ಎರಡು ತುಂಡು ಬಟ್ಟೆ ಬಿಟ್ಟರೆ ಮೈಮೇಲೆ ಮತ್ತೇನೂ ಧರಿಸದ, ಯೋಗ ಎಂಬ ಪುರಾತನ ಕಲೆಯನ್ನು ಹೇಳಿಕೊಡುವ ಸಾಮಾನ್ಯ ಸನ್ಯಾಸಿ, ಯೋಗ ಗುರು ಇಂದು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಬ್ರ್ಯಾಂಡ್ ಆಗಿ , ದೇಶೀಯ ಉತ್ಪನ್ನಗಳ ಐಕಾನ್ ಆಗಿ, ಹೊಸ ಬೃಹತ್ ಸಾಮ್ರಾಜ್ಯ ಕಟ್ಟಿದ ಸಂತರಾಗಿ ದೇಶದ ಉದ್ದಗಲಕ್ಕೆ, ದೇಶವನ್ನು ಮೀರಿ ಬೆಳೆದಿದ್ದಾರೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಶದ ಹಳ್ಳಿ ಹಳ್ಳಿಗಳನ್ನು ಸದ್ಯದಲ್ಲಿಯೇ ತಲುಪಲಿವೆ.

patanjali-2

ಇತ್ತೀಚೆಗೆ ಬೆಂಗಳೂರಿನ ಮಾಲ್ ಒಂದರಲ್ಲಿ ಬೃಹತ್ ಸೂಪರ್ ಬಜರ್ ಗೆ ಹೋಗಿದ್ದೆ. ಬಾಬಾರಾಮ್ ದೇವ ಅವರ ಸಣ್ಣ ಕಟೌಟ್ ಕಾಣಿಸಿತು. ಕುತೂಹಲದಿಂದ ಹತ್ತಿರ ಹೋದರೆ ಪತಂಜಲಿ ಪ್ರಾಡೆಕ್ಟ್ ಗಳನ್ನು ಒಪ್ಪವಾಗಿ ಜೋಡಿಸಿದ್ದರು. ನಾಲ್ಕು ರ್ಯಾಕ್ ಗಳಲ್ಲಿ ಸುಮಾರು ಎಂಬತ್ತಕ್ಕೂ ವಿವಿಧ ಪ್ರಾಡೆಕ್ಟ್ ಗಳಿದ್ದವು. ಆ ಪೈಕಿ ಬಿಸ್ಕತ್, ಪೇಸ್ಟ್, ಚೂರ್ಣ, ಲೇಹ, ಮೊಡವೆ ಮುಲಾಮ್, ಸಾಬೂನ್, ಜೈಸ್, ಶ್ಯಾಂಪೂ, ಡಿಟರ್ಜೆಂಟ್, ತುಪ್ಪ ಎಣ್ಣೆ, ಸೆರಲ್ಸ್ ಕೆಚೆಪ್, ಖಾರ ತಿನಿಸ್, ಶಾವಿಗೆ, ನೂಡಲ್ಸ್, ಮುಂತಾದವುಗಳಿದ್ದವು. ಪತಂಜಲಿ ಪ್ರಾಡೆಕ್ಟ್ ಗಳ ಬಗ್ಗೆ ಪತ್ರಿಕೆಗಳಲ್ಲಿ ನಾನು ಜಾಹಿರಾತುಗಳನ್ನು ಗಮನಿಸಿದ್ದೆ. ಆದರೆ ಅವು ಮಾರುಕಟ್ಟೆಯನ್ನು ಈ ಪ್ರಮಾಣದಲ್ಲಿ ಆವಸಿರಬಹುದೆಂದು ಊಹಿಸಿರಲಿಲ್ಲ. ಗಮನಾರ್ಹ ಸಂಗತಿಯೇನೆಂದರೆ, ಗ್ರಾಹಕರು ಮುಗಿಬಿದ್ದು ಆ ಎಲ್ಲ ಪ್ರಾಡೆಕ್ಟ್ ಗಳನ್ನು ಖರೀದಿಸುತ್ತಿದ್ದರು.

