ಕೈಕಂಬ: ಅಂದು ಜೂನ್ 18, 2013. ಜೋರಾಗಿ ಮಳೆ ಸುರಿಯುತ್ತಿತ್ತು. ಬಜ್ಪೆ ಸಮೀಪದ ಜಂಕ್ಷನ್ನಿನ ಬಹುಮಹಡಿ ಕಟ್ಟಡದ ಹಿಂದೆ ಕಟ್ಟಲಾಗಿದ್ದ ಬಹುದೊಡ್ಡ ಬಹುಮಹಡಿ ಕಟ್ಟಡದ ಆವರಣ ಗೋಡೆ ತಡರಾತ್ರಿ ಕುಸಿತಗೊಂಡಿತ್ತು. ಆ ಬಹುಮಹಡಿ ಕಟ್ಟಡದ ಬಹು ವರ್ಷಗಳಿಂದ ಮನೆಕಟ್ಟಿಕೊಂಡು ಬಂದಿದ್ದ ತೊಟ್ಟಿಲಗುರಿಯ ಮನೆಯವರ ಕಟ್ಟಡ ಕುಸಿದು ನಾಲ್ಕು ಮಂದಿ ಸಜೀವ ಮಣ್ಣುಪಾಲಾದ ಘಟನೆಗೆ ಒಂದು ವರ್ಷವಾಗುತ್ತಾ ಬಂದಿದೆ. ಆದರೆ ಸಂತ್ರಸ್ತರು ಮಾತ್ರ ಪಂ. ತೋರಿಸಿದ ಜಾಗದಲ್ಲಿ ಯಾತನಾಮಯ ಜೀವನ ಸಾಗಿಸುತ್ತಾ ಬಂದಿರುವುದು ದುರಂತ.

 

17 bajpe 1

 

 

