

By suddi9

Leave a Reply

Your email address will not be published. Required fields are marked *