patanjali-4

ಕೆಲವರಂತೂ ಬಾಬಾ ರಾಮದೇವ ಕಟೌಟ್ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಕೋಲ್ಗೇಟ್, ಪೆಪ್ಸೊಡೆಂಟ್, ಟೂಥ್ ಪೇಸ್ಟ್ ಗಳ ಬದಲು ಪತಂಜಲಿಯ ದಂತಕಾಂತಿ ಬಹಳ ಜೋರಾಗಿ ಖರ್ಚಾಗುತ್ತಿರುವುದಾಗಿ ಸೇಲ್ಸ್ ಮ್ಯಾನ್ ತಿಳಿಸಿದ. ‘ ಪತಂಜಲಿ ಉತ್ಪನ್ನಗಳು ಹೊಸ ಕ್ರೇಜ್ ಸ್ಟಾರ್. ಕಳೆದ ಐದಾರು ತಿಂಗಳುಗಳಲ್ಲಿ ಬಹುರಾಷ್ಟ್ರೀಯ ಕಂಪೆನಿ ಉತ್ಪನ್ನಗಳಿಗಿಂತ ಪತಂಜಲಿ ಕಂಪೆನಿಯ ಎಲ್ಲಾ ಸಾಮಾನುಗಳು ಭಾರೀ ಪ್ರಮಣದಲ್ಲಿ ಮಾರಾಟವಾಗುತ್ತಿವೆ. ಈ ಪೈಕಿ ಹೊಸ ಗ್ರಾಹಕರು ಹಾಗೂ ಮರುಗ್ರಾಹಕರು ಸೇರಿದ್ದಾರೆ. ಕುತೂಹಲದ ಅಂಶವೆಂದರೆ ಪತಂಜಲಿ ಕಂಪೆನಿ ಪ್ರತಿ ತಿಂಗಳು ಕನಿಷ್ಟ ಮೂರು – ನಾಲ್ಕು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತದೆ. ಪ್ರತಿ ಉತ್ಪನ್ನದಲ್ಲೂ ಭಾರತೀಯತೆ ದೇಶೀ ಬಳಕೆಯ ವಸ್ತುಗಳಿಗೆ ಮಹತ್ವ ಕೊಡಲಾಗುತ್ತದೆ. ಜತೆಗೆ ಸೆರೆಲ್ಸ್ ನೂಡಲ್ಸ್ ನಂಥ ವಸ್ತುಗಳನ್ನೂ ತಯಾರಿಸಿ ಪ್ರತಿಸ್ಪರ್ಧಿ ಕಂಪೆನಿಗಳ ಜತೆಗೆ ಪೈಪೋಟಿಗೆ ಇಳಿದಿದೆ ಎಂದು ವಿವರಿಸಿದ. ನನಗೆ ನಂತರ ಗೊತ್ತಾಗಿದ್ದೇನೆಂದರೆ ಪತಂಜಲಿ ಸಂಸ್ಥೆಯಿಂದ ಸುಮಾರು ನಾನೂರು ಬೇರೆ ಬೇರೆ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.

patanjali

ಈ ವರ್ಷದ ಕೊನೆಯೊಳಗೆ ಐನೂರು ಉತ್ಪನ್ನ ಬಿಡುಗಡೆ ಮಾಡುವುದು ಗುರಿಯಂತೆ. ಇವುಗಳಲ್ಲಿ  ಪತಂಜಲಿಯ ಔಷಧಿಗಳು ಸೇರಿಲ್ಲ. ಇನ್ನು ಕೆಲವೇ ದಿನಗಳಲ್ಲಿ ದಿನಬಳಕೆ ಎಲ್ಲಾ ವಸ್ತುಗಳು, ಖಾದ್ಯಗಳು, ಪೇಯಗಳು, ದೇಹಸೌಷ್ಠವ, ಸೌಂದರ್ಯವರ್ಧಕ, ಶಕ್ತಿವರ್ಧಕ, ಗೃಹಬಳಕೆ ಉತ್ಪನ್ನಗಳೆಲ್ಲ ಮಾರುಕಟ್ಟೆಗೆ ಲಗ್ಗೆ ಹಾಕಲಿವೆ. ಪತಂಜಲಿ ಪ್ರಾಡೆಕ್ಟ್ ಗಳಿಂದ ಬಹುರಾಷ್ಟ್ರೀಯ ಕಂಪೆನಿಗಳು ಬೆಚ್ಚಿ ಬಿದ್ದಿವೆ. ತಮಾಷೆಯೇನೆಂದರೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರೆಲ್ಲಾ ಪತಂಜಲಿ ಸೇರುತ್ತಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಬಾಬಾ ರಾಮದೇವ ಅವರು ಎಂಟು ಬೃಹತ್ ಹಾಗೂ ಐವತ್ತು ಸಣ್ಣ ಪ್ರಮಾಣದ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಬೃಹತ್ ಯೋಜನೆಗಳೊಂದರಿಂದಲೇ ಮಾರಾಟ  50 ಸಾವಿರ ಕೋಟಿ ರುಪಾಯಿ ಮೀರಲಿದೆಯೆಂದು ಬಾಬಾ ಘೋಷಿಸಿರುವುದು ದೊಡ್ಡ ದೊಡ್ಡ ಕಂಪೆನಿಗಳ ನಿದ್ದೆಗೆಡಿಸಿವೆ.