18 vp bajape 1 18 vp bajape  6

18vp bajape3bajpe photo (2) bajpe photo (3)
54bajpe photo (6)ಈ ಘಟನೆಯಲ್ಲಿ ತೊಟ್ಟಿಲಗುರಿಯಲ್ಲಿ ಬಹುವರ್ಷಗಳಿಂದ ವಾಸವಾಗುತ್ತಾ ಬಂದಿದ್ದ ಕೊರಗ ಕಮ್ಯುನಿಟಿಗೆ ಸೇರಿದ್ದ ಸುಂದರಿ(55), ಅವರ ಪತಿ ಸುಂದರ(60), ನೆರೆಮನೆಯ ಬಾಲಕಿ ಚೈತ್ರ (13) ಹಾಗೂ ಬೇಬಿ(50) ಇವರು ಸಜೀವ ಮಣ್ಣುಪಾಲಾಗಿ ಇಂದಿಗೆ ಒಂದು ವರ್ಷವಾಗಿದೆ.ೆ. ಈ ಘಟನೆಯಲ್ಲಿ ಅಶ್ವಿನಿ(18), ಆಶಾ(29), ಅಶ್ವತ್ಥ್(10), ಶೇಖರ(34) ಲೀಲಾ (30), ಹಾಗೂ ಶಾಂಭವಿ (28) ಗಂಭೀರವಾಗಿ ಗಾಯಗೊಂಡಿದ್ದರು.
ಒಂದು ಕಾಲದಲ್ಲಿ ತೊಟ್ಟಿಲಗುರಿ ಜೀವರಕ್ಷಕ ತಾಣವಾಗಿತ್ತು. ಜೀವಕಳೆದುಕೊಳ್ಳಲು ಸನ್ನಿಹಿತವಾದವರು ತೊಟ್ಟಿಲಗುರಿಯಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತಿದ್ದ ನೀರಿಗೆ ತಲೆಯೊಡ್ಡಿದರೆ ಮರುಜೀವ ಪಡೆಯುತ್ತಿದ್ದರೆಂಬ ಪ್ರತೀತಿ ಇತ್ತು. ಆದರೆ ಈ ದುರಂತ ನಡೆದು ಒಂದುವರ್ಷವಾಗುತ್ತಾ ಬಂದಿರುವ ಸಮಯದಲ್ಲಿ ಅದೇ ಜಾಗದಲ್ಲಿ ಇಂದಿಗೂ ಬಜ್ಪೆ ಪೇಟೆಯ ಕೊಳಚೆ ನೀರು ಹರಿಯುತ್ತಾ ಬರುತ್ತಿದ್ದು ಜೀವಕಾರಕವಾಗುತ್ತಾ ಬಂದಿದೆ. ಅಲ್ಲದೆ ಸಂತ್ರಸ್ತರು ಪಂ. ತೋರಿಸಿದ ಜಾಗದಲ್ಲಿ ಹಂದಿಯಂತೆ ಯತನಾಮಯ ಜೀವನ ಸಾಗಿಸುತ್ತಾ ಬಂದಿದ್ದಾರೆ.
ಇನ್ನೂ ಹಾಗೆ ಇದೆ ಆ ಬದುಕು:
ಬಜ್ಪೆ ತೊಟ್ಟಿಲ ಗುರಿ ದುರಂತಕ್ಕೆ ಒಂದು ವರ್ಷವಾಗುತ್ತಾ ಬಂದರೂ ತೊಟ್ಟಿಲ ಗುರಿ ಸಂತ್ರಸ್ತರ ಬದುಕಲ್ಲಿ ಬದಲಾವಣೆ ಬೀಸಲಿಲ್ಲ. ಇಂದಿಗೂ ಕೂಡಾ ಪಂಚಾಯತ್ ತೋರಿಸಿದ ಜಾಗದಲ್ಲಿ ಒಂದು ಕೋಣೆಯಲ್ಲಿ ಆರು ಮಂದಿ ಜೀವಿಸುತ್ತಾ ಹಂದಿಯ ಬದುಕು ಸಾಗಿಸುತ್ತಾ ಬಂದಿದ್ದಾರೆ.
ಪೊಕರ್ೋಡಿ ಹಾಗೂ ಪೊಲೀಸ್ಲೇನ್ ಜಾಗ:
ಸಂತ್ರಸ್ತರಿಗೆ ಮೊದಲು ಇಲಾಖೆ ತೋರಿಸಿದ್ದ ಜಾಗ ಪೊಕರ್ೋಡಿ. ಆದರೆ ಪೊಕರ್ೋಡಿಯಲ್ಲಿ ಮೂಲಭೂತ ಸೌಕರ್ಯ ಹಾಗೂ ಅಲ್ಲಿರುವುದು ಸ್ಮಶಾನ ಜಾಗವಾದ್ದರಿಂದ ಸಂತ್ರಸ್ತರು ಅಲ್ಲಿನ ಜಾಗದಲ್ಲಿ ವಾಸಿಸಲು ನಿರಾಕರಿಸಿದ್ದರು. ಆದರೆ ಸಂತ್ರಸ್ತರ ಬೇಡಿಕೆಯಂತೆ ಬಜ್ಪೆ ಸಮೀಪದ ಪೊಲೀಸ್ಲೇನ್ ಜಾಗದಲ್ಲಿ ವಾಸಿಸುವುದು ಅವರ ಕನಸಾಗಿತ್ತು. ಆದರೆ ಸಂತ್ರಸ್ತರ ಕುಟುಂಬದಲ್ಲಿ ನಾಲ್ಕು ಕುಟುಂಬಗಳು ಬಜ್ಪೆಯ ಪೊಕರ್ೋಡಿ ಜಾಗ ಆಗಬಹುದು ಎಂದು ಒಪ್ಪಿಗೆ ಸೂಚಿಸಿದೆ. ಆದರೆ ಉಳಿದ ಕುಟುಂಬಗಳು ಪೊಕರ್ೋಡಿ ಜಾಗಕ್ಕೆ ಅಸಮ್ಮತಿ ಸೂಚಿಸಿದ್ದರಿಂದ ಇಂದಿಗೂ ಜಾಗದ ವಿವಾದ ಪರಿಹಾರಗೊಂಡಿಲ್ಲ.
