ಬಂಟ್ವಾಳ: ಬ್ರಹ್ಮರಕೂಟ್ಲುವಿನ ಟೋಲ್ಗೇಟ್ನಲ್ಲಿ ದಾಂಧಲೆ ನಡೆಸಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಂಟ್ವಾಳ ಪುರಸಭೆಯ ಸದಸ್ಯ ಮಹಮ್ಮದ್ ಶರೀಫ್ ಸೋಮವಾರ ನಡೆದ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರೂ ಹಾಜರಿ ಪುಸ್ತಕದಲ್ಲಿ ಅವರ ಹಾಜರಾತಿ ದಾಖಲುಗೊಂಡು ಅಚ್ಚರಿ ಮೂಡಿಸಿದೆ.
ಗೈರು ಹಾಜರಾಗಿರುವ ಸದಸ್ಯನ ಹಾಜರಾತಿ ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡ ವಿಪಕ್ಷ ಸದಸ್ಯರು ಮಾಹಿತಿ ಹಕ್ಕಿನ ಮೂಲಕ ಹಾಜರಾತಿ ನಕಲನ್ನು ಪಡೆದುಕೊಂಡಿದ್ದು ಈ ಬಗ್ಗೆ ಮುಖ್ಯಾಧಿಕಾರಿಯ ವಿರುದ್ದ ಜಿಲ್ಲಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

1 (2)
ಬಂಟ್ವಾಳ ಪುರಸಭೆ ಒಟ್ಟು 23 ಮಂದಿ ಸದಸ್ಯ ಬಲ ಹೊಂದಿದೆ. ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ಶರೀಫ್ ಹಾಗೂ ವಿಪಕ್ಷ ಸದಸ್ಯ ದೇವದಾಸ್ ಶೆಟ್ಟಿ ಗೈರು ಹಾಜರಾಗಿದ್ದರು. ಮಧ್ಯಾಹ್ನದವರೆಗೆ ಸಭೆ ನಡೆದಿದ್ದು ಅದುವರೆಗೂ ಇಬ್ಬರೂ ಸದಸ್ಯರೂ ಬಂದಿರಲಿಲ್ಲ. ಆದರೆ ಹಾಜರಾತಿ ಪುಸ್ತಕದಲ್ಲಿ ಬಿ.ದೇವದಾಸ್ ಶೆಟ್ಟಿಯವರು ಮಾತ್ರ ಗೈರು ಹಾಜರಾಗಿದ್ದರೆ, ಮಹಮ್ಮದ್ ಶರೀಫ್ ಅವರ ಹೆಸರಿನ ಮುಂದೆ ಸಹಿ ಹಾಕುವ ಮೂಲಕ ಹಾಜರಾತಿ ತೋರಿಸಲಾಗಿದೆ. ಸಭೆ ಮುಗಿದ ಬಳಿಕ ಖುದ್ದು ಮಹಮ್ಮದ್ ಶರೀಫ್ ಪುರಸಭೆಗೆ ಆಗಮಿಸಿ ಪುರಸಭಾಧ್ಯಕ್ಷೆ ಸಮ್ಮುಖದಲ್ಲೇ ಸಹಿ ಹಾಕಿ ತೆರಳಿದ್ದಾರೆಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ. ಇದೀಗ ಈ ಎಡವಟ್ಟಿನಿಂದ ಪುರಸಭೆಯ ಮುಖ್ಯಾಧಿಕಾರಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸದಸ್ಯತ್ವ ರದ್ದು:
ಸಾಮಾನ್ಯ ಸಭೆಗೆ ಸತತ ಮೂರು ಬಾರಿ ಗೈರು ಹಾಜರಾದಲ್ಲಿ ಆ ಸದಸ್ಯನ ಸದಸ್ಯತ್ವ ರದ್ದಾಗುತ್ತದೆ. ಮಹಮ್ಮದ್ ಶರೀಪ್ ಅವರು ಈಗಾಗಲೇ ಒಂದು ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದಾರೆ. ಇದು ಅವರ ಗೈರುಹಾಜರಾತಿಯ ಎರಡನೇ ಸಭೆಯಾಗಿದೆ. ಟೋಲ್ಗೇಟ್ ದಾಂದಲೆ ಪ್ರಕರಣದಲ್ಲಿ ಅವರು ಇನ್ನೂ ಜಾಮೀನು ಪಡೆಯದೇ ಇರುವುದರಿಂದ ಪೊಲೀಸರಿಗೂ ಬೇಕಾಗಿದ್ದಾರೆ. ಇದೀಗ ಎರಡನೇ ಸಾಮಾನ್ಯ ಸಭೆ ಮುಗಿದ ಬಳಿಕ ಗುಪ್ತವಾಗಿ ಪುರಸಭೆಗೆ ಆಗಮಿಸಿ ಅಧ್ಯಕ್ಷರ ಸಮ್ಮುಖದಲ್ಲೇ ಸಭಾ ನಡಾವಳಿಯ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿರುವುದು ಹೊಸ ವಿವಾದವನ್ನು ಸೃಷ್ಟಿ ಮಾಡಿದೆ.
ಅಸಹಾಯಕ ಪೊಲೀಸರು
ಟೋಲ್ಗೇಟ್ ದಾಂದಲೇ ಪ್ರಕರಣದ ಬಳಿಕ ಮಹಮ್ಮದ್ ಶರೀಫ್ ಬಿ.ಸಿ.ರೋಡು ಪರಿಸರದಲ್ಲೇ ಪ್ರತಿನಿತ್ಯ ತಿರುಗಾಡುತ್ತಿದ್ದರೂ ಬಂಟ್ವಾಳ ನಗರ ಪೊಲೀಸರು ಮಾತ್ರ ಆತನ ಬಂಧನಕ್ಕೆ ಮುಂದಾಗದಿರುವುದು ವಿಪಯರ್ಾಸ. ಪ್ರತೀ ಬಾರಿಯೂ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದಷ್ಟೇ ಉತ್ತರ ನೀಡುತ್ತಿರುವ ಪೊಲೀಸರು ಇತ್ತೀಚೆಗಷ್ಟೇ ನಡೆದ ಸಹೋದರಿಯ ವಿವಾಹದಲ್ಲಿ ಆತ ಪಾಲ್ಗೊಂಡಿದ್ದರೂ, ರಹಸ್ಯವಾಗಿ ಪುರಸಭೆಗೆ ಬಂದು ಸಹಿ ಹಾಕಿ ತೆರಳಿದ್ದರೂ ಪೊಲೀಸರಿಗೆ ಮಾತ್ರ ಈ ಬಗ್ಗೆ ಯಾವುದೇ ಸುಳಿವು ದೊರಕದಿರುವುದು ಆಶ್ಚರ್ಯ ಉಂಟು ಮಾಡಿದೆ.

By Suddi9

Leave a Reply

Your email address will not be published. Required fields are marked *