patanjali-3

ರಾಮ್ ದೇವ್ ಗೆ ಇವೆಲ್ಲ ಹೇಗೆ ಸಾಧ್ಯ? ನೀವು ಯೋಗ ಮಾಡುವ ಸನ್ಯಾಸಿ ಈ ಪವಾಡ ಹೇಗೆ? ಎಂದು ಕೆಳಿದರೆ ಭಾರತದಲ್ಲಿ ಅಂಥ ಅಪರಿಮಿತ ಅವಕಾಶವಿದೆ. ಇಷ್ಟು ವರ್ಷ ನಮ್ಮನ್ನು ಬಹುರಾಷ್ಟ್ರೀಯ ಕಂಪೆನಿಗಳು ಕೊಳ್ಳೆ ಹೊಡೆದವು. ನಮಗೆ ಗೊತ್ತೇ ಆಗಲಿಲ್ಲ. ನಮ್ಮ ದೇಶವಸಿಗಳ ಹಣ ಹೊರಧೇಶಿಯರ ಪಾಲಗಬೇಕೇ? ಪತಂಜಲಿ ಸಂಸ್ಥೆಯ ಎಲ್ಲ ಲಾಭವನ್ನು ಶಿಕ್ಷಣಕ್ಕೆ ಮುಡಿಪಾಗಿಡುತ್ತೇನೆ. ಕೆರೆಯ ನೀರು ಕೆರೆಗೆ ಚೆಲ್ಲುತ್ತೇನೆ.

ವಿಶ್ವದ ನೂರು ಅತ್ಯುತ್ತಮ ವಿಶ್ವವಿದ್ಯಾಲಯಗಳ ಪೈಕಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯವೂ ಇಲ್ಲ. ನಾವು ಆರಂಭಿಸಲಿರುವ ವಿಶ್ವವಿದ್ಯಾಲಯ ವಿಶ್ವಶ್ರೇಷ್ಠ ಮಟ್ಟದಲ್ಲಿರುತ್ತದೆ, ಎಂದು ಬಾಬಾ ರಾಮದೇವ ತಮ್ಮ ಬಿಜಿನೆಸ್‍ನ ಉದ್ದೇಶ ವ್ಯಾಪ್ತಿ ಆಶಯ ಹಗೂ ಗುರಿಯನ್ನು ಈಗಾಗಲೇ ಹೇಳಿದ್ದಾರೆ. ಅಂದ ಹಾಗೆ ಪತಂಜಲಿ ಯುನಿ ಲಿವರ್‍ನಂಥಹ ಬಲಾಢ್ಯ ಕಂಪೆನಿಯನ್ನು ಪೈಪೋಟಿಯಲ್ಲಿ ಹಿಂದಿಕ್ಕಿದೆ. ಎರಡು ತುಂಡು ಬಟ್ಟೆ ಬಿಟ್ಟರೆ ಮೈಮೇಲೆ ಮತ್ತೇನೂ ಧರಿಸಿದ ಯೋಗ ಎಂಬ ಪುರಾತನ ಕಲೆಯನ್ನು ಹೇಳಿಕೊಡುವ ಸಾಮಾನ್ಯ ಸನ್ಯಾಸಿ ಯೋಗಗುರು ಇಂದು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಬ್ರ್ಯಾಂಡ್ ಆಗಿ ದೇಶೀಯ ಉತ್ಪನ್ನಗಳ ಐಕಾನ್ ಆಗಿ ಹೊಸ ಬೃಹತ್ ಸಾಮ್ರಾಜ್ಯ ಕಟ್ಟಿದ ಸಮೇತರಾಗಿ ದೇಶದ ಉದ್ದಗಲಕ್ಕೆ ದೇಶವನ್ನು ಮೀರಿ ಬೆಳೆದಿದ್ದಾರೆ.

ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಶದ ಹಳ್ಳಿ ಹಳ್ಳಿಗಳನ್ನು ಸದ್ಯದಲ್ಲಿಯೇ ತಲುಪಲಿವೆ, ಪತಂಜಲಿ ಸಂಸ್ಥೆಯಿಂದಾಗಿ ಬೇವು, ಜೇನುತುಪ್ಪ, ಅರಿಶಿಣ, ಅಮೃತ ಬಳ್ಳಿ, ಲಿಂಬು, ನೆಲ್ಲಿಕಾಯಿ, ಬೇರು- ತೊಗಟೆ, ಜಾಯಿಕಾಯಿ, ಸುವರ್ಣ ಗೆಡ್ಡೆ, ಕಾಳು ಮೇಣಸು, ಏಲಕ್ಕಿ, ಹಾಲು, ತುಪ್ಪ ಬೆಣ್ಣೆ ,ಕಷಾಯಬಳ್ಳಿ ಔಷಧೀಯ ಗುಣವುಳ್ಳ ಸಸ್ಯಗಳಿಗೆಲ್ಲಾ ಭಾರೀ ಬೆಲೆ ಬಂದಿದೆ. ದೇಶದಲ್ಲಿ ಲಭ್ಯವಿರುವ ನೆಲ್ಲಿಕಾಯಿ ಮಾವಿನಕಾಯಿಯನ್ನು ಒದಗಿಸುವ ತಾಕತ್ತು ನಿಮಗಿದ್ದರೆ ಪತಂಜಲಿ ಸಂಸ್ಥೆ ಮುಂದಿನ ಐದು ವರ್ಷ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧ. ಇದು ಮಾತ್ರ ಅಲ್ಲ ಅಮಟೆ ಕಾಯಿಯೋ, ಅಪ್ಪೆ ಮಿಡಿಯೋ, ಕಳಲೆಯೋ ಹೀಗೆ ಅಪರೂಪದ ಸಾಮಾನುಗಳನ್ನು ಯಾರಾದರೂ ಪೂರೈಸುವುದಾದರೆ ಸಾರಾಸಗಟವಾಗಿ ಪತಂಜಲಿ ಖರೀದಿಸುತ್ತದೆ.

ಶೇ.57 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದ ಕೋಲ್ಗೇಟ್ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಬರೀ ಶೇ.3.7 ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಭಾರತದಲ್ಲಿ ಕೋಲ್ಗೇಟ್ಗಳಿಗೆ ಈ ಪರಿ ಏಟನ್ನು ಯಾರು ನೀಡಿರಲಿಲ್ಲ. ದಂತಕಾಂತಿ ಮುಂದೆ ಕೋಲ್ಗೇಟ್ ಪತರಗುಟ್ಟಿದೆ. ನೋಡ್ತಾ ಇರಿ ನಾನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಶೀಷಾಸನ ಮಾಡುವದು ಹೇಗೆ ಎಂಬುವುದನ್ನು ಕಲಿಸುತ್ತೇನೆ ಎಂದು ಬಾಬಾ ರಾಮ್ ದೇವ್ ಹೇಳಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ.

ಪತಂಜಲಿಯ ಯೋಗ ಪೀಠ ಟ್ರಸ್ಟ್, ಆಸ್ಪತ್ರೆ , ಶಾಲೆ, ಹೈಸ್ಕೂಲ್, ಕಾಲೇಜು, ಯೋಗ ಕೇಂದ್ರಗಳನ್ನು ನಡೆಸಿಕೊಂಡು ಹೋಗುತ್ತಿದ್ದರೆ ಪತಂಜಿಲಿ ಆಯುರ್ವೆದ ಗ್ರಾಹಕ ಬಳಕೆ ವಸ್ತುಗಳ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿಕೊಂಡಿದೆ. ಪತಂಜಲಿ ಆಯರ್ವೆದ ಎಂಬ ಕಾರ್ಪೊರೇಟರ್ ಕಂಪೆನಿಗೆ ಬಾಬಾ ರಾಮ್ ದೇವ್ ಅವರೇ ಚೇರ್ಮನ್ ಮತ್ತು ಸಿಇಓ ಹಾಗಂತ ಅವರು ಹೇಳಿದ್ದೇ ಅಂತಿಮ ಎನ್ನುವಂತಿಲ್ಲ. ಅವರಿಗೆ ಎಲ್ಲಾ ವಿಷಯಗಳ ಬಗ್ಗೆ ಮಾರ್ಗ ದರ್ಶನ ಮಾಡಲು ನುರಿತ ವಿಷಯ ಪರಿಣಿತ ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ಅವರ ಎರಡು ಕೈಗಳಿದ್ದಂತೆ. ಎಲ್ಲ ವಿಭಾಗಗಳನ್ನೂ ನೀಡಿಕೊಳ್ಳಲು ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಸ್ವಯಂ ಸೇವಾಕರ್ತರ ಪಡೆಯಿದೆ.