ಕೆಲವರು ಪೊಕರ್ೋಡಿ ಜಾಗಕ್ಕೆ ಸಮ್ಮತಿ ಸೂಚಿಸಿದರೆ ಇನ್ನುಳಿದವರು ಬಜ್ಪೆಯ ಪೊಲೀಸ್ಲೇನ್ ಜಾಗಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದ್ದರಿಂದ ಸಮಸ್ಯೆ ಬಿಗಡಾಯಿಸಿದ್ದರಿಂದ ಯಾರೂ ಕೂಡಾ ಪೊಕರ್ೋಡಿಗೆ ಇಲಾಖೆ ಸೂಚಿಸಿದ ಜಾಗದಲ್ಲಿ ವಾಸಿಸಲು ಮುಂದೆ ಬರುತ್ತಿಲ್ಲ. ಇಂದಿಗೂ ಕೂಡಾ ಸಂತ್ರಸ್ತರು ಪಂಚಾಯತ್ ಸೂಚಿಸಿದ ಕಟ್ಟಡಲ್ಲಿ ಹಂದಿಯ ರೀತಿಯಲ್ಲಿ ಬದುಕು ಸಾಗಿಸುತ್ತಾ ಬಂದಿದೆ.
ಸಂತ್ರಸ್ತರನ್ನು ಕೆಲವು ದಲಿತ ಸಂಘಟನೆಗಳು ವಿಭಜಿಸಲು ನೋಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಸಂಘಟನೆಯ ಒಂದು ಗುಂಪಿನ ಪ್ರಕಾರ ದಲಿತ ಸಂತ್ರಸ್ತರಿಗೆ ಪೊಕರ್ೋಡಿಯಲ್ಲಿ ಜಾಗ ಒದಗಿಸಿದರೆ ಅವರಿಗೆ ಮೂಲಭುತ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಪೊಲೀಸ್ ಲೇನ್ನಲ್ಲಿ ಜಾಗ ಒದಗಿಸಿದರೆ ಬಜ್ಪೆಯಲ್ಲಿ ಬಾರ್ ಹತ್ತಿರವೇ ಇರುವುದರಿಂದ ಅಲ್ಲಿನವರು ಕುಡಿತದ ದಾಸರಾಗುತ್ತಾರೆ ಎಂಬ ಅಭಿಪ್ರಾಯವಾಗಿದೆ.
ಇನ್ನೊಂದು ಪಂಗಡದ ಪ್ರಕಾರ ದಲಿತರಿಗೆ ಇಲಾಖೆ ಒದಗಿಸಿದ ಪೊಕರ್ೋಡಿಯಲ್ಲೇ ಜಾಗ ಒದಗಿಸಿದರೆ ಯಾವ ತೊಂದರೆಯೂ ಆಗುವುದಿಲ್ಲ. ಯಾಕೆಂದರೆ ಬಾರ್ ಹತ್ತಿರವಿರುವುದರಿಂದ ಜನ ಕುಡಿತದ ದಾಸರಾಗುತ್ತಾರೆ ಎಂಬುವುದಕ್ಕೆ ಆಧಾರವಿಲ್ಲ. ಆದ್ದರಿಂದ ಸಂತ್ರಸ್ತರಿಗೆ ಪೊಕರ್ೋಡಿಯಲ್ಲೇ ಜಾಗ ಒದಗಿಸಬೇಕು ಎಂದು ಆಗ್ರಹಿಸಿದ್ಸಾರೆ.
ಆದ್ದರಿಂದ ದಲಿತ ಸಂಘಟನೆಗಳಲ್ಲಿ ಎರಡು ಗುಂಪಾಗಿರುವುದರಿಂದ ದಲಿತರ ಸಮಸ್ಯೆ ಹಾಗೆಯೇ ಬಿಗಡಾಯಿಸಿದೆ. ಅವರು ಇಂದಿಗೂ ಪಂಚಾಯತ್ ಕಟ್ಟಡದಲ್ಲಿ ಯಾತನೆಯ ಬುಕನ್ನು ಸಾಗಿಸುತ್ತಾ ಬಂದಿದ್ದಾರೆ. ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದಿದ್ದರೂ ಸಂತ್ರಸ್ತರನ್ನು ಮನವೊಲಿಸಿ ಅವರಿಗೆ ಸೂಕ್ತ ಬದುಕು ನೀಡುವಲ್ಲಿ ಇಲಾಖೆ ವಿಫಲವಾಗಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ.

ಚಿತ್ರಗಳು: ಕಳೆದ ವರ್ಷ ದುರಂತ ನಡೆದಿದ್ದ ಸಂದರ್ಭದಲ್ಲಿ ತೆಗೆಯಲಾದ ಚಿತ್ರಗಳು (ಸಂಗ್ರಹಿತ ಚಿತ್ರ)

By Suddi9

Leave a Reply

Your email address will not be published. Required fields are marked *