ಹರಿದ್ವಾರದಲ್ಲಿರುವ ಪತಂಜಲಿ ಕ್ಯಾಂಪಸ್ಸಿನಲ್ಲಿ ಆಯರ್ವೇದ ಫ್ಯಾಕ್ಟರಿ ಸಂಶೋಧನಾ ಕೇಂದ್ರ ತುಪ್ಪ ಸಂಸ್ಕರಣ ಘಟಕ ಒಂದು ವಿಶ್ವವಿದ್ಯಾಲಯ ಎರಡು ಗುರುಕುಲ ಗೋಶಾಲೆ, ಭಾರತಾ ಮಾತಾ ನಮನ ಸ್ಥಳ, ಸ್ಮಾರಕ ಫುಡ್ ಪಾರ್ಕ್, ಆಹಾರ ಪರೀಕ್ಷಾ ಪ್ರಯೋಗಾಲಯ, ಹೊಸ ರುಚಿ ತಯಾರಿಕ ಘಟಕಗಳಿವೆ. ಸುಮಾರು 15 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ 350 ರಿಸರ್ಚ್ ಸ್ಕಾಲರ್ ಗಳು ಹರ್ಬಲ್ ಮೆಡಿಸಿನ್ ಯೋಗ ಆಯುರ್ವೇದ ಪುರಾತನ ಶಾಸನ ಅಧ್ಯಯನ ಹೋಂ ಕೇರ್ ಆಹಾರ ತಂತ್ರಜ್ಞಾನ ನ್ಯಾಚುರಪತಿ ಕಾಸ್ಮೆಟಿಕ್ಸ್ ಸಂಶೋಧನೆ ಮಾಡಿದ ನೂರಕ್ಕೂ ಹೆಚ್ಚು ಪಿ.ಎಚ್. ಡಿ ಪದವೀಧರರಿದ್ದಾರೆ. 30 ಸಾವಿರದಿಂದ ಮೂರುವರೆ ಲಕ್ಷ ರೂಪಾಯಿನ ತನಕ ಸಂಬಳ ಪಡೆಯುತ್ತಾರೆ. ಇದಲ್ಲದೇ ಹರಿದ್ವಾರದಲ್ಲಿ ಐದು ಮಧ್ಯ ಪ್ರದೇಶದಲ್ಲಿ 2 ರಾಜಸ್ತನದಲ್ಲಿ 3 ಫ್ಯಾಕ್ಟರಿಗಳಿವೆ. ರಾಮದೇವ ಅವರ ಬಿಜಿನೆಸ್ ಸಾಮ್ರಾಜ್ಯದ ಕೇಂದ್ರಬಿಂದುವೆಂದರೆ ಫುಡ್ ಪಾರ್ಕ್ಗಳು. ಅಲ್ಲಿ ಯಾವ ಹೊಸ ಫ್ರಾಡೆಕ್ಟ್ ಗಳನ್ನು ತಯಾರಿಸಬೇಕು. ಹೇಗೆ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಸಾಕಷ್ಟು ಚಿಂತನ- ಮಂಥನಗಳಗುತ್ತವೆ.

ಬಾಬಾ ಅವರ ಬಿಜಿನೆಸ್ ಸಾಮ್ರಾಜ್ಯ ಕಲ್ಪನೆ ಅಂದಾಜಿಗೆ ನಿಲುಕದಂತೆ ಬೆಲೆಯುತ್ತದೆ. ಪತಂಜಲಿ ಆಯುರ್ವೇದಿಕ್ ಲಿಮಿಟೆಡ್, ಪತಂಜಲಿ ಬಿಸ್ಕತ್, ಪತಂಜಲಿ ಆರೋಮ್ಯಾಟಿಕ್ಸ್ , ಪ್ರೈವೇಟ್ ಲಿಮಿಟೆಡ್, ಪತಂಜಲಿ ಮಧುರಂ ಉದ್ಯೋಗ ಪ್ರೈವೇಟ್, ಪತಂಜಲಿ ಪರಿಧನ್ ಪ್ರೈವೇಟ್ ಲಿಮಿಟೆಡ್, ಪತಂಜಲಿ ಪರಿವಾಹನ ಪ್ರೈವೇಟ್ ಲಿಮಿಟೆಡ್, ಪತಂಜಲಿ ಆರೋಗ್ಯ ಪ್ರೈವೇಟ್ ಲಿಮಿಟೆಡ್, ಪತಂಜಲಿ ಫುಡ್ ಮತ್ತು ಹರ್ಬಲ್ ಪಾರ್ಕ್ ಲಿಮಿಟೆಡ್, ಪತಂಜಲಿ ಆಗ್ರೋ ಹರ್ಬಲ್, ರಿಸರ್ಚ ಪ್ರೈವೇಟ್ ಲಿಮಿಟೆಡ್ ಹೀಗೆ ಹಲವು ಸಂಸ್ಥೆಗಳು ದಿನದಿಂದ ದಿನಕ್ಕೆ ಹತ್ತಾರು ದಿಕ್ಕುಗಳಲ್ಲಿ ನಾಗಾಲೋಟದಿಂದ ಸಂಸ್ಥೆಯನ್ನು ಬೆಳೆಸುತ್ತಿವೆ. ಇಂದು ಬಾಬಾ ರಾಮದೇವ ಯಾವುದೇ ಪ್ರಸ್ತಾವನೆ ಸಲ್ಲಿಸಿದರೂ ಯಾವ ರಾಜ್ಯ ಸರ್ಕಾರಗಳು ಇಲ್ಲವೆನ್ನುತ್ತಿಲ್ಲ. ಪತಂಜಲಿ ಯೋಗಪೀಠ ಸ್ಥಾಪಿಸಲು ಉದ್ದೇಶಿಸಿರುವ ಕಿತ್ತಲೆ ಹಣ್ಣಿನ ಸಂಸ್ಕರಣಾ ಘಟಕಕ್ಕೆ ಮಹಾರಾಷ್ಟ್ರ ಸರಕಾರ 600 ಎಕರೆ ಭೂಮಿ ನೀಡುತ್ತದೆ.

ಆ ಯೋಜನೆಗೆ ಬಾಬಾ ರಾಮದೇವ ಅವರು 2000 ಕೋಟಿ ರುಪಾಯಿ ತೊಡಗಿಸುತ್ತಿದ್ದಾರೆ. ನಮ್ಮ ಸಾಧು ಸಂತರು ಸನ್ಯಾಸಿಗಳು ಧರ್ಮ ಆಧ್ಯಾತ್ಮದಲ್ಲಿ ಭಾರತದ ಹಿರಿಮೆಯನ್ನು ಜಗತ್ತಿಗೆ ತೋರಿಸಿದ್ದರು. ಆದರೆ ಯೋಗವನ್ನೇ ಉಸಿರಾಡುವ ಸಾಮಾನ್ಯ ಸನ್ಯಾಸಿಯೊಬ್ಬರು ವ್ಯಾಪಾರ ವ್ಯವಹಾರದಲ್ಲೂ ವಿದೇಶಿಯರಿಗರ ಪ್ರಬಲ ಪ್ರತಿಸ್ಪರ್ಧೆ ಒಡ್ಡುತ್ತಾ ಅಸಾಮಾನ್ಯವಾದುದನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಸನ್ಯಾಸಿಗಳಿಗೆ ವಜ್ರ್ಯವಾಗಿದ್ದ ಬಿಜಿನೆಸ್ನಲ್ಲಿ ಅಪ್ರತಿಮ ಸಾಧನೆ ಮೆರೆದಿದಾರೆ. ಸದ್ಯದಲ್ಲಿಯೇ ಬಾಬಾ ರಾಮದೇವ ಅವರು ಜೀ ತೋಟ್ಟು  ಹೊಸ ಫೊಸ್ ಕೊಟ್ಟರೂ ಅಚ್ಚರಿ ಇಲ್ಲ.

ಲೇಖಕರು: ವಿಶ್ವೇಶ್ವರ ಭಟ್

By suddi9

Leave a Reply

Your email address will not be published. Required fields are